ಬೆಂಗಳೂರು: ರಾಜ್ಯದ 180 ಕ್ಷೇತ್ರಗಳಲ್ಲಿ ಕಳೆದೊಂದು ತಿಂಗಳಿಂದ ನಡೆದ ಜೆಡಿಎಸ್ ಜನತಾ ಜಲಧಾರೆಗೆ ತೆರೆ ಬಿದಿದ್ದೆ. ಬೆಂಗಳೂರಿನ ನೆಲಮಂಗಲದ ಬಾವಿಕೆರೆ ಸಮೀಪ ನಡೆದ ಬೃಹತ್ ಸಮಾರೋಪ ಸಮಾರಂಭಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಿದ್ರು. 65 ಎಕರೆಯಲ್ಲಿ ನಡೆದ ಬೃಹತ್ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ಜನಸಾಗರವೇ ಹರಿದುಬಂದಿತ್ತು.
ಸಮಾರೋಪ ಸಮಾರಂಭದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಹಲವು ದಳ ನಾಯಕರು ಪಾಲ್ಗೊಂಡಿದ್ರು.
ವಾರಾಣಸಿ ಮಾದರಿಯ ಗಂಗಾರತಿ, ಗಂಗಾಪೂಜೆ
ಸುಮಾರು 4 ಸಾವಿರ ಅಡಿಯ ಬೃಹತ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದ ಕೇಂದ್ರಬಿಂದು ಗಂಗಾರತಿ ಹಾಗೂ ಗಂಗಾ ಪೂಜೆ. ಇದಕ್ಕಾಗಿ ವಾರಣಾಸಿಯಿಂದ 20 ಪಂಡಿತರು ಬಂದಿದ್ದಾರೆ. ರಾಜ್ಯದ 180 ಕ್ಷೇತ್ರಗಳಲ್ಲಿ ಸಂಚರಿಸಿದ್ದ ಜಲಧಾರೆಯ ವಾಹನಗಳು, ವಿವಿಧ ನದಿಗಳಿಂದ ಗಂಗಾಜಲ ಸಂಗ್ರಹಿಸಿ ಹೊತ್ತು ತಂದಿದ್ದವು.
ಜಲಧಾರೆ ಸಮಾರೋಪದಲ್ಲಿ ಚುನಾವಣಾ ಕಹಳೆ
ಇನ್ನು, ಜನತಾ ಜಲಧಾರೆಯ ಸಮಾರೋಪದಲ್ಲಿ ದಳಪತಿಗಳು ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ದೇವೇಗೌಡರ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ ಕೊಟ್ಟಂತಹ ಪ್ರಾಮುಖ್ಯತೆ ಪ್ರಸ್ತಾಪಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಒಟ್ಟಿನಲ್ಲಿ ಜೆಡಿಎಸ್‌ನ ಜನತಾ ಜಲಧಾರೆ ಮುಕ್ತಾಯವಾಗಿದ್ದು, ಮುಂದಿನ ಎಲೆಕ್ಷನ್ ಪಕ್ಷವನ್ನ ಅಧಿಕಾರಕ್ಕೆ ತರೋದಕ್ಕೆ ದಳಪತಿಗಳು ಪ್ಲಾನ್ ಮಾಡ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post