ನಿನ್ನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ವಿರುದ್ಧ 54 ರನ್ ಗಳಿಂದ ಸೋಲನ್ನ ಕಂಡಿತು. ಹೀಗಾಗಿ ಪ್ಲೇ-ಆಫ್‌ಗೆ ಅರ್ಹತೆ ಪಡೆಯಬೇಕಾದರೆ ಮುಂದಿನ ಪಂದ್ಯವನ್ನ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಜೊತೆಗೆ ಆರ್ಸಿಬಿಗೆ ಲಕ್ನ ಬೆಂಬಲವೂ ಬೇಕಾಗಿದೆ.
‘ಮೊದಲ ಬೌಲರ್’
ಇನ್ನು ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ಬೌಲರ್ ಜೋಶ್ ಹೇಜಲ್ವುಡ್, ತುಂಬಾ ದುಬಾರಿಯಾದರು. ತಮ್ಮ ಕೋಟಾದ 4 ಓವರ್ಗಳಲ್ಲಿ 64 ರನ್ಗಳನ್ನ ನೀಡಿ ಆರ್ಸಿಬಿ ಅಭಿಮಾನಿಗಳ ಪಾಲಿಗೆ ದುಸ್ವಪ್ನವಾಗಿ ಕಾಡಿದರು. ಅಲ್ಲದೇ ಐಪಿಎಲ್ ಪಂದ್ಯ ಒಂದರಲ್ಲಿ ಆರ್ಸಿಬಿ ಪರ ಅತೀ ಹೆಚ್ಚು ರನ್ ಹೊಡೆಸಿಕೊಂಡ ‘ಮೊದಲ ಬೌಲರ್’ ಅನ್ನೋ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
2016ರಲ್ಲಿ ಶೇನ್ ವ್ಯಾಟ್ಸನ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 61ರನ್ ಹೊಡೆಸಿಕೊಂಡಿದ್ದರು. 2019ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೌಥಿ 61ರನ್ಗಳನ್ನ ಹೊಡೆಸಿಕೊಂಡಿದ್ದರು. ಈ ವರ್ಷ ಹೇಜಲ್ವುಡ್ ಅವರನ್ನ 7.75 ಕೋಟಿಗೆ ಆರ್ಸಿಬಿ ಖರೀದಿ ಮಾಡಿದೆ. ಒಟ್ಟು 9 ವಿಕೆಟ್ಗಳನ್ನ ಕಿತ್ತಿರುವ ಅವರು ಅತೀ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ 17ನೇ ಸ್ಥಾನದಲ್ಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post