ಕೊರೊನಾ ಕಡಿಮೆಯಾಗುತ್ತಿದ್ದಂತೆಯೇ ಚಿತ್ರರಂಗದಲ್ಲಿ ಚಟುವಟಿಕೆಗಳು ಜೋರಾಗಿ ನಡೆಯುತ್ತಿದೆ. ಆ ಸಾಲಿಗೆ ಹೊಸಬರ ಹೆಸರಿಡದ ಚಿತ್ರವೊಂದರ ಮಹೂರ್ತ ಸಮಾರಂಭವು ವಿಶ್ವ ತಾಯಂದರ ದಿನದಂದು ರಾಜಾಜಿನಗರದ 5ನೇ ಬ್ಲಾಕ್‌ದಲ್ಲಿರುವ ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ಸರಳವಾಗಿ ನಡೆಯಿತು. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಬಿಲ್ಡರ್ ಜಿ.ಎನ್.ಶ್ರೀಧರ್‌ರೆಡ್ಡಿ ಕ್ಯಾಮರಾಗೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ಹಲವು ನಿರ್ದೇಶಕರುಗಳ ಬಳಿ ಅನುಭವ ಪಡೆದುಕೊಂಡಿರುವ ಪಾವಗಡ ಮೂಲದ ಧೀವಶರ್ಮ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ,
ಸಂಭಾಷಣೆ ಬರೆದು ಮೊದಲ ಬಾರಿ ಆಕ್ಷನ್ ಕಟ್ ಹೇಳುವ ಜತೆಗೆ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಪ್ರಸನ್ನಕುಮಾರ್.ಪಿ.ವಿ ಮತ್ತು ನವೀನ್‌ಕುಮಾರ್ ಬಂಡವಾಳ ಹೂಡುತ್ತಿದ್ದು, ಇವರೊಂದಿಗೆ ಮತ್ತಿಬ್ಬರು ಸೇರಿಕೊಳ್ಳಲಿದ್ದಾರೆ. ತಂಡವು ಹೊಸತು ಆಗಿದ್ದರೂ ಹಿರಿಯ ಕಲಾವಿದರು ಅಭಿನಯಿಸುತ್ತಿರುವುದು ವಿಶೇಷ.
ನಿರ್ದೇಶಕರು ಗ್ರಾಮೀಣ ಭಾಗದವರಾಗಿದ್ದರಿಂದ ಕಥೆಗೆ ಹಳ್ಳಿಯ ಹಿನ್ನಲೆಯನ್ನು ತೆಗೆದುಕೊಂಡಿದ್ದಾರೆ. ಹಳ್ಳಿಯಲ್ಲಿ ಪ್ರೀತಿ ಯಾವ ತರಹ ಹುಟ್ಟಿಕೊಳ್ಳುತ್ತದೆ. ಏನೂ ಇಲ್ಲದೆ ಇರುವವರು, ಎಲ್ಲವು ಇದ್ದವರು ಪ್ರೀತಿ ಮಾಡಿದರೆ ಏನಾಗುತ್ತದೆ. ಇದರಿಂದ ಮುಂದಾಗುವ ಪರಿಣಾಮಗಳನ್ನು ಹೇಗೆ ಎದುರಿಸುತ್ತಾರೆ ಎಂಬಂಥ ಅಂಶಗಳು ಚಿತ್ರದಲ್ಲಿ ಮೂಡಿಬರುತ್ತಿದೆ. ಮದುಮಗಳು ಧಾರಾವಾಹಿಯ ಭವಿಷ್ ನಾಯಕನಾಗಿ ಸೋಮಾರಿ ಹುಡುಗನ ಪಾತ್ರದಲ್ಲಿ ಹಿರಿತೆರೆಗೆ ರೂಪಾಂತರಗೊಳ್ಳುತ್ತಿದ್ದಾರೆ.
ಜಾರ್ಖಂಡ್‌ನ ಪ್ರಜ್ಘನಯನ್ ಗೌಡರ ಮಗಳಾಗಿ ನಾಯಕಿ. ಇವರೊಂದಿಗೆ ಕೆಜಿಎಫ್ ಖ್ಯಾತಿಯ ಕೃಷೋಜಿರಾವ್, ವೀಣಾ ಸುಂದರ್
ಉಳಿದಂತೆ ರಮೇಶ್‌ಭಟ್, ಟೆನ್ನಿಸ್‌ಕೃಷ್ಣ, ಲಂಕೇಶ್‌ರಾವಣ, ಸಂತನಟರಾಜ್, ಮೈಕೋ ನಾಗರಾಜ್, ಅರುಣ್ ಕುಮಾರ್, ರಾಧಿಕ ಭಟ್, ಹುಳಿಯಾರ್ ಗೌಡಿ, ಶ್ರೀನಿವಾಸ್ ಪಾವಗಡ, ಭುವನೇಶ್ ಹಾಸನ್, ದಾಸೇಗೌಡ ಮಂಡ್ಯಾ, ಕಾಮಿಡಿ ಕಿಲಾಡಿಗಳುದಲ್ಲಿ ಗುರುತಿಸಿಕೊಂಡಿರುವ ಸಂಜು ಬಸ್ಯ, ಶಿವು, ರಾಕೇಶ್ ಮುಂತಾದವರು ಅಭಿನಯಿಸುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ರಾಮ್‌ಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಗೌರಿ ವೆಂಕಟೇಶ್, ಸಾಹಸ ಡಿಫರೆಂಟ್ ಡ್ಯಾನಿ, ನೃತ್ಯ ಹೈಟ್ ಮಂಜು-ಸುರೇಶ್, ಕಾಸ್ಟ್ಯೂಮ್ ವಿಜಯ್‌ಕುಮಾರ್ ಚಿತ್ರಕ್ಕಿದೆ.
ಮಂಡ್ಯದ ದುದ್ದಿ, ಮೈಸೂರು, ಪಾವಗಡ ಹಾಗೂ ಉತ್ತರ ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣವನ್ನು ಮೂರು ಹಂತಗಳಲ್ಲಿ
ಮುಗಿಸಲು ಯೋಜನೆ ರೂಪಿಸಿಕೊಂಡಿದೆ. ಇನ್ನು ಒಂದು ವಾರದಲ್ಲಿ ಶೀರ್ಷಿಕೆ ಇಡಲಾಗುತ್ತದಂತೆ. ಸದ್ಯಕ್ಕೆ ದುರ್ಗಾ ಪರಮೇಶ್ವರಿ ಪ್ರೊಡಕ್ಷನ್ ನಂ.೧ ಹೆಸರಿನಲ್ಲಿ ಪೂಜೆಯನ್ನು ನೆರೆವೇರಿಸಿಕೊಂಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post