ಕೆಜಿಎಫ್ ಚಾಪ್ಟರ್ 2 ನೋಡಿ ಹೊರ ಬರೋ ಎಲ್ಲಾ ಪ್ರೇಕ್ಷಕರಲ್ಲೂ ಕಾಡೋ ಪ್ರಶ್ನೆ ಬರುತ್ತಾ ಕೆಜಿಎಫ್ ಚಾಪ್ಟರ್ 3 ಅಂತ.. ಈ ಒಂದು ಪ್ರಶ್ನೆ ಕಳೆದ ಏಪ್ರಿಲ್ 14ನೇ ತಾರೀಖಿನಿಂದ ಎಲ್ಲಡೆ ಹಬ್ಬಿ ಹಾರಾಡುತ್ತಿದೆ.. ಹೊಂಬಾಳೆ ಪಿಲಂಸ್ ಕೆಜಿಎಫ್ ಚಿತ್ರತಂಡಕ್ಕೆ ಬರುತ್ತಾ ಕೆಜಿಎಫ್ 3 ಅಂತ ಕೇಳಿದಾಗೆಲ್ಲ ಒಂದುಬೆಣ್ಣೆಯಲ್ಲಿ ಕೂದಲು ತೆಗೆದಂತೆ ಉತ್ತರ ಕೊಟ್ಟು ಜಾರಿ ಕೊಳ್ತಾ ಬಂದಿದ್ದಾರೆ.. ಆದರೆ ಈಗ ಬಿಟೌನ್ ಅಂತರ ಜಾಲತಾಣಗಳು ಬರುತ್ತೆ ಕೆಜಿಎಫ್ 3 ಅಂತ ಜಾಲಾಡುತ್ತಿವೆ..
ಕೋಲಾರ ಗೋಲ್ಡ್ ಫಿಲ್ಡ್ ಚಾಪ್ಟರ್ 3 ಬರುತ್ತೆ ಅಂತ ಬಿಟೌನ್ ವೆಬ್ ಪೋರ್ಟಲ್ ಗಳು ಸುದ್ದಿ ಪ್ರಕಟಣೆ ಮಾಡುತ್ತಿವೆ.. ಬಾಲಿವುಡ್ ಸುದ್ದಿ ಜಾಲತಾಣಗಳ ಪ್ರಕಾರ ಸಲಾರ್ ಸಿನಿಮಾದ ಶೂಟಿಂಗ್ ಮುಗಿಯುತ್ತಿದಂಗೆ ಕೆಜಿಎಫ್ ಚಾಪ್ಟರ್ 3 ಸಿನಿಮಾದ ಶೂಟಿಂಗ್ ಶುರುವಾಗಲಿದೆ ಅಂತ ಹೇಳಲಾಗುತ್ತಿದೆ.. ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಬಾಹುಬಲಿ ಖ್ಯಾತಿಯ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯಲ್ಲಿ ಸಲಾರ್ ಸಿನಿಮಾದ ಶೂಟಿಂಗ್ ಹೈದ್ರಾಬಾದ್ನಲ್ಲಿ ನಡೆಯುತ್ತಿದ್ದು ಈಗಾಗಲೇ 35ರಿಂದ 40 ಪರೆಸೆಂಟ್ ಶೂಟಿಂಗ್ ಮುಕ್ತಾಯಗೊಳಿಸಲಾಗಿದೆ..
ಸಲಾರ್ ಸಿನಿಮಾದ ಶೂಟಿಂಗ್ ಈ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳು ಪೂರ್ತಿಗೊಳಿಸುವ ಯೋಜನೆಯಲ್ಲಿ ಪ್ರಶಾಂತ್ ನೀಲ್ ಬಳಗ ಹಗಲಿರುಳು ಶ್ರಮಿಸುತ್ತಿದೆ.. ಸಲಾರ್ ಸಿನಿಮಾ ಶೂಟಿಂಗ್ ಆಗುತ್ತಿದಂತೆ ಅಕ್ಟೋಬರ್ ತಿಂಗಳಿನಿಂದ ಕೆಜಿಎಫ್ ಚಾಪ್ಟರ್ 3 ಸಿನಿಮಾದ ಶೂಟಿಂಗ್ ಶುರು ಮಾಡುತ್ತೇವೆ ಎಂದು ನಿರ್ಮಾಪಕ ವಿಜಯ ಕಿರಗಂದೂರು ಮಾತನಾಡಿದ್ದಾರೆ ಎನ್ನಲಾಗುತ್ತಿದೆ..
ಚಾಪ್ಟರ್ 3 ಸಿನಿಮಾದಲ್ಲಿ ಮತ್ತಷ್ಟು ವಿಶೇಷ ಕ್ಯಾರೆಕ್ಟರ್ಗಳನ್ನ ಸೃಷ್ಟಿ ಮಾಡಿ ಶೂಟಿಂಗ್ ಮಾಡೋ ಯೋಜನೆ ನೀಲ್ ನಿರ್ದೇಶಕ ಬಳಗಕ್ಕಿದೆಯಂತೆ.. 2024ರಂದು ಕೆಜಿಎಫ್ ಚಾಪ್ಟರ್ 3 ವಿಶ್ವದ್ಯಾಂತ ರಿಲೀಸ್ ಮಾಡೋ ಯೋಜನೆಯಲ್ಲಿಯೂ ಚಿತ್ರತಂಡ ಇದೆ ಎನ್ನುತ್ತಿದೆ ಬಿಟೌನ್ ಮೂಲಗಳು.. ಕೆಜಿಎಫ್ 3 ಬರುತ್ತೋ ಬರಲ್ವೋ ಗೊತ್ತಿಲ್ಲ.. ಆದ್ರೆ ಕನ್ನಡದ ಒಂದು ಸಿನಿಮಾಕ್ಕೆ ಬಾಲಿವುಡ್ ಮಂದಿ ಈ ಪಾಟಿ ಮಾತಾಡೋ ತರ ಆಗಿರೋದು ನಿಜಕ್ಕೂ ಹೆಮ್ಮೆಯ ಹಿರಿಮೆಯ ವಿಚಾರ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post