ಸತತ ವೈಫಲ್ಯದ ಸುಳಿಗೆ ಸಿಲುಕಿರುವ ವಿರಾಟ್ ಕೊಹ್ಲಿಗೆ, ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸಲಹೆಯೊಂದನ್ನ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರೋ ವಾನ್, ವಿರಾಟ್ ಕೊಹ್ಲಿ 10 ವರ್ಷ ಹಿಂದಿನ ಮನಸ್ಥಿತಿಯನ್ನು ನೆನೆದು ಆಡಬೇಕು. ಮದುವೆಯಾಗಿದೆ, ಮಕ್ಕಳಾಗಿದೆ. ಜವಾಬ್ದಾರಿ ಹೆಚ್ಚಾಗಿದೆ ಅನ್ನೋದನ್ನ ಮರೆತು ಕೇವಲ ಆಟವನ್ನಷ್ಟೆ ಆನಂದಿಸಬೇಕು ಎಂದು ಹೇಳಿದ್ದಾರೆ. ತಮ್ಮ ವಯಸ್ಸು, ಸಾಧನೆ ಬದಿಗೊತ್ತಿ ಕಣಕ್ಕಿಳಿಯಬೇಕು ಎಂದು ಹೇಳಿದ್ದಾರೆ.
ಐಪಿಎಲ್ 2022ರ ಆವೃತ್ತಿಯಲ್ಲಿ ಇದುವರೆಗೂ 12 ಪಂದ್ಯಗಳನ್ನು ಆಡಿರುವ ಕೊಹ್ಲಿ, 113.46ರ ಸ್ಟ್ರೇಕ್ ರೇಟ್ನೊಂದಿಗೆ 236 ರನ್ ಸಿಡಿಸಿದ್ದು, ಇದರಲ್ಲಿ ಒಂದು ಅರ್ಧ ಶತಕ ಕೂಡ ಸೇರಿದೆ. ಅಲ್ಲದೇ ಈ ಟೂರ್ನಿಯಲ್ಲಿ ಕೊಹ್ಲಿ ಬಾರಿ ಗೋಲ್ಡನ್ ಡಕೌಟ್ ಆಗಿದ್ದಾರೆ. ಈ ನಡುವೆ ಪ್ರತಿಕ್ರಿಯೆ ನೀಡಿರೋ ಮೈಕಲ್ ವಾನ್, ಕ್ಯಾಪ್ಟನ್ ಫಾಫ್ ಡುಪ್ಲೆಸಿಸಿ ಅವರು ಕೊಹ್ಲಿಗೆ ಸಲಹೆ ನೀಡಿದ್ದಾರೆ ಎಂದು ತಿಳಿಯುತ್ತೇನೆ. ಸುಮ್ಮನೆ ಫೀಲ್ಡ್ಗೆ ಎಂಟ್ರಿ ಕೊಟ್ಟು ಮೊದಲ 10 ಎಸೆತಗಳನ್ನು ಆನಂದಿಸಬೇಕು. ಆ ಬಳಿಕ ಬಿಗ್ ಇನ್ನಿಂಗ್ಸ್ ಆಗಲಿದೆ ಎಂದು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post