ವಿರಾಟ್ ಕೊಹ್ಲಿ ಕಳಪೆ ಫಾರ್ಮ್ನಿಂದ ಹೊರಬರಲು ಪಾಕ್ ಕ್ರಿಕೆಟಿಗ ಪ್ರಾರ್ಥಿಸಿದ್ದಾರೆ. ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಈ ಬಗ್ಗೆ ಮಾತನಾಡಿದ್ದು, ಕೊಹ್ಲಿ ಮತ್ತೆ ತಮ್ಮ ಹಳೆಯ ಖದರ್ಗೆ ಮರಳಲು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಕೊಹ್ಲಿ ಒಬ್ಬ ಚಾಂಪಿಯನ್ ಆಟಗಾರ. ಆದ್ರೆ ಸದ್ಯ ಅವರು ಎದುರಿಸ್ತಿರೋ ಕೆಟ್ಟ ಪರಿಸ್ಥಿತಿ ಬಗ್ಗೆ ಏನನ್ನೂ ಹೇಳಲಾರೆ. ಇದರ ನಡುವೆಯೂ ಅವರು ಫಾರ್ಮ್ಗೆ ಮರಳಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಏಕೆಂದ್ರೆ ಅವರು ಕಠಿಣ ಪರಿಶ್ರಮ ಆಟಗಾರ. ಅವರು ಕಂಬ್ಯಾಕ್ ಮಾಡ್ತಾರೆ ಎಂಬ ವಿಶ್ವಾಸ ಇದೆ.
ಪ್ರತಿಯೊಬ್ಬ ಆಟಗಾರ ಕೂಡ ಇಂತಹ ಹಂತವನ್ನು ನೋಡ್ತಾರೆ. ಒಳ್ಳೆ ಸಮಯ, ಕೆಟ್ಟ ಸಮಯ ಅಂತ ಇರುತ್ತದೆ. ವಿಶ್ವ ಕ್ರಿಕೆಟ್ನಲ್ಲಿ ಶತಕಗಳನ್ನು ಸಿಡಿಸಿದ್ದ ದಿಗ್ಗಜ ಆಟಗಾರರು ಶೂನ್ಯಕ್ಕೂ ಔಟಾಗಿದ್ದಾರೆ. ಇದು ಜೀವನದ ಚಕ್ರ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post