ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಮುಂದಿನ ಸಿನಿಮಾ ‘ಕಭಿ ಈದ್ ಕಭಿ ದಿವಾಳಿ’ ಕುರಿತು ಅಭಿಮಾನಿಗಳಿಗೆ ಬಿಗ್ ಆಪ್ಡೇಟ್ ನೀಡಿದ್ದು, ಹೊಸ ಸಿನಿಮಾದ ಶೂಟಿಂಗ್ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಸಿನಿಮಾದಲ್ಲಿ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ ಲೀಡ್ ರೋಲ್ನಲ್ಲಿ ನಟಿಸುತ್ತಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ.
ಮುಂಬೈನ ವಿಲೇ ಪಾರ್ಲೆ ನಲ್ಲಿ ನಿರ್ಮಾಣ ಮಾಡಿರುವ ವಿಶೇಷ ಸೆಟ್ನಲ್ಲಿ ಸಲ್ಮಾನ್ ಖಾನ್ರ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಫರ್ಹಾದ್ ಸಂಜಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಶೂಟಿಂಗ್ ಕುರಿತಂತೆ ಮಾಹಿತಿ ಹಂಚಿಕೊಂಡಿರೋ ನಟಿ ಪೂಜಾ ಹೆಗ್ಡೆ, ಸಲ್ಮಾನ್ ಖಾನ್ರ ಕೈಬಳೆ (ಬ್ರಸೆಲ್ಟ್) ಧರಿಸಿರೋ ಫೋಟೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿ ಶೂಟ್ ಆರಂಭವಾಯ್ತು ಎಂದು ಬರೆದುಕೊಂಡಿದ್ದಾರೆ.
View this post on Instagram
ಸಲ್ಮಾನ್ ಖಾನ್ ಅವರ ಸೀನ್ಗಳನ್ನು ಚಿತ್ರತಂಡ ಸದ್ಯ ಶೂಟ್ ಮಾಡುತ್ತಿದ್ದು, ನಟ ವೆಂಕಟೇಶ್ ಮುಂದಿನ ಹಂತದಲ್ಲಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆ್ಯಕ್ಷನ್ ದೃಶ್ಯಗಳನ್ನು ಚಿತ್ರತಂಡ ಶೂಟ್ ಮಾಡುತ್ತಿದ್ದು ಚಿತ್ರದಲ್ಲಿ ವೆಂಕಟೇಶ್ ಕೂಡ ನಟಿಸುತ್ತಿರುವ ಕಾರಣ ತೆಲುಗು ಸಿನಿಮಾ ಇಂಡಸ್ಟ್ರಿ ಸೇರಿದಂತೆ ದಕ್ಷಿಣ ಭಾರತದ ಜನರನ್ನು ರಿಚ್ ಆಗಲು ಸುಲಭ ಸಾಧ್ಯವಾಗಲಿದೆ ಅಂತ ಸಿನಿ ತಂಡ ಯೋಜಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಿನಿಮಾ 2022ರ ಡಿಸೆಂಬರ್ 30ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಸಿನಿಮಾ ಕುರಿತಂತೆ ಆಪ್ಡೇಟ್ ನೀಡಿರೋ ಸಲ್ಮಾನ್ ಖಾನ್ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದ್ದು, ಪೋಸ್ಟರ್ನಲ್ಲಿ ರಾಡ್ ಹಿಡಿದುಕೊಂಡು ಲುಕ್ ಕೊಟ್ಟಿರೋ ಸಲ್ಮಾನ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಕೆಜಿಎಫ್ ಸಿನಿಮಾದ ರಾಕಿ ಬಾಯ್ ಲುಕ್ನಂತೆಯೇ ಇದೇ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರತಿಕ್ರಿಯೆ ನೀಡಿದ್ದು, ಸಲ್ಮಾನ್ ಭಾಯ್, ರಾಕಿ ಭಾಯ್ ಹೇರ್ಸ್ಟೈಲ್ ಕಾಪಿ ಮಾಡಿದ್ರಾ ಅಂತ ಪ್ರಶ್ನೆ ಮಾಡಿದ್ದಾರೆ.
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post