ಚಿತ್ರಪ್ರೇಮಿಗಳೇ ಈ ಸ್ಟೋರಿಯನ್ನ ನೋಡಿದ್ರೆ ನಿಜಕ್ಕೂ ನಿಮಗೆ ಓ ಮೈ ಗಾಡ್ ಎಂಥ ಅನ್ಯಾಯವಪ್ಪ ಇದು ಎಂದು ಅನ್ನಿಸಿದೆ ಇರಲಾಗದು.. ಎಂಥಹ ಸೌಭಾಗ್ಯ ನಮ್ಮ ಪಾಲಿಗೆ ಮಿಸ್ ಆಯ್ತಾಪ್ಪ ಅಂತ ಫೀಲ್ ಆಗುತ್ತೆ.. ಟಗರು ಕನ್ನಡ ಸಿನಿಮಾ ರಂಗದ ಸೂಪರ್ ಹಿಟ್ ಸಿನಿಮಾ.. ಇದರ ಮುಂದುವರೆದ ಸೀಕ್ವೆಲ್ಗೆ ಪ್ಲಾನ್ ಮಾಡಲಾಗಿತ್ತು.. ಆದ್ರೆ ಮೇಲೆ ಕುಳಿತಿರುವ ಡೈರೆಕ್ಟರ್ಗಳ ಡೈರೆಕ್ಟರ್ ಸ್ಕ್ರೀನ್ ಪ್ಲೇನೇ ಬೇರೆ ಆಗಿತ್ತು..
ಎಲ್ಲವೂ ಅಂದು ಕೊಂಡಂಗೆ ಆಗಿ ಬಿಟ್ರೆ ಈ ಬಣ್ಣದ ಭೂಮಿಯಲ್ಲಿ ಯಾವುದಕ್ಕೂ ಬೆಲೆ ಇಲ್ಲ, ನೆಲೆ ಇಲ್ಲ.. ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಹಾಗೂ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಇಬ್ಬರು ಒಂದೇ ಸ್ಕ್ರೀನ್ ಮೇಲೆ ಪ್ರಜ್ವಲಿಸುವಂತಹ ಸ್ಟೋರಿ ಅದು. ಒಂದು ಹಂತದಲ್ಲಿ ನಾನಾ ನೀನಾ ಅನ್ನೋ ಹಂತಕ್ಕೆ ಹೋಗಿ ರಂಜಿಸೋ ಸ್ಟೋರಿ ಅದು. ಅಂದರೆ ಏನ್ ಮಾಡೋದು ಭೂಮಿ ಮೇಲೆ ಇರೋ ಡೈರೆಕ್ಟರ್ಸ್ ಸ್ಕ್ರೀನ್ ಪ್ಲೇಗಿಂತ ಮೇಲಿನವನ ಸ್ಕ್ರೀನ್ ಪ್ಲೇ ಹೇವಿ ಸ್ಟ್ರಾಂಗು, ಚೂರು ಯಾಮಾರಿದ್ರು ರಾಂಗು..
‘‘ಟಗರು’’ ಸಿನಿಮಾ ನಿಮಗೆಲ್ಲ ಗೊತ್ತೆ ಇರಬೇಕಲ್ಲ. ದುನಿಯಾ ಸೂರಿ ಕಲ್ಪನೆಯ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್, ಡಾಲಿ ಧನಂಜಯ್, ವಸಿಷ್ಠ ಸಿಂಹ ನಟನೆಯ ಸೂಪರ್ ಹಿಟ್ ಸಿನಿಮಾ. ಮೊದಲು ‘‘ಟಗರು’’ ಅಂತ ಟೈಟಲ್ ಇಟ್ಟು ಆಮೇಲೆ ಸ್ಟೋರಿ , ಸ್ಕ್ರೀನ್ ಪ್ಲೇ , ಡೈಲಾಗ್ಸ್ , ಮ್ಯೂಸಿಕ್ ಸಿದ್ಧವಾಗಿ ಪ್ರಸಿದ್ಧವಾದ ಸಿನಿಮಾ.
ಟಗರು-2 ಚಿತ್ರದಲ್ಲಿ ಪೊಲೀಸ್ ಆಗಬೇಕಿತ್ತು ರಾಜರತ್ನರು!
ಪೊಲೀಸ್ ಪಾತ್ರದಲ್ಲಿ ಗನ್ ಹಿಡಿದು ಟಗರು ಶಿವನಾಗಿ ಶಿವಣ್ಣ ಎಂಟ್ರಿಕೊಟ್ಟಾಗ ನೋಡುಗರಿಗೆ ಥ್ರಿಲ್ಲೋ ಥ್ರಿಲ್ಲು.. ಟಗರು ಸಿನಿಮಾದ ಕಥೆ , ಚಿತ್ರಕಥೆ , ಪಾತ್ರವರ್ಗಗಳು , ಚರಣ್ ರಾಜ್ ಮ್ಯೂಸಿಕ್ , ಮಾಸ್ತಿ ಡೈಲಾಗ್ಸ್ ಎಲ್ಲವೂ ಚಿತ್ರಪ್ರೇಮಿಗಳ ಮನಸಿನಲ್ಲಿ ಇಷ್ಟವಾಗಿ ಕನಸು ಮನಸಿನಲ್ಲಿ ದಷ್ಟ ಪುಷ್ಟವಾದ್ವು.. ಟಗರು ಸಕ್ಸಸ್ ಫುಲ್ ಸಿನಿಮಾ ಆಯ್ತು.. ಇದೆ ಸಕ್ಸಸ್ ಅನ್ನ ಮುಂದುವರೆಸೋಣ ಅಂತ ಡಿಸೈಡ್ ಆದ ಟಗರು ಟೀಮ್, ಪಾರ್ಟ್ 2 ಮಾಡೋಣ ಅಂತ ಯೋಚಿಸಿದ್ರು.. ಟಗರು 2 ಮಾಡಿದ್ರೆ ಇನ್ಯಾವ ಸ್ಟೋರಿನಾ ತೇರೆಯ ಮೇಲೆ ತರಬಹುದು ? ಮತ್ಯಾವ ಸ್ಟಾರ್ ನಟನನ್ನ ಶಿವಣ್ಣನ ಎದುರು ನಿಲ್ಲಿಸಿದ್ರೆ ಪವರ್ ಬರಬಹುದು ಎಂದು ಯೋಚಿಸಿದಾಗ ಸಿಕ್ಕಿ ಉತ್ತರ ಪವರ್ ಸ್ಟಾರ್..
ಶಿವಣ್ಣನೂ ಪೊಲೀಸು, ಅಪ್ಪುನೂ ಪೊಲೀಸು!
ಶಿವಣ್ಣ ಪೊಲೀಸ್ ಪಾತ್ರ ಎದುರು ಟಗರು ಟು ಚಿತ್ರದಲ್ಲಿ ಪವರ್ ಫುಲ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನೂ ಪೊಲೀಸ್ ಪಾತ್ರದಲ್ಲಿ ತೋರಿಸಿದ್ರೆ ಹೆಂಗೆ ಅನ್ನೋ ಕುತೂಹಲ ಚಿತ್ರತಂಡದಲ್ಲಿ ಹುಟ್ಟಿಕೊಂಡಿತ್ತು.. ದೊಡ್ಮನೆ ಕುಟುಂಬ ಈ ಲೈನ್ ಸಖತ್ ಥ್ರಿಲ್ ಆಯ್ತು.. ಸ್ಟೋರಿ ಲೈನ್ ಸ್ಟ್ರಾಂಗ್ ಮಾಡಿ ಖಂಡಿತ ಮಾಡೋಣ ಅಂತ ಡಿಸೈಡ್ ಮಾಡಿದ್ರು ಅಪ್ಪು ಮತ್ತು ಶಿವಣ್ಣ.. ಒಟ್ಟಿಗೆ ತೋರಿಸೋ ಸೌಭಾಗ್ಯದ ಸದಾವಶಕಾಶ ದುನಿಯಾ ಸೂರಿ ಅವರಿಗೆ ಸಿಗೋ ಚಾನ್ಸ್ ಒಲಿದಿತ್ತು.. ಆದ್ರೆ ಸೂರಿ ಅವರ ತಲೆಯಲ್ಲಿ ಕಥೆ ಹೊಳೆಯಲೇ ಇಲ್ಲ.. ಒಂದು ವೇಳೆ ಕಥೆ ಚೆನ್ನಾಗಾದ್ರೆ ನಾವು, ಅಥ್ವಾ ನೀವೇ ನಿರ್ಮಾಣ ಮಾಡಿ ಬಿಡೋಣ ಅಂಥ ಅಪ್ಪು ಅವರು ಶಿವಣ್ಣ ಹತ್ತಿರ ಹೇಳಿದ್ರಂತೆ..
ಕಥೆ ಸೂರಿ ಅವರ ತಲೆಯಲ್ಲಿ ರೆಡಿಯಾಗ್ಲಿಲ್ಲ.. ಶಿವಣ್ಣ ಮತ್ತು ಅಪ್ಪು ಅವರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿ ಬಿಟ್ಟರು. ಹಿಂಗಾಗಿ ಟಗರು 2 ಚಿತ್ರದಲ್ಲಿ ಶಿವಣ್ಣ ಮತ್ತು ಅಪ್ಪು ಅವ್ರನ್ನ ಪವರ್ ಫುಲ್ ಪೊಲೀಸ್ ಪಾತ್ರಗಳಲ್ಲಿ ನೋಡೋ ಸೌಭಾಗ್ಯ ಚಿತ್ರಪ್ರೇಮಿಗಳಾದ ನಮಗೆ ನಿಮಗೆ ಸಿಗ್ಲಿಲ್ಲ.. ಒಂದು ವೇಳೆ ಅಣ್ಣಾವ್ರ ಮಕ್ಕಳನ್ನ ಒಟ್ಟಿಗೆ ಪೊಲೀಸ್ ಪಾತ್ರದಲ್ಲಿ ನೋಡಿದ್ರೆ ಎಷ್ಟು ಚೆನ್ನಾಗಿ ಇರ್ತಿತ್ತು ಅಲ್ವಾ. ಜೇಮ್ಸ್ ಸಿನಿಮಾದಲ್ಲಿ ಅಪ್ಪು ಅವರಿಗಾಗಿ ಶಿವಣ್ಣ ಮತ್ತು ರಾಘಣ್ಣ ಒಟ್ಟಿಗೆ ನಟಿಸಿ ಪಾರ್ವತಮ್ಮನವರ ಆಸೆಯನ್ನ ಕನ್ನಡ ಚಲಚಿತ್ರ ಅಭಿಮಾನಿ ದೇವರುಗಳ ಕನಸನ್ನು ಕೊಂಚ ಮಟ್ಟಿಗಾದ್ರು ಈಡೇರಿಸಿದ್ರು. ಒಂದು ವೇಳೆ ಟಗರು 2ಗೆ ಏನಾದ್ರು ಕಥೆ ಸೂರಿ ಅವರಿಗೆ ಹೊಳೆದು ಸಿನಿಮಾ ಮಾಡಲು ಮುಂದಾದ್ರೆ ಖಂಡಿತ ಶಿವಣ್ಣ ಆ್ಯಕ್ಟಿಂಗ್ ಮಾಡ್ತಾರೆ. ಆದ್ರೆ ಅಪ್ಪು ಅವ್ರ ಸ್ಥಾನವನ್ನ ತುಂಬೋಱರು. ಆ ದೇವರೆ ಈ ಪ್ರಶ್ನೆಗೆ ಉತ್ತರ ಕೊಡಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post