ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ, ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಆಸೀಸ್ನ ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ ಅಪಘಾತದಲ್ಲಿ 46 ವರ್ಷದ ಸೈಮಂಡ್ಸ್ ಸಾವನ್ನಪ್ಪಿದ್ದಾರೆ.
Vale Andrew Symonds.
We are shocked and saddened by the loss of the loveable Queenslander, who has tragically passed away at the age of 46. pic.twitter.com/ZAn8lllskK
— Cricket Australia (@CricketAus) May 15, 2022
ಆಸ್ಟ್ರೇಲಿಯಾ ಪರ ಸೈಮಂಡ್ಸ್ 26 ಟೆಸ್ಟ್, 198 ಏಕದಿನ ಹಾಗೂ 20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಏಕದಿನ ಕ್ರಿಕೆಟ್ನ ಸ್ಪೆಷಲಿಸ್ಟ್ ಪ್ಲೇಯರ್ ಆಗಿದ್ದ ಸೈಮಂಡ್ಸ್ 2003 ಮತ್ತು 2007ರ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಕಳೆದ ಎರಡು ತಿಂಗಳ ಅವಧಿಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾಗೆ ಎದುರಾದ ಎರಡನೇ ಅಘಾತ ಇದಾಗಿದ್ದು, ಕೆಲ ದಿನಗಳ ಹಿಂದೆಯಷ್ಟೇ 52 ವರ್ಷದ ಶೇನ್ ವಾರ್ನ್ ನಿಧನರಾಗಿದ್ದರು. ಸೈಮಂಡ್ಸ್ ನಿಧನಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಸಂತಾಪ ಸೂಚಿಸಿದೆ.
ಇದನ್ನೂ ಓದಿ: ವಿವಾದಗಳಿಂದಲೇ ತಮ್ಮ ಕ್ರಿಕೆಟ್ ಕರಿಯರ್ ಹಾಳು ಮಾಡಿಕೊಂಡರು ಇವರು..!
ಇದನ್ನೂ ಓದಿ: ಸಿಡ್ನಿಯಲ್ಲಿ ಜನಾಂಗೀಯ ನಿಂದನೆ ಆರೋಪ- 14 ವರ್ಷಗಳ ಮಂಕಿಗೇಟ್ ಪ್ರಕರಣ ನೆನಪಿಸಿದ ಘಟನೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post