ಸಿಎಸ್ಕೆ ಕ್ಯಾಪ್ಟನ್ ಎಂ.ಎಸ್ ಧೋನಿ ತಮ್ಮ ತಂಡದ ಯುವ ಬೌಲರ್, ಶ್ರೀಲಂಕಾದ ಮತೀಶಾ ಪತಿರಣ ಬೌಲಿಂಗ್ನ ಕೊಂಡಾಡಿದ್ದಾರೆ.
ಪತಿರಣ ಅವರಂತಹ ಬೌಲರ್ ಎದುರು ಬ್ಯಾಟರ್‌ಗಳು ತಮ್ಮ ತಪ್ಪುಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಅವರು ಅದ್ಭುತ ಮಂದಗತಿಯ ಎಸೆತವನ್ನು ಎಸೆಯಬಲ್ಲರು. ಜೊತೆಗೆ ವೇಗವಾಗಿಯೂ ಬೌಲಿಂಗ್ ಮಾಡಬಲ್ಲರು, ಇದರಿಂದ ಅವರ ವಿರುದ್ಧ ಬ್ಯಾಟ್ ಮಾಡುವುದು ಬಹಳ ಕಷ್ಟ ಎಂದು ಧೋನಿ ಹೇಳಿದ್ದಾರೆ.
2019ರ ಐಪಿಎಲ್ ಫೈನಲ್ ಪಂದ್ಯದ ಅಂತಿಮ ಎಸೆತದಲ್ಲಿ ಮುಂಬೈ ಇಂಡಿಯನ್ಸ್ ಪರ ಲಸಿತ್ ಮಾಲಿಂಗ, ಸ್ಲೋ ಬಾಲ್ ಎಸೆದು ಸಿಎಸ್ಕೆ ತಂಡದ ಶಾರ್ದುಲ್ ಠಾಕೂರ್ ಅವರನ್ನು ಎಲ್ಬಿಡ್ಲ್ಯೂ ಬಲೆಗೆ ಕೆಡವಿ ತಂಡ ಕಪ್ ಗೆಲ್ಲಲು ಪ್ರಮುಖ ಕಾರಣವಾಗಿದ್ದರು. ಮೂರು ವರ್ಷದ ಬಳಿಕ ಇದೇ ರೀತಿ ಬೇಬಿ ಮಾಲಿಂಗ ತಮ್ಮ ಐಪಿಎಲ್ನ ಮೊದಲ ಎಸೆತದಲ್ಲಿ ಸುಭ್ಮನ್ ಗಿಲ್ ಅವರನ್ನು ಎಲ್ಬಿಡ್ಲ್ಯೂ ಬಲೆಗೆ ಕೆಡವಿದ್ದರು. ಇನ್ನು, ಪಂದ್ಯದಲ್ಲಿ ಬೇಬಿ ಮಾಲಿಂಗ 3.1 ಓವರ್ನಲ್ಲಿ 2 ವಿಕೆಟ್ ಪಡೆದು 24 ರನ್ ನೀಡಿದ್ದಾರೆ.
Wicket of the First Ball Matheesha Pathirana pic.twitter.com/UzfwJjQwFW
— 🎰 (@sharukhMSD) May 15, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]stlive.com
Discussion about this post