ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಪ್ರವೇಶಿಸಲು ಭಾರೀ ಸರ್ಕಸ್ ನಡೆಸುತ್ತಿದೆ. ಈ ನಡುವೆ ಆರ್ಸಿಬಿ ಫ್ರಾಂಚೈಸಿ ತಂಡದ ಆಟಗಾರರಿಗೆ ಪ್ರಶಸ್ತಿಯೊಂದು ಘೋಷಿಸಿದೆ.
ಇಡೀ ಐಪಿಎಲ್ನಲ್ಲೇ ಮೊದಲ ಬಾರಿಗೆ ತನ್ನ ಮಾಜಿ ಆಟಗಾರರಿಗಾಗಿ ‘ಹಾಲ್ ಆಫ್ ಫೇಮ್’ ಎಂಬ ಪ್ರಶಸ್ತಿಯನ್ನು ಆರ್ಸಿಬಿ ಘೋಷಣೆ ಮಾಡಿದೆ. ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಈ ಗೌರವ ಪಡೆದಿದ್ದಾರೆ.
2011ರಲ್ಲಿ ಆರ್ಸಿಬಿ ತಂಡ ಸೇರಿಕೊಂಡ ಕ್ರಿಸ್ ಗೇಲ್ ಬರೋಬ್ಬರಿ 7 ವರ್ಷ ಐಪಿಎಲ್ ರೂಲ್ ಮಾಡಿದ್ರು. 2011- 2017 ರವರೆಗೂ ಆರ್ಸಿಬಿ ತಂಡದಲ್ಲಿದ್ದ ಗೇಲ್, 91 ಪಂದ್ಯಗಳನ್ನು ಆಡಿ 21 ಅರ್ಧಶತಕ ಹಾಗೂ 5 ಶತಕ ಸೇರಿ 3420 ರನ್ ಬಾರಿಸಿದ್ರು.
ಇನ್ನೊಂದೆಡೆ ಆರ್ಸಿಬಿ ಆಪತ್ಭಾಂಧವ ಎನಿಸಿಕೊಂಡಿದ್ದ ಎಬಿಡಿ ಕೂಡ ತಂಡದ ಪ್ರಮುಖ ಆಧಾರಸ್ತಂಭ ಆಗಿದ್ದರು. 2011- 2021 ರವರೆಗೆ ಆರ್ಸಿಬಿ ಪರ ಆಡಿದ್ದ ಎಬಿಡಿ 157 ಪಂದ್ಯಗಳಲ್ಲಿ 4522 ರನ್ ಸಿಡಿಸಿದ್ರು. ಈ ಪೈಕಿ 2 ಶತಕ, 37 ಅರ್ಧಶತಕ ಸೇರಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post