ಸೌತ್ ಆಫ್ರಿಕಾ ಸರಣಿಗೆ ಟೀಮ್ ಇಂಡಿಯಾ ಸೆಲೆಕ್ಷನ್ ಜೋರಾಗಿ ನಡೀತಿದೆ. ಯಾರಿಗೆ ರೆಸ್ಟ್ ಕೊಡ್ಬೇಕು, ಯಾರಿಗೆ ಚಾನ್ಸ್ ನೀಡ್ಬೇಕು ಅನ್ನೋ ಚರ್ಚೆಗಳು ಬಿರುಸಿನಲ್ಲಿ ನಡೀತಿವೆ. ಕೆಲವ್ರು ಸರ್ಪ್ರೈಸ್ ಪಿಕ್ ಆಗ್ತಾರೆ ಅಂತಾನೇ ಹೇಳಲಾಗ್ತಿದೆ. ಆದ್ರೆ ಈ ಇಬ್ಬರು ಮಾತ್ರ ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡಿದ್ದಾರೆ.
ಸೀಸನ್-15ನೇ IPL ಮುಕ್ತಾಯದ ಹಂತಕ್ಕೆ ತಲುಪಿದೆ. ಅತ್ತ ಸೆಲೆಕ್ಷನ್ ಕಮಿಟಿ ಸೌತ್ ಆಫ್ರಿಕಾ ವಿರುದ್ಧದ ಟಿ20 ವಾರ್ಗೆ ಯಂಗ್ ಆರ್ಮಿ ಕಟ್ಟೋಕೆ ರೆಡಿಯಾಗಿದೆ. ಹಾಗಾಗಿ ರೋಹಿತ್, ವಿರಾಟ್, ರಾಹುಲ್ ಮತ್ತು ಪಂತ್ ಸೇರಿ ಸ್ಟಾರ್ ಪ್ಲೇಯರ್ಸ್ಗೆ ರೆಸ್ಟ್ ನೀಡೋಕೆ ಚಿಂತನೆ ನಡೆಸಿದ್ದು, IPLನಲ್ಲಿ ಮಿಂಚಿದ ಯಂಗ್ ಪ್ಲೇಯರ್ಸ್ಗಳನ್ನ ರನ್ಭೂಮಿಯಲ್ಲಿ ಸಮರ ಶಂಖ ನಾದ ಮೊಳಗಿಸಲು ಸಖತ್ ಪ್ಲಾನ್ ಹಾಕಿಕೊಂಡಿದೆ.
ಸೆಲೆಕ್ಷನ್ ಕಮಿಟಿ ಈಗಾಗಲೇ ಟೀಮ್ ಸೆಲೆಕ್ಷನ್ನ ಪ್ರೋಸಸ್ ನಡೆಸ್ತಿದೆ. ಹಾರ್ದಿಕ್ ಪಾಂಡ್ಯ ಅಥವಾ ಶಿಖರ್ ಧವನ್ರಲ್ಲಿ ಒಬ್ರನ್ನ ಕ್ಯಾಪ್ಟನ್ ಮಾಡೋಕು ನಿರ್ಧರಿಸಿದ್ಯಂತೆ. ಕೆಲವರು ಸರ್ಪ್ರೈಸ್ ಆಗಿ ಸೆಲೆಕ್ಟ್ ಆಗೋ ಚಾನ್ಸಸ್ ಕೂಡ ಇದೆ. ಆದ್ರೆ ನಿರೀಕ್ಷೆ ಇಟ್ಟಿದ್ದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಮತ್ತು ದೇವದತ್ ಪಡಿಕ್ಕಲ್ ಮಾತ್ರ, ಸೆಲೆಕ್ಟರ್ಗಳನ್ನ ಇಂಪ್ರೆಸ್ ಮಾಡೋದ್ರಲ್ಲಿ ಫೇಲ್ ಆಗಿದ್ದಾರಂತೆ.
ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡ್ರಾ ಸ್ಯಾಮ್ಸನ್ & ಪಡಿಕ್ಕಲ್..?
IPL ಟೂರ್ನಿ ಆರಂಭದಿಂದಲೂ ಸ್ಯಾಮ್ಸನ್, ಪಡಿಕ್ಕಲ್ ಮೇಲೆ ನಿರೀಕ್ಷೆ ಜಾಸ್ತಿ ಇತ್ತು. IPLನಲ್ಲಿ ಸೆಲೆಕ್ಟರ್ಗಳ ನಂಬಿಕೆ ಉಳಿಸಿಕೊಳ್ತಾರೆ ಅಂತಾನೇ ಹೇಳಲಾಗಿತ್ತು. ಆದರೆ ಈ ಯಂಗ್ ಬಾಯ್ಸ್, ಸೆಲೆಕ್ಟರ್ಗಳ ನಂಬಿಕೆ ಉಳಿಸಿಕೊಳ್ಳುವಲ್ಲಿ ಫೇಲ್ ಆಗಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಆಡ್ತಿರೋ ಈ ಇಬ್ಬರು, ನಿರೀಕ್ಷೆಗೆ ತಕ್ಕಂತೆ ಸ್ಕೋರ್ ಕಲೆ ಹಾಕದೆ ಇರೋದೇ, ಅದಕ್ಕೆ ಪ್ರಮುಖ ಕಾರಣವಂತೆ.
ಕ್ಯಾಪ್ಟನ್ಸಿಯಲ್ಲಿ ಪಾಸ್, ಬ್ಯಾಟಿಂಗ್ನಲ್ಲಿ ಫೇಲಾದ ಸ್ಯಾಮ್ಸನ್.!
ಹೌದು.! ಸಂಜು ಸ್ಯಾಮ್ಸನ್ ಕ್ಯಾಪ್ಟನ್ಸಿಯಲ್ಲಿ ರಾಜಸ್ಥಾನ್ ರಾಯಲ್ಸ್ ಸಖತ್ ಸಕ್ಸಸ್ ಕಂಡಿದೆ. ಇದೀಗ ಪ್ಲೇ ಆಫ್ ಟಿಕೆಟ್ ಅನ್ನ ಬಹುತೇಕ ಖಚಿತಪಡಿಸಿಕೊಂಡಿದೆ. ಆದರೆ ಸಂಜು ಬ್ಯಾಟಿಂಗ್ನಲ್ಲಿ ಪುಲ್ ಫ್ಲಾಪ್ ಶೋ ನೀಡಿದ್ದಾರೆ. ಒಂದೆರಡು ಮ್ಯಾಚ್ಗಳಲ್ಲಿ ಅಟ್ರಾಕ್ಷನ್ ಆಗಿದ್ದು ಬಿಟ್ರೆ, ಯಾವ ಪಂದ್ಯದಲ್ಲೂ ಮ್ಯಾಚ್ ವಿನ್ನಿಂಗ್, ಶೋ ನೀಡ್ಲೇ ಇಲ್ಲ. ಇದನ್ನ ಸೆಲೆಕ್ಟರ್ಗಳು, ಸೂಕ್ಷ್ಮವಾಗಿ ಪರಿಗಣಿಸಿದ್ರಂತೆ. ಹೀಗಾಗಿ ಸಂಜು ಆಯ್ಕೆಗೆ ರಿಜೆಕ್ಟ್ ಮಾಡಿದ್ರಂತೆ.
- ಪ್ರಸಕ್ತ IPLನಲ್ಲಿ ಸ್ಯಾಮ್ಸನ್..!
ಪ್ರಸಕ್ತ IPLನಲ್ಲಿ 13 ಪಂದ್ಯಗಳಲ್ಲಿ ಬ್ಯಾಟ್ ಬೀಸಿರೋ ಸಂಜು, 29.92ರ ಸರಾಸರಿಯಂತೆ 359 ರನ್ ಮಾತ್ರ ಕಲೆ ಹಾಕಿದ್ದಾರೆ. 55 ಅವರ ಬೆಸ್ಟ್ ಸ್ಕೋರ್ ಆಗಿದೆ.
ಯಾವ ಸ್ಲಾಟ್ನಲ್ಲೂ ಶೈನ್ ಆಗಲಿಲ್ಲ ದೇವದತ್ ಪಡಿಕ್ಕಲ್..!
ಹೌದು.! ಪಡಿಕ್ಕಲ್ ಗೋಲ್ಡನ್ ಆಪರ್ಚುನಿಟಿಯನ್ನ ಪಕ್ಕಾ ಕೈ ಚೆಲ್ಲಿದ್ದಾರೆ. ಸದ್ಯ ಟೀಮ್ ಇಂಡಿಯಾದಲ್ಲಿ ಓಪನರ್ಸ್ ರೋಹಿತ್-ರಾಹುಲ್ಗೆ ರೆಸ್ಟ್ ನೀಡೋದು ಪಕ್ಕಾ. ಆ ಸ್ಥಾನಕ್ಕೆ ರೇಸ್ನಲ್ಲಿದ್ದವರಲ್ಲಿ ಪಡಿಕ್ಕಲ್ ಕೂಡ ಒಬ್ರು. ಆದ್ರೆ ಶೈನ್ ಆಗಿದ್ದೇ ಇಲ್ಲ. ಹೀಗಾಗಿ ಮಿಡಲ್ ಆರ್ಡರ್ನಲ್ಲಿ 3-4ನೇ ಕ್ರಮಾಂಕದಲ್ಲೂ ಕಣಕ್ಕಿಳಿಸಿದ್ರೂ ಇಂಪ್ರೆಸ್ಸಿಂಗ್ ಇನ್ನಿಂಗ್ಸ್ ಕಟ್ಟಲೇ ಇಲ್ಲ. ಹೀಗಾಗಿ ಪಡಿಕ್ಕಲ್ ಸೆಲೆಕ್ಷನ್ಗೆ ಇಂಟ್ರೆಸ್ಟ್ ತೋರಿಸಿಲ್ವಂತೆ ಸೆಲೆಕ್ಟರ್ಸ್.
- ಪ್ರಸಕ್ತ IPLನಲ್ಲಿ ಪಡಿಕ್ಕಲ್..!
ಪ್ರಸಕ್ತ IPLನಲ್ಲಿ 13 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಪಡಿಕ್ಕಲ್, ಕೇವಲ 25.69ರ ಸರಾಸರಿಯಲ್ಲಿ 334 ರನ್ ಕಲೆ ಹಾಕಿದ್ದಾರೆ. 54 ಅವರ ಬೆಸ್ಟ್ ಸ್ಕೋರ್ ಆಗಿದೆ.
ಒಟ್ಟಿನಲ್ಲಿ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡೋದು ಈ ಇಬ್ಬರ ಕನಸಾಗಿತ್ತು. ಆದ್ರೆ IPLನಲ್ಲಿ ನೀಡಿದ ಫ್ಲಾಪ್ ಶೋಗಳ ಮೂಲಕ, ಸಿಕ್ಕ ಗೋಲ್ಡನ್ ಆಪರ್ಚುನಿಟಿಗಳನ್ನ ಮಿಸ್ ಮಾಡಿ ಕೊಳ್ತಿರೋದು ವಿಪರ್ಯಾಸವೇ ಸರಿ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post