ನಾಳೆ ಈ ನಾಡು ಕಂಡ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 90ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಅಪ್ಪಾಜಿ ಕ್ಯಾಂಟೀನ್ನಲ್ಲಿ ಒಂದು ರೂಪಾಯಿಗೆ ಊಟ ತಿಂಡಿ ನೀಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ, ನಾಳೆ ಅಪ್ಪಾಜಿ ಅವರ ಜನ್ಮದಿನ. ಹೀಗಾಗಿ ನಮ್ಮ ‘ಅಪ್ಪಾಜಿ ಕ್ಯಾಂಟೀನ್’ನಲ್ಲಿ ಒಂದು ರೂಪಾಯಿಗೆ ಊಟ, ತಿಂಡಿಯನ್ನ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅಂದ್ಹಾಗೆ ಈ ಅಪ್ಪಾಜಿ ಕ್ಯಾಂಟೀನ್ ನಗರದ ಹನುಮಂತನಗರದಲ್ಲಿದೆ. ಕಳೆದ ಐದು ವರ್ಷಗಳಿಂದ ಬಡವರಿಗೆ ಕಡಿಮೆ ದರದಲ್ಲಿ ಊಟ, ತಿಂಡಿಯನ್ನ ನೀಡುತ್ತಿದೆ. ದೇವೇಗೌಡರ 90ನೇ ವರ್ಷದ ಜನ್ಮದಿನದ ಅಂಗವಾಗಿ ಒಂದು ರೂಪಾಯಿಗೆ ಊಟ, ತಿಂಡಿ ನೀಡಲಾಗುತ್ತದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post