‘ಪುಟ್ಟ ಗೌರಿ ಮದುವೆ’ ಧಾರಾವಾಹಿಯಲ್ಲಿ ಮಹೇಶ್ ಪಾತ್ರದಿಂದ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟ ರಕ್ಷ್, ಈಗ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಟ ರಕ್ಷ್ ಈಗ ಹೊಸ ಸ್ಟುಡಿಯೋ ಒಪನ್ ಮಾಡಿದ್ದಾರೆ. ಅವರ ಕನಸಿನ ಸ್ಟುಡಿಯೋ ಅದ್ಭುತವಾಗಿದೆ. ನಿನ್ನೆ ಶ್ರೀ ಸಾಯಿ ಆಂಜನೇಯ ಸ್ಟುಡಿಯೋವನ್ನು ಶಾಸ್ತ್ರೋಕ್ತವಾಗಿ ಉದ್ಘಾಟನೆ ಮಾಡಿದ್ದಾರೆ ರಕ್ಷ್ ದಂಪತಿ.
ಗಟ್ಟಿಮೇಳ ಸೀರಿಯಲ್ನಲ್ಲಿ ಹಿರೋ ಆಗಿ ಯಶಸ್ಸುಗಳಿಸಿದ ರಕ್ಷ್ ನಂತರ ಗಟ್ಟಿಮೇಳದ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತರು. ಹಿರೋ ಆಗಿ ನಿರ್ಮಾಪಕನಾಗಿ ಗಟ್ಟಿಮೇಳ ಧಾರಾವಾಹಿಯನ್ನ ಕಿರುತೆರೆಯ ನಂಬರ್ ಒನ್ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಸದ್ಯ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ರಕ್ಷ್.
ರಕ್ಷ್ ಅವರ ಸ್ಟುಡಿಯೋ ಉದ್ಘಾಟನೆ ಸಮಾರಂಭದಲ್ಲಿ ಹಲವು ಕಿರುತೆರೆಯ ಕಲಾವಿದರು, ಸ್ನೇಹಿತರು ಭಾಗಿಯಾಗಿದ್ದರು. ಬೆಳಗ್ಗೆಯೇ ಪೂಜೆ, ಹೋಮ ಹವನಗಳು ಜರುಗಿದವು. ಸ್ಟುಡಿಯೋ ಲುಕ್ ಸಖತ್ ರಾಯಲ್ ಆಗಿದೆ. ಗೋಲ್ಡನ್ ಮರೂನ್ ಕಲರ್ನಲ್ಲಿ ಇಡೀ ಸ್ಟುಡಿಯೋ ನಿರ್ಮಾಣ ಮಾಡಲಾಗಿದೆ. ನಟ ರಕ್ಷ್ ಅವರ ಸ್ಟುಡಿಯೋಯಿಂದ ಮತ್ತಷ್ಟು ಕಲಾ ಸೇವೆ ನಡೆಯಲಿ. ಅವರ ಜರ್ನಿಗೆ ಒಳ್ಳೆಯದಾಗಲಿ.
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post