ಬೆಂಗಳೂರು: ರೋಚಕ ತಿರುವಿಗೆ ಸಾಕ್ಷಿಯಾದ ಬಿಜೆಪಿ ಮುಖಂಡನ ಸಾವು. ಅಂದು ಹನಿಟ್ರ್ಯಾಪ್ ಎಂದಾಕೆಯೇ ಇಂದು ಟ್ರ್ಯಾಪ್ ಆದಳಾ? ಸ್ಫೋಟವಾದ ಆಡಿಯೋದಲ್ಲಿರುವ ಆ ಕರಾಳ ಸತ್ಯಗಳೇನು..? ಇದುವೇ ಈ ಹೊತ್ತಿನ ವಿಶೇಷ ಒಂದು ಸಾವಿನ ಸುತ್ತ.. ನಾನು
Anchor: ಅದು ಸಾಕಷ್ಟು ಅನುಮಾನಗಳನ್ನ ಹುಟ್ಟು ಹಾಕಿದ ಸಾವಿನ ಪ್ರಕರಣ. ಅಂದು ಸೂಸೈಡ್ ಮಾಡ್ಕೊಂಡ ಎನ್ನಲಾದ ವ್ಯಕ್ತಿ ಸಾಮಾನ್ಯನಾಗಿರ್ಲಿಲ್ಲ.. ಪ್ರಮುಖ ರಾಷ್ಟ್ರೀಯ ಪಕ್ಷವೊಂದರ ಮುಖಂಡನಾಗಿದ್ದ. ಬಟ್, ಇದೀಗ ವ್ಯಕ್ತಿಯ ಸೂಸೈಡ್ ಕೇಸ್ಗೆ ಯಾರೂ ಊಹಿಸಲೂ ಸಾಧ್ಯವಾಗದಂತಹದ ಟ್ವಿಸ್ಟ್ ಸಿಕ್ಕಿದೆ. ಅದೊಂದು ಆಡಿಯೋ ಕಠೋರ ಸತ್ಯವನ್ನು ಆಲ್ಮೋಸ್ಟ್ ಬಯಲು ಮಾಡಿದೆ.
ಭವ್ಯ ಬಂಗಲೆಯಂತಿರುವ ಮನೆ. ಮನೆ ಮುಂದೆ ಸೇರಿರುವ ಎಲ್ಲರ ಮುಖದಲ್ಲೂ ನೋವು, ಆತಂಕ.. ಅಯ್ಯೋ.. ಏನಾಯ್ತು.. ಏನಾಯ್ತು ಅಂತಾ ಅವರವರ ಮಧ್ಯವೇ ಗುಸುಗುಸು. ಇವರ ಈ ಆತಂಕಕ್ಕೆ, ಇಲ್ಲಿ ಸೇರಿರುವ ಜನರ ದು:ಖಕ್ಕೆ ಕಾರಣ ಬೇರೆನೂ ಅಲ್ಲ.. ಇದೇ ಮನೆಯಲ್ಲಿ ನಡೆದು ಹೋಗಿರೋ ಅದೊಂದು ಸಾವು.
ಬಿಜೆಪಿ ಮುಖಂಡ ಅನಂತರಾಜು ಸೂಸೈಡ್..
ಅದು ಮೇ 12 , ಗುರುವಾರ ರಾತ್ರಿ ಅದು. ಬ್ಯಾಡರಹಳ್ಳಿಯ ಬಿಜೆಪಿ ಮುಖಂಡ ಅನಂತರಾಜು ಶವ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹೇರೋಹಳ್ಳಿ ವಾರ್ಡ್ ನಿವಾಸಿ ಅನಂತರಾಜುಗೆ ಆಸ್ತಿ, ಅಂತಸ್ತು, ಹೆಸರು ಎಲ್ಲವೂ ಇತ್ತು. ಸಚಿವ ಎಸ್.ಟಿ ಸೋಮಶೇಖರ್ ಆಪ್ತನೂ ಆಗಿದ್ದ ಈತ ದೊಡ್ಡ ದೊಡ್ಡ ಬಿಜೆಪಿ ನಾಯಕರ ಜೊತೆ ನೆಟ್ವರ್ಕ್ ಹೊಂದಿದ್ದ . ಮುಂಬರುವ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸುವ ಪ್ಲಾನ್ ಕೂಡ ಹಾಕಿಕೊಂಡಿದ್ದ. ಇಂತಹ ವ್ಯಕ್ತಿ ಮೊನ್ನೆ ಸೂಸೈಡ್ ಮಾಡ್ಕೊಂಡಿದ್ರಿಂದ ಏರಿಯಾದ ಜನರೆಲ್ಲಾ ಕಣ್ಣೀರಾಗಿದ್ರು.
ಅದಾಗ್ಲೆ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿದ್ದ ಅನಂತರಾಜು ಸೂಸೈಡ್ ಕೇಸ್, ಸಹಜವಾಗಿಯೇ ಹತ್ತಾರು ಅನುಮಾನಗಳನ್ನ ಹುಟ್ಟು ಹಾಕಿತ್ತು. ಈ ಪ್ರಕರಣ ಸಂಬಂಧ ದಿನಕ್ಕೊಂದರಂತೆ ಹೊಸ ಹೊಸ ವಿಚಾರಗಳು ಹೊರ ಬರ್ತಾನೆ ಇದ್ವು. ಬಟ್ ಇದೀಗ ಇದೇ ಕೇಸ್ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಸನಿಹದಲ್ಲಿದ್ದ ಮಡದಿಯ ಸಂಚಿತ್ತಾ ಎಂಬ ಅನುಮಾನ ಮೂಡಿಸುವ ಆಡಿಯೋ ಕೂಡ ವೈರಲ್ ಆಗಿದೆ. ಹಾಗಾದ್ರೆ, ಏನಿದು ಸ್ಫೋಟಕ ಆಡಿಯೋ? ಆಡಿಯೋ ಬಿಚ್ಚಿಟ್ಟ ಸತ್ಯವೇನು ಅನ್ನೋದನ್ನ ಹೇಳ್ತೀವಿ.. ಅದ್ಕಿಂತ ಮೊದ್ಲು, ಅನಂತರಾಜು ಸಾವಿನ ಮನೆ ಸೇರಿದ ಬಳಿಕ ಉಂಟಾದ ಒಂದಷ್ಟು ಡೆವಲಪ್ಮೆಂಟ್ಸ್ ಬಗ್ಗೆ ಹೇಳಲೇಬೇಕು.
ಥೈರಾಯ್ಡ್ ಸಮಸ್ಯೆಗೆ ಮನನೊಂದು ಆತ್ಮಹತ್ಯೆ ಮಾಡ್ಕೊಂಡ್ರಾ?
6 ವರ್ಷದ ಆ ಹೆಣ್ಣಿನ ಪರಿಚಯ ಸೂಸೈಡ್ಗೆ ಕಾರಣವಾಯ್ತಾ?
ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದ ಅನಂತ್ರಾಜು ಮನನೊಂದು ಆತ್ಮಹತ್ಯೆ ಮಾಡ್ಕೊಂಡಿರ್ಬೋದು ಅನ್ನೋ ಶಂಕೆ ಆರಂಭದಲ್ಲಿ ವ್ಯಕ್ತವಾಗಿತ್ತು. ಬಟ್ ಈ ವಿಷಯ ಹೆಚ್ಚು ಸಮಯ ಉಳಿದಿರ್ಲಿಲ್ಲ.. ಯಾಕಂದ್ರೆ, ಇದಾದ ಎರಡೇ ದಿನಕ್ಕೆ ಮತ್ತೊಂದು ಬೆಚ್ಚಿ ಬೀಳಿಸುವ ಸಂಗತಿ ಹೊರಬಂದಿತ್ತು. ಸ್ವತಃ ಅನಂತರಾಜು ಮಡದಿ ಸುಮಾ ಅದೊಂದು ರಹಸ್ಯ ವಿಚಾರವನ್ನ ಬಿಚ್ಚಿಟ್ಟಿದ್ಲು. ಅದು ಸುಮಾ ಹೇಳಿದ್ದು ಅದೊಂದು ಹನಿ, ಹನಿ ಕಹಾನಿ ಬಗ್ಗೆ.
ಆನಂತರಾಜು ಆತ್ಮಹತ್ಯೆ ಹಿಂದೆ ಹೆಣ್ಣಿನ ನೆರಳು..!
ಅನಂತರಾಜು ಆತ್ಮಹತ್ಯೆಗೆ ಹತ್ತಾರು ಕಾರಣಗಳು ಹುಟ್ಟಿಕೊಂಡಿದ್ರೂ ಮಡದಿ ಮಾತ್ರ ಅದೊಬ್ಬಳ ಸಹವಾಸವೇ ಈ ಸೂಸೈಡ್ಗೆ ಕಾರಣ ಅಂತಾ ಬ್ಯಾಡರಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡ್ತಾಳೆ. ಅಲ್ಲದೇ, ಗ್ಯಾಂಗ್ ಸಮೇತವಾಗಿ ನನ್ನ ಗಂಡನನ್ನ ಬಲೆಗೆ ಬೀಳಿಸಿ ಬ್ಲ್ಯಾಕ್ ಮೇಲ್ ಮಾಡಿರುವ ಕುರಿತು ಕೂಡ ದೂರಿನಲ್ಲಿ ಮೆನ್ಷನ್ ಮಾಡ್ತಾಳೆ. ಈ ಸೂಸೈಡ್ ಕೇಸ್ನಲ್ಲಿ ಸುಂದರಿಯ ನೆರಳು ಕಾಣಿಸಿಕೊಳ್ತಿದ್ದಂಗೆ ಪ್ರಕರಣ ಮತ್ತೊಂದು ಆಯಾಮ ಪಡೆದುಕೊಳ್ಳುತ್ತೆ.
ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದ ಮೃತನ ಪತ್ನಿ!
ಎಸ್. ಅನಂತರಾಜು ಮಡದಿ ಈ ಪ್ರಕಣಕ್ಕೆ ಯಾರು ಊಹಿಸದ ತಿರುವು ಕೊಟ್ಟಿದ್ಲು.ತನ್ನ ಗಂಡನನ್ನ ವ್ಯವಸ್ಥಿತವಾಗಿ ಹನಿಟ್ರ್ಯಾಪ್ ಜಾಲಕ್ಕೆ ಕೆಡವಿ ಬ್ಲ್ಯಾಕ್ಮೇಲ್ ಮಾಡಲಾಗಿತ್ತು. ಇದರಿಂದನೇ ತನ್ನ ಗಂಡ ಸೂಸೈಡ್ ಮಾಡ್ಕೊಂಡಿದ್ದಾನೆಂದು ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ಕೊಟ್ಟು ಕಣ್ಣೀರು ಹಾಕಿದ್ಲು. ದೂರಿನಲ್ಲಿ ಕೆ.ಆರ್ ಪುರಂನ ರೇಖಾ, ವಿನೋದ್ ಮತ್ತ ಸ್ಪಂದನಾ ಹೆಸರು ಕೂಡ ಮೆನ್ಷನ್ ಆಗಿತ್ತು. ಹನಿಟ್ರ್ಯಾಪ್ ದೂರು ದಾಖಲು ಮಾಡ್ತಿದ್ದಂಗೆ ಪೊಲೀಸರು ಫೀಲ್ಡ್ಗೆ ಎಂಟ್ರಿ ಕೊಟ್ಟಿದ್ರು. ಈ ವೇಳೆ ತೆರೆದುಕೊಂಡಿದ್ದು ರೇಖಾ ಅನ್ನೋ ಸುಂದರಿಯ ಕಥೆ.
ಅಷ್ಟಕ್ಕೂ ಯಾರು ಈ ರೇಖಾ…?
ಅನಂತರಾಜುಗೆ ವರ್ಷಗಳ ಹಿಂದೆ ಫೇಸ್ಬುಕ್ನಲ್ಲಿ ರೇಖಾ ಅನ್ನೋಳ ಪರಿಚಯವಾಗಿತ್ತು. ರೇಖಾ ಜೊತೆ ವೈಯುಕ್ತಿಕ ವಿಚಾರಗಳನ್ನ ಶೇರ್ ಮಾಡ್ತಿದ್ನಂತೆ.ಈತನ ಖಾಸಗಿ ಫೋಟೋ ವಿಡಿಯೋ ಆಕೆಯ ಬಳಿ ಇತ್ತಂತೆ.ಈ ಫೋಟೊ ವೀಡಿಯೋ ಮುಂದಿಟ್ಟುಕೊಂಡು ರೇಖಾ ಆ್ಯಂಡ್ ಟೀಂ ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ್ರಂತೆ. ಹಣ ಕೊಡದಿದ್ರೆ ಬಿಜೆಪಿ ಮುಖಂಡರು, ಸೋಶೀಯಲ್ ಮೀಡಿಯಾಗಳಲ್ಲಿ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ರಂತೆ. ಅದಾಗ್ಲೆ ರೇಖಾ ಆ್ಯಂಡ್ ಟೀಂಗೆ ಸಾಕಷ್ಟು ಹಣ ಕೊಟ್ಟು ಬೇಸತ್ತಿದ್ದ ಅನಂತುರಾಜು ಸೂಸೈಡ್ ಮಾಡ್ಕೊಂಡಿದ್ದಾನೆಂದು ಅನಂತರಾಜು ಪತ್ನಿ ಸುಮಾ ಬ್ಯಾಡರಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ರು.
ಅದ್ಯಾವಾಗ ಮೃತನ ಮಡದಿ ರೇಖಾ ಕಡೆ ಬೊಟ್ಟು ಮಾಡಿದ್ಲೋ, ಪೊಲೀಸರು ಕೂಡಲೇ ಆ ರೇಖಾಳಿಗೆ ಬಲೆ ಬೀಸಿದ್ದಾರೆ. ಅದರಂತೆ ಆಕೆಗೆ ಕೈಗೆ ಕೋಳ ತೊಡಿಸಿ ವಿಚಾರಣೆ ನಡೆಸಿದ್ದಾರೆ. ರೇಖಾಳ ಬಳಿ ಇದ್ದ ಹಾರ್ಡ್ ಡಿಸ್ಕ್ ವಶಪಡಿಸಿಕೊಂಡು ಕೂಡ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಈ ಕೇಸ್ ಸಂಬಂಧ ಯಾವುದೇ ಸಾಕ್ಷಿಗಳು ಸಿಗಲ್ಲ. ರೇಖಾ ಕಾಲ್ ರೆಕಾರ್ಡ್ಸ್ಗಳನ್ನ ಕೂಡ ಚೆಕ್ ಮಾಡ್ತಾರೆ. ಈ ಕೇಸ್ ನಲ್ಲಿ ರೇಖಾ ವಿಲನ್ ಆಗಿ ಕಾಣಿಸಿಕೊಳ್ತಿದ್ದಂಗೆ ಈಕೆಯ ಮೇಲಿನ ಅನುಮಾನ ಮತ್ತಷ್ಟು ಹೆಚ್ಚಾಗುತ್ತಲೇ ಹೋಗಿತ್ತು. ಬಟ್ ಇಂತಹ ಹೊತ್ತಲ್ಲೇ ವೈರಲ್ ಆಗೋದು ಅದೊಂದು ಸ್ಫೋಟಕ ಆಡಿಯೋ. ಆ ಆಡಿಯೋದಲ್ಲಿ ಇದಿದ್ದು, ಸ್ವತಃ ಅನಂತರಾಜು ಮಡದಿಯೇ ತನ್ನ ಗಂಡನ ಸಾವಿನ ಬಗ್ಗೆ ಆಡಿದ್ದ ಮಾತುಗಳು. ಅದರಲ್ಲೂ ನರಳಿ ನರಳಿ ಸಾಯುವ ಬಗೆಗೆನ ಸ್ಫೋಟಕ ಆಡಿಯೋ.
ಎಸ್. ಸ್ವತಃ ಅನಂತರಾಜು ಮಡದಿ ಸುಮಾ, ಈ ರೇಖಾಳ ಜೊತೆ ಆಡಿರುವ ಸ್ಫೋಟಕ ಆಡಿಯೋ ಇದೀಗ ವೈರಲ್ ಆಗಿದೆ. ಅಲ್ಲದೇ ಇನ್ನಿಪ್ಪತ್ತು ದಿನದಲ್ಲಿ ಅನಂತರಾಜು ಸಾವಿನ ಮನೆ ಸೇರ್ತಾನೆ ಅನ್ನೋ ಮಾತುಗಳನ್ನ ಕೂಡ ಮೃತನ ಮಡದಿ ಆಡಿದ್ಲು. ಇದೀಗ ಈ ಸ್ಫೋಟಕ ಆಡಿಯೋ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದೆ. ಅನಂತರಾಜು ಈ ಹಿಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ ಅನ್ನೋ ವಿಚಾರ ಕೂಡ ಇದೀಗ ರಿವೀಲ್ ಆಗಿದೆ.
ಬಿಜೆಪಿ ಮುಖಂಡ ಅನಂತರಾಜು ಸೂಸೈಡ್ ಕೇಸ್ ವಿಚಾರದಲ್ಲಿ ಜೆಡಿಎಸ್ ಮುಖಡಂನೊಬ್ಬನ ಹೆಸರು ಕೂಡ ಬಂದು ಹೋಗುತ್ತೆ. ಹಾಗಾದ್ರೆ ಆ ವೈರಲ್ ಆದ ಆಡಿಯೋದಲ್ಲಿ ಏನಿದೆ. ಇನ್ನಿಪ್ಪತ್ತು ದಿನದಲ್ಲಿ ನನ್ ಗಂಡ ಸಾಯ್ತಾನೆಂದು ಅನಂತರಾಜು ಮಡದಿ ಹೇಳಿದ್ಯಾಕೆ..? ಮಡದಿಯೇ ಗಂಡನನ್ನ ಶಿವನ ಪಾದ ಸೇರಿಸಿದ್ಲಾ..? ಅಷ್ಟಕ್ಕೂ ಏನಿದು ಅನಂತರಾಜು ರಾಜು ಸಾವಿನ ಅಸಲಿ ಸತ್ಯ..? ಈ ಎಲ್ಲಾ ವಿಚಾರಗಳನ್ನ ತಿಳಿಯಲು ಈ ಸ್ಟೋರಿ ಓದಿ..
PART-2 ಆ ಒಂದು ಸಾವಿನಾ ಸುತ್ತ.. ಸಾಯುವ ಮುಂಚೆ ಹಿಂಸೆ ಅನುಭವಿಸಿದ್ರಾ ಬಿಜೆಪಿ ಮುಖಂಡ ಅನಂತ್..?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post