ಬೆಂಗಳೂರು: ಬಿಜೆಪಿ ಮುಖಂಡನ ಸಾವಿನ ಸುತ್ತಾ ಹತ್ತಾರು ಅನುಮಾನಗಳು ಹುಟ್ಟಿಕೊಂಡ ಹೊತ್ತಲ್ಲೇ ವೈರಲ್ ಆದ ಅದೊಂದು ಆಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟಿದೆ. ಅದರಲ್ಲೂ ಮೃತನ ಮಡದಿ ಆಡಿದ್ದಾರೆನ್ನಲಾದ ಮಾತುಗಳು ಕರಾಳ ಸತ್ಯವನ್ನ ಸಾರಿ ಸಾರಿ ಹೇಳುವಂತಿದೆ. ಹಾಗಾದ್ರೆ ನನ್ನ ಗಂಡ ನರಳಿ ನರಳಿ ಸಾಯ್ಬೇಕು ಅಂತಾ ಹೆಂಡ್ತಿ ಹೇಳಿದ್ಯಾಕೆ..? ಅನಂತರಾಜು ಸೂಸೈಡ್ ಕೇಸ್ನಲ್ಲಿ ಜೆಡಿಎಸ್ ಮುಖಂಡರೊಬ್ಬರ ವಿಚಾರ ಪ್ರಸ್ತಾಪವಾಗಿದ್ದೇಕೆ..?
ಈ ಒಂದು ಸಾವು ಪೊಲೀಸರನ್ನ ಸಾಕಷ್ಟು ಆಯಾಮಗಳಲ್ಲಿ ತನಿಖೆ ಮಾಡುವಂತೆ ಮಾಡಿದೆ. ಅನಂತರಾಜು ಸಾವಿಗೆ, ರೇಖಾ ಕಾರಣ ಎಂದು ಸುಮಾ ಸಿಡಿಸಿದ ಆರೋಪದ ಸಿಡಿಗುಂಡು ಇದೀಗ ಆಕೆಯ ಕಡೆಗೇ ಯೂ ಟರ್ನ್ ಹೊಡೆದಿದೆ. ಸೂಸೈಡ್ ಮಾಡ್ಕೊಂಡ 20 ದಿನಗಳ ಹಿಂದೆ ನಡೆದ ಆ ಆಡಿಯೋ ಇದೀಗ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದೆ.
ಅದೇನ್ ಆಕ್ರೋಶ.. ಅದ್ಯೇನ್ ಕೋಪ.. ಮಾತಿನ ಮಧ್ಯೆ ಸುಂಸಸ್ಕೃತ ಪದಗಳು ಬೇರೆ. ಕೇಳಿಸ್ಕೊಂಡ್ರಾ..? ಅಬ್ಬಾ ಅದೆಷ್ಟೋ ಭಯಾನಕವಾಗಿದೆ ಅಲ್ವಾ..? ಇದು ಅನಂತರಾಜು ಹೆಂಡ್ತಿ ಸುಮಾ ಹಾಗೂ ರೇಖಾ ನಡುವೆ ನಡೆದಿದೆ ಎಂದು ವೈರಲ್ ಆದ ಆಡಿಯೋ. ಅದರಲ್ಲೂ ನನ್ ಗಂಡ ನರಳಿ ನರಳಿ ಸಾಯ್ಬೇಕು. ನಾನ್ ಕೋಡೋ ಟಾರ್ಚರ್ಗೆ ಇಪ್ಪತು ದಿನ ಬದುಕ್ತಾನ ಅಂತಾ ಅನಂತರಾಜು ಹೆಂಡ್ತಿನೇ ಪ್ರಶ್ನೆ ಮಾಡಿರೋದು ಸಾಕಷ್ಟು ಸಂಚಲನವನ್ನೇ ಹುಟ್ಟು ಹಾಕಿದೆ. ದುರಂತ ಏನಂದ್ರೆ ಇದಾದ ಇಪತ್ತು ದಿನಕ್ಕೆ ಅನಂತರಾಜು ಸಾವಿನ ಮನೆ ಸೇರಿದ್ದಾರೆ. ಡೈರೆಕ್ಟಾಗಿ ಸಾಯಿಸಲ್ಲ , ಅವ್ನೇ ಸಾಯ್ಬೇಕು. ಹಾರ್ಟ್ ಅಟ್ಯಾಕ್ ಆಗಿ ಸಾಯ್ಬೇಕೆಂದು ಪತ್ನಿ ಆಕ್ರೋಶದಿಂದ ಆಡಿರುವ ಮಾತುಗಳು ಮತ್ತಷ್ಟು ಅನುಮಾನಗಳನ್ನ ಹುಟ್ಟು ಹಾಕಿದೆ. ಆ ಆಡಿಯೋ ವೈರಲ್ ಬೆನ್ನಲ್ಲೇ ಮತ್ತೊಂದು ಸ್ಫೋಟಕ ವಿಚಾರ ಕೂಡ ಇದೀಗ ಹೊರ ಬಂದಿದೆ.
ಸಾವಿಗೂ ಮುನ್ನ ಪತ್ನಿಯೇ ಪತಿಯ ಕೈ ಮುರಿದಿದ್ರಾ?
ಮನೆಯಲ್ಲಿ ಸಿಕ್ಕ ಡೆತ್ ನೋಟ್ನ ಅಸಲಿ ಸೀಕ್ರೆಟ್ ಏನು?
ಅನಂತರಾಜು ಸಾವಿಗೂ ಮುನ್ನ ಪತ್ನಿಯೇ ಪತಿಯ ಕೈ ಮುರಿದಿದ್ರಾ? ಇಂತಹದೊಂದು ಪ್ರಶ್ನೆ ಇದೀಗ ಎಲ್ಲೆಡೆ ಹುಟ್ಕೊಂಡಿದೆ. ಅನಂತರಾಜು ಕೈಮುರಿದು ಹಾರ್ಟ್ ಆ್ಯಟಾಕ್ ಆಗೋ ರೀತಿ ಪ್ಲಾನ್ ಮಾಡಿದ್ಲಾ ಅನ್ನೋ ಅನುಮಾನ ಕೂಡ ಶುರುವಾಗಿದೆ. ಯಾಕಂದ್ರೆ ಆಡಿಯೋದಲ್ಲಿ ರೇಖಾ ಮಾತ್ನಾಡಿರುವಂತೆ, ಅನಂತರಾಜುನನ್ನ ಈಸಿಯಾಗಿ ಸಾಯೋಕೆ ಬಿಡಲ್ಲ.. ನರಳಿ ನರಳಿ ಸಾಯೋ ರೀತಿ ಮಾಡ್ತೀನಿ ಅಂತಾ ಪತ್ನಿ ಸುಮಾ ಅಂದಿದ್ಲು. ಇದರಿಂದ ಸಾಯುವ ಮುನ್ನ ಅಂತರಾಜುಗೆ ಚಿತ್ರ ಹಿಂಸೆ ಕೊಡಲಾಯ್ತಾ ಅನ್ನೋ ಶಂಕೆ ಕೂಡ ಮೂಡಿದೆ.
ಹೀಗೆ ಹತ್ತಾರು ಅನುಮಾನಗಳಿಗೆ ಕಾರಣವಾಗ್ತಿದ್ದಂಗೆ, ಸೂಸೈಡ್ ಮಾಡ್ಕೊಂಡ ದಿನ ಅನಂತರಾಜು ಮನೆಯಲ್ಲಿ ಸಿಕ್ಕ ಅದೊಂದು ಡೆತ್ ನೋಟ್ ಮೇಲೆ ಕೂಡ ಡೌಟ್ ಮೂಡಿದೆ. ಪ್ರಿಯಾ ಸುಮಾ ನನ್ನನ್ನ ನೀನು ಕ್ಷಮಿಸಿ ಬಿಡು. ನಾನು ಕ್ಷಮೇ ಕೇಳಲು ಕೂಡ ಅರ್ಹನಲ್ಲ. ಹೆಣ್ಣಿನ ಸಹವಾಸ ಮಾಡಿ, ಫೋಟೋ ವಿಡಿಯೋಗಳ ಟ್ರ್ಯಾಪ್ಗೆ ಸಿಲುಕಿ, ಬ್ಲ್ಯಾಕ್ ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗ್ತಿಲ್ಲ.. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೋ ಎಂದು, ಅನಂತರಾಜು ಸಾಯುವ ಮುನ್ನ ಬರೆದಿದ್ರಂತೆ. ಇದೀಗ ಈ ಡೆತ್ ನೋಟ್ ಕುರಿತು ಕೂಡ ಸಾಕಷ್ಟು ಸಂಶಯ ಮೂಡಿದೆ. ನಿಜಕ್ಕೂ ಅನಂತರಾಜುವೇ ಡೆತ್ ನೋಟ್ ಬರೆದ್ರಾ ಅನ್ನೋ ಪ್ರಶ್ನೆ ಕೂಡ ಹುಟ್ಟಿಕೊಂಡಿದ್ದು, ಪೊಲೀಸರು ಈ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಇಂತಹ ಹೊತ್ತಲ್ಲೆ ರೇಖಾ ಹಾಗೂ ಜೆಡಿಎಸ್ ಮುಖಂಡನೊಬ್ಬನ ಭೇಟಿ ವಿಚಾರ ಕೂಡ ಮುನ್ನಲೆಗೆ ಬಂದಿದೆ.
ಜೆಡಿಎಸ್ ಮುಖಂಡನ ಜೊತೆ ಚರ್ಚೆ
ಅನಂತ್ ರಾಜುಗೆ ಹಲ್ಲೆ ಮಾಡುತ್ತಿರುವುದಾಗಿ ರೇಖಾಗೆ ಸುಮಾ ಕರೆ ಮಾಡಿ ಹೇಳ್ತಿದ್ದಂಗೆ, ರೇಖಾ ಜೆಡಿಎಸ್ ಮುಖಂಡನೊಬ್ಬರನ್ನ ಭೇಟಿಯಾಗಿ ಈ ವಿಚಾರ ತಿಳಿಸಿದ್ರಂತೆ.ಅನಂತ್ ರಾಜ್ಗೆ ಹೆಚ್ಚು ಕಡಿಮೆಯಾದ್ರೆ ನನಗೆ ಯಾರು ದಿಕ್ಕಿಲ್ಲ ಅಲವತ್ತುಕೊಂಡಿದ್ಲಂತೆ. ನೀವು ಮುಂದೆ ಹೋಗಿ ವಿಚಾರ ಪ್ರಸ್ತಾಪಿಸಿದ್ರೆ ನಿಮಗೆ ಬೆಂಬಲ ನೀಡ್ತೀವಿ.ಬಟ್ ವೈಯಕ್ತಿಕ ವಿಚಾರ ನಿಮ್ಮೊಳಗೆ ಬಗೆಹರಿಸಿಕೊಳ್ಳುವಂತೆ ಜೆಡಿಎಸ್ ಮುಖಂಡರು ಸಲಹೆ ನೀಡಿದ್ರು ಅನ್ನೋ ವಿಚಾರ ಕೂಡ ಇದೀಗ ರಿವೀಲ್ ಆಗಿದೆ.
ಹೀಗೆ, ಅನಂತರಾಜು ಸೂಸೈಡ್ ಕೇಸ್ ಸಂಬಂಧ ದಿನಕ್ಕೊಂದರಂತೆ ಹೊಸ ಹೊಸ ವಿಚಾರಗಳು ತೆರೆದುಕೊಳ್ತಿದೆ. ಅಲ್ದೇ ಈ ಹಿಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ ಅನಂತ್ ರಾಜು, ಮಾತ್ರೆ ಸೇವಿಸಿದ್ದರ ಕುರಿತ ಮಾಹಿತಿ ಕೂಡ ಇದೀಗ ಹೊರ ಬಿದ್ದಿದೆ. ಒಂದು ಕಡೆ ಮಡದಿಯ ಆಡಿಯೋ, ಮತ್ತೊಂದು ಕಡೆಯಲ್ಲಿ ರೇಖಾ ಮೇಲೆ ಕೇಳಿ ಬಂದಿರುವ ಹನಿಟ್ರ್ಯಾಪ್ ಮ್ಯಾಟರ್.. ಇದೀಗ ಈ ಕೇಸ್ನಲ್ಲಿ ಇಬ್ಬರ ಹೆಸರು ಕೂಡ ತಳಕು ಹಾಕಿಕೊಂಡಿದ್ದು ಮಾತ್ರವಲ್ಲ.. ಇಬ್ಬರ ಹೆಸರು ಕೂಡ ಕೇಳಿ ಬಂದಿರುವುದರಿಂದ ಇಬ್ಬರ ಮೇಲೂ ಕೂಡ ಅನುಮಾನ ನೆಟ್ಟಿದೆ.
ಹನಿಟ್ರ್ಯಾಪ್ , ಸಂಸಾರದ ಕಲದ ವಿಚಾರ ಕೂಡ ಹೊರ ಬಿದ್ದಿದೆ. ನಿಜಕ್ಕೂ ಬಿಜೆಪಿ ಮುಖಂಡನ ಸಾವಿನ ಸತ್ಯವೇನು..? ವೈರಲ್ ಆದ ಆಡಿಯೋದ ಅಸಲಿಯತ್ತೇನು..? ಹನಿ ಟ್ರ್ಯಾಪ್ ಅಸಲಿ ರಹಸ್ಯವೇನು..? ಡೆತ್ ಸೀಕ್ರೆಟ್ ಏನು..? ಹೀಗೆ ಪೊಲೀಸರು ಕೂಡ ಹತ್ತಾರು ಆಮಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇಲ್ಲಿ ನಾವು ಮತ್ತೊಂದು ಪ್ರಮುಖ ಅಂಶ ಗಮನಿಸ್ಲೇ ಬೇಕು. ಅನಂತರಾಜು ಸಾವಿಗೆ ಸಂಬಂಧಪಟ್ಟಂತೆ ವೈರಲ್ ಆದ ಆಡಿಯೋವನ್ನ ಪ್ರಮುಖ ಸಾಕ್ಷಿ ಎಂದು ಪರಿಗಣಿಸಲು ಸಾಧ್ಯವಿಲ್ಲ.. ಅದ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಕೂಡ. ಆದ್ದರಿಂದ ಈ ಸಾವಿಗೆ ಸಂಬಂದಪಟ್ಟಂತ ಅಸಲಿ ರಹಸ್ಯವನ್ನ ಹೊರತೆಗೆದು, ಅನಂತರಾಜು ಸಾವಿಗೆ ನ್ಯಾಯ ಒದಗಿಸಬೇಕಾದ ಜವಾಬ್ದಾರಿ ಪೊಲೀಸರ ಹೆಗಲ ಮೇಲಿದೆ.
ಸುಮಾ ಹಾಗೂ ರೇಖಾ ನಡುವಿನ ಜಿದ್ದಿಗೆ ಅನಂತರಾಜು ಬಲಿಯಾದ್ರಾ..? ಗೊತ್ತಿಲ್ಲ.. ಇದ್ಕೆ ಉತ್ತರ ಕೊಡ್ಬೇಕಾದದ್ದು ಪೊಲೀಸ್ ತನಿಖೆ. ಯಾವುದೇ ವ್ಯಕ್ತಿ ಸೂಸೈಡ್ ಮಾಡ್ಕೊಂಡಾಗ ಹತ್ತಾರು ಅನುಮಾನಗಳು ಹುಟ್ಟೋದು ಕಾಮನ್. ಅದರಲ್ಲೂ ರಾಜಕೀಯ ವ್ಯಕ್ತಿ ಅಂದ್ರೆ ಕೇಳ್ಬೇಕಾ ಹೇಳಿ..? ಈ ವಿಚಾರದಲ್ಲೂ ಕೂಡ ಅದೇ ಆಗಿದೆ. ಹಣ, ಅಂತಸ್ತು, ಅಧಿಕಾರ, ಯಶಸ್ಸು ಎಲ್ಲವೂ ಇದ್ರೂ ಕೂಡ.. ದುರಂತ ಅಂತ್ಯ ಕಂಡಿದ್ದು ಮಾತ್ರ ವಿಪರ್ಯಾಸ.
ಇದನ್ನೂ ಓದಿ: BJP ಮುಖಂಡನ ಸಾವಿಗೆ ಯಾರೂ ಊಹಿಸದ ಟ್ವಿಸ್ಟ್.. ಹನಿಟ್ರ್ಯಾಪ್ ಎಂದಾಕೆಯೇ ಇಂದು ಟ್ರ್ಯಾಪ್ ಆದಳಾ?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post