ಕಲರ್ಫುಲ್ ಐಪಿಎಲ್ ಲೀಗ್ ಸ್ಟೇಜ್ ಮುಗಿಯೋಕೆ ಬಾಕಿ ಇರೋದು, ಜಸ್ಟ್ ಎರಡೇ ದಿನ. IPLಗೆ ಎಂಟ್ರಿಕೊಟ್ಟ ಹೊಸ ಟೀಮ್ಸ್, ಪ್ಲೇ ಆಫ್ಗೆ ಭರ್ಜರಿ ಎಂಟ್ರಿ ಕೊಟ್ಟಿದ್ರೆ, ಪ್ಲೆ ಆಫ್ನ ಉಳಿದೆರಡು ಸ್ಪಾಟ್ಗಾಗಿ, ಯಾವ ತಂಡಗಳು ಪ್ರವೇಶ ಕೊಡ್ತವೆ ಅನ್ನೋದು ಸಸ್ಪೆನ್ಸ್ ಆಗಿಯೇ ಉಳಿದಿದೆ. ಆದ್ರೆ IPLನ ಮೋಸ್ಟ್ ಸಕ್ಸಸ್ಫುಲ್ ಟೀಮ್ಸ್, ಲೀಗ್ ಸ್ಟೇಜ್ನಿಂದಲೇ ಔಟ್ ಆಗಿರೋದು, ಫ್ಯಾನ್ಸ್ಗೆ ತೀವ್ರ ನಿರಾಸೆ ಮೂಡಿಸಿದೆ.
ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್.. IPL ಇತಿಹಾಸದಲ್ಲಿ ಹೆಚ್ಚು ಟ್ರೋಫಿ ಜೊತೆಗೆ ಹೆಚ್ಚು ಪಂದ್ಯಗಳನ್ನ ಗೆದ್ದ ತಂಡಗಳು. ಆದ್ರೆ ಈ ಬಾರಿ ಐಪಿಎಲ್ನಲ್ಲಿ ಲೀಗ್ನಿಂದಲೇ ಹೊರಬಿದ್ದಿವೆ. ಹಾಗಾಗಿ ಈ ತಂಡಗಳ ನಾಯಕರ ಮುಂದಿನ ನಡೆ, ಸಾಕಷ್ಟು ಕುತೂಹಲ ಕೆರಳಿಸಿದೆ. ಹೀನಾಯ ಸೋಲುಗಳಿಂದ ಮುಜುಗರಕ್ಕೆ ಒಳಗಾಗಿರೋ ಮೂವರು, ಮುಂದಿನ IPLನಲ್ಲಿ ಖಡಕ್ ನಿರ್ಧಾರ ತಗೋಳೋಕೆ ರೆಡಿಯಾಗಿದ್ದಾರೆ ಎನ್ನಲಾಗ್ತಿದೆ.
ನಾಯಕತ್ವ ಬಿಟ್ಟುಕೊಟ್ಟು ತಂಡದಲ್ಲೇ ಉಳಿತಾರಾ ರೋಹಿತ್..?
ಮುಂಬೈ ಇಂಡಿಯನ್ಸ್ಗೆ 5 ಟ್ರೋಫಿ ಗೆದ್ದುಕೊಟ್ಟ ನಾಯಕ, ರೋಹಿತ್ ಶರ್ಮಾ.! ಆದ್ರೆ ಅಂತಹ ಸಕ್ಸಸ್ಫುಲ್ ಕ್ಯಾಪ್ಟನ್, ಈ ಬಾರಿ ಸಖತ್ ವೈಫಲ್ಯ ಅನುಭವಿಸಿದ್ರಿಂದ, ರೋಹಿತ್ ತಂಡದಲ್ಲೇ ಉಳಿತಾರಾ ಅನ್ನೋ ಪ್ರಶ್ನೆ ಹುಟ್ಟಿದೆ. ಯಾಕಂದ್ರೆ ಅತ್ತ ಟೀಮ್ ಇಂಡಿಯಾ, ಇತ್ತ ಮುಂಬೈ ಇಂಡಿಯನ್ಸ್ಗೂ, ನಾಯಕನಾಗಿರೋ ರೋಹಿತ್ಗೆ ಒತ್ತಡ ಹೆಚ್ಚಾಗ್ತಿದ್ಯಂತೆ. ಇದ್ರಿಂದ ರೋಹಿತ್ ಕ್ಯಾಪ್ಟನ್ಸಿ ಜೊತೆಗೆ ತಂಡವನ್ನೇ ತೊರೆದು, ಯಂಗ್ ಕ್ರಿಕೆಟರ್ಗೆ ಕ್ಯಾಪ್ಟನ್ಸಿ ಬಿಟ್ಟುಕೊಡ್ತಾರೆ ಎನ್ನಲಾಗ್ತಿದೆ. ಸದ್ಯ ರೋಹಿತ್ ನಡೆ ಫುಲ್ ಸಸ್ಪೆನ್ಸ್ ಆಗಿಯೇ ಉಳಿದಿದೆ.
ಎಂಎಸ್ ಧೋನಿ ಚೆನ್ನೈ ತಂಡದಲ್ಲಿ ಇರ್ತಾರಾ.? ಇರಲ್ವಾ..?
ಹೌದು..! ಮುಂದಿನ ಸೀಸನ್ನಲ್ಲಿ MS ಧೋನಿ ಚೆನ್ನೈ ತಂಡದಲ್ಲೇ ಉಳಿತಾರಾ..? ಇಲ್ವೋ.? ಇದು ಪ್ರತಿ ಕ್ರಿಕೆಟ್ ಅಭಿಮಾನಿಗಳಿಗೆ ಕಾಡ್ತಿರೋ ಪ್ರಶ್ನೆ. ಚೆನ್ನೈಗಾಗಿ 4 ಟ್ರೋಫಿ ಗೆದ್ದು ಕೊಟ್ಟ ತಲೈವಾ, ಈ ಬಾರಿ ನಾಯಕತ್ವ ಬಿಟ್ಟುಕೊಟ್ಟಿದ್ರು. ಆದ್ರೆ ಕ್ಯಾಪ್ಟನ್ಸಿ ಪಟ್ಟ ಪಡೆದ ಜಡೇಜಾ, ವೈಫಲ್ಯ ಅನುಭವಿಸಿ ಮತ್ತೆ ಧೋನಿಗೆ ಹಸ್ತಾಂತರಿಸಿದ್ರು. ಇದು ತಂಡದ ಹಿನ್ನಡೆಗೆ ಕಾರಣವಾಗಿತ್ತು. ಇನ್ನ ಚೆನ್ನೈನಲ್ಲೇ ನನ್ನ ಕೊನೇ ಪಂದ್ಯ ಅಂತಿದ್ದಾರೆ ಧೋನಿ. ಸದ್ಯ ಅವರು ವಯಸ್ಸು ಕೂಡ 40 ದಾಟಿದೆ. ಹೀಗಾಗಿ ತಮ್ಮ ನಿರ್ಧಾರ ಬದಲಿಸ್ತಾರಾ.? ಆ ಮೂಲಕ ಕೋಚಿಂಗ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸ್ತಾರಾ..? ಅನ್ನೋದು ಇನ್ನೂ ಕುತೂಹಲ.
ಮುಂದಿನ IPLನಲ್ಲಾದ್ರೂ ಅಯ್ಯರ್ಗೆ ಸಿಗುತ್ತಾ ಸ್ವಾತಂತ್ರ್ಯ..?
IPL ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಮೇಲೆ, ಭಾರೀ ನಿರೀಕ್ಷೆ ಇಡಲಾಗಿತ್ತು. ಅದಕ್ಕಾಗಿ ಕೊಲ್ಕತ್ತಾ 12.5 ಕೋಟಿ ಇನ್ವೆಸ್ಟ್ ಮಾಡಿ ತಂಡಕ್ಕೆ ಬರಮಾಡಿಕೊಂಡಿದ್ದಲ್ಲದೆ, ನಾಯಕತ್ವ ಕೂಡ ನೀಡ್ತು. ಆದ್ರೆ ಅಯ್ಯರ್ ನಾಯಕತ್ವದ ಜೊತೆಗೆ, ಬ್ಯಾಟಿಂಗ್ನಲ್ಲೂ ಹೇಳಿಕೊಳ್ಳುವಂತಹ ಪರ್ಫಾಮೆನ್ಸ್ ನೀಡಿಲ್ಲ. ಆದ್ರೆ ಇದಕ್ಕೆಲ್ಲಾ ಕಾರಣವಾಗಿದ್ದು, ಅಯ್ಯರ್ಗೆ ಸ್ವಾತಂತ್ರ್ಯ ಸಿಗದಿದ್ದರಿಂದ.! ಸಿಇಒ ತಂಡದ ಆಯ್ಕೆಯಲ್ಲಿ ಭಾಗಿಯಾಗ್ತಿದ್ದಾರೆ ಅನ್ನೋದು ಅಯ್ಯರ್ ಹೇಳಿಕೆ, ಭಾರೀ ಸಂಚಲನ ಸೃಷ್ಟಿಸಿತ್ತು. ಇದು ತಂಡದ ಹಿನ್ನೆಡೆಗೆ ತುಂಬಾ ಕಾರಣವಾಯ್ತು. ಹಾಗಾಗಿ ಮುಂದಿನ ಸೀಸನ್ನಲ್ಲಾದ್ರೂ ಅಯ್ಯರ್ಗೆ ಸಂಪೂರ್ಣ ಸ್ವಾತಂತ್ರ್ಯ ಸಿಗುತ್ತಾ ಇಲ್ವಾ ಅನ್ನೋದು, ಕಾಲವೇ ಉತ್ತರ ಕೊಡಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post