ಕೊಪ್ಪಳ: ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಮಧ್ಯೆ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಬೃಹತ್ ಗಾತ್ರದ ಮೀನೊಂದು ಪತ್ತೆಯಾಗಿದೆ. ತಾಲೂಕಿನ ತಿಗರಿ ಗ್ರಾಮದ ಬಳಿ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಬೃಹತ್ ಆಕಾರದ ಮೀನು ಪ್ರತ್ಯಕ್ಷವಾಗಿದೆ.
ಸತತವಾಗಿ ಮಳೆಯಾದ ಹಿನ್ನಲೆಯಲ್ಲಿ ತುಂಗಭದ್ರಾ ಜಲಾಶಯದಲ್ಲಿ 15 ಕೆ.ಜಿ ಬೃಹತ್ ಗಾತ್ರದ ಮೀನು ಕಂಡು ಬಂದಿದೆ. ದೊಡ್ಡ ಮೀನನ್ನು ನೋಡಿದ ಸ್ಥಳೀಯರು ಅಚ್ಚರಿಗೆ ಒಳಗಾಗಿದ್ದಾರೆ. ಇನ್ನು ಗ್ರಾಮಸ್ಥರು ಬೃಹತ್ ಆಕಾರದ ಮೀನು ನೀರಿನಲ್ಲಿ ಹೋಗುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಒಂದು ಮೀನನ್ನು ನೋಡುತ್ತಿದ್ದಂತೆ, ಮತ್ತೊಂದು ಬೃಹತ್ ಮೀನು ಪ್ರತ್ಯಕ್ಷವಾಗಿದೆ. ಗ್ರಾಮಸ್ಥರ ಕಣ್ಣಿಗೆ ಬಿದ್ದ ತಕ್ಷಣವೇ, ಕ್ಷಣ ಮಾತ್ರದಲ್ಲೇ ಮಾಯವಾಗಿದೆ. ಇದನ್ನ ಕಂಡ ಸ್ಥಳೀಯ ಗ್ರಾಮಸ್ಥರು ಅಚ್ಚರಿಗೆ ಒಳಗಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post