ಗಟ್ಟಿಮೇಳದ ಖ್ಯಾತಿಯ ಅಂಜಲಿ ಪಾತ್ರಧಾರಿಯಾದ ನಟಿ ಮಹತಿ ವೈಷ್ಣವಿ ಭಟ್ ಸಾಮಾನ್ಯಾಗಿ ನಿಮ್ಗೆಲ್ಲಾ ಗೊತ್ತೆ ಇರ್ತಾರೆ..ಜೀ ಕನ್ನಡದ ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲೇ ಅರಳಿದ ಹೂವು ಇದು.. ನಂತರ ಜೀ ಕನ್ನಡದ ಖ್ಯಾತ ಧಾರಾವಾಹಿಯಾದ ಗಟ್ಟಿಮೇಳದಲ್ಲಿ ಕೊನೆಯ ಮಗಳಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಮಹತಿ ಈಗ ಎಲ್ಲರ ಮನೆ ಮಗಳಾಗಿದ್ದಾಳೆ. ಇವರ ಅತ್ಯದ್ಭುತ ನಟನೆಯಿಂದ ತಮ್ಮದೆ ಫ್ಯಾನ್ ಬೇಸ್ ಕೂಡ ಹೊಂದಿದ್ದಾರೆ. ಸದ್ಯ ಎಸ್ಎಸ್ಎಲ್ಸಿಯನ್ನ ಸಕ್ಸಸ್ ಫುಲ್ ಆಗಿ ಕಂಪ್ಲೀಟ್ ಮಾಡಿದ್ದಾರೆ.
ಶೂಟಿಂಗ್ ಬ್ಯೂಸಿನಲ್ಲೂ ಪಾಠಕ್ಕೆ ಏನು ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ ನಟಿ ಮಹತಿ. ಎಸ್.ಎಸ್.ಎಲ್.ಸಿ ಅನ್ನೋದು ಎಲ್ಲರ ಜೀವನದಲ್ಲೂ ಒಂದು ಪ್ರಮುಖವಾದ ಘಟ್ಟ. ಈ ಘಟ್ಟದಲ್ಲಿ ಮಹತಿ ಶೇ. 99.04%ರಷ್ಟು ಅಂಕಗಳಿಸಿದ್ದಾರೆ. ಈ ಖುಷಿ ಸಮಾಚಾರ ಮಹತಿಗೆ ಹಾಗೂ ಅವರ ಕುಟುಂಬಕ್ಕೆ ಅತಿಯಾದ ಸಂತಸ ತಂದು ಕೊಟ್ಟಿದೆ. ಈ ಖುಷಿಯನ್ನು ಮಹತಿ ಕುಂಟುಂಬ ನಮ್ಮ ನ್ಯೂಸ್ ಫಸ್ಟ್ ಜೊತೆ ಹಂಚಿಕೊಂಡಿದ್ದಾರೆ. ಮಹತಿ ತಂದೆ ಮಗಳ ಸಾಧನೆಗೆ ಹರ್ಷ ವ್ಯಕ್ತ ಪಡಿಸಿದ್ದಾರೆ. ಶೂಟಿಂಗ್ ಬ್ಯೂಸಿನಲ್ಲಿ ಇದ್ರು ಕೂಡ ಬಹಳ ಶ್ರದ್ಧೆ ಇಂದ ಓದಿ ಈ ಮಟ್ಟದ ಅಂಕಗಳನ್ನು ಸ್ಕ್ರೋರ್ ಮಾಡಿರೋದು ತುಂಬಾನೆ ಖುಷಿಯ ವಿಚಾರ. ನಮ್ಮ ಹಿತೈಷಿಗಳೇ ಎಷ್ಟೋ ಬಾರಿ sslcಯಲ್ಲಿದ್ದಾಳೆ ಇನ್ಮೇಲೆ ಈ ಶೂಟಿಂಗ್ನೆಲ್ಲಾ ನಿಲ್ಲಿಸಿ ಬಿಡಿ ಅಂತ ಹೇಳಿದ್ರು. ಆದ್ರೆ ನನ್ನ ಮಗ್ಳು ಅದನ್ನೇ ಚಾಲೆಂಜ್ ಆಗಿ ತಗೊಂಡು ಇವತ್ತು ಅವಳು ಪ್ರೂವ್ ಮಾಡಿದ್ದಾಳೆ ಎಂದು ಮಗಳ ಅಚೀವ್ಮೆಂಟ್ ಬಗ್ಗೆ ನ್ಯೂಸ್ ಫಸ್ಟ್ ಜೊತೆ ಹಂಚಿಕೊಂಡಿದ್ದಾರೆ.
ಇನ್ನೂ ಮಹತಿಗೂ ಕೂಡ ರಿಸಲ್ಟ್ ದಿನ ಅತ್ಯಂತ ಸಂತಸ ಕೊಟ್ಟಿದ ದಿನವೆಂದು ಹೇಳಿದ್ದಾರೆ. ಇಷ್ಟೆಲ್ಲಾ ಅಚೀವ್ ಮಾಡೋಕೆ ಕಾರಣ ನನ್ನ ಫ್ಯಾಮಿಲಿ ಹಾಗೂ ನನ್ನ ಸೀರಿಯಲ್ ಟೀಮ್ ಆ್ಯಂಡ್ ಸಿನಿಮಾ ಟೀಮ್ ಎಂದು ಹೆಮ್ಮೆ ಇಂದ ಹೆಳಿಕೊಂಡಿದ್ದಾರೆ. ನನ್ನ ಶಾಟ್ಸ್ ಬರೋವರ್ಗ ನಾನು ಓದಿ ಕೊಳ್ತಾ ಇದ್ದೆ. ನನ್ನ ಫೇವರೈಟ್ ಸಬ್ಜೆಕ್ಟ್ ಅಂದ್ರೆ ಮ್ಯಾಥ್ಸ್ ಅದರಲ್ಲಿ ನಾ ಅಂದು ಕೊಂಡಂತೆ 100ಕ್ಕೆ100 ಅಂಕ ಗಳಿಸಿರೋದು ಖುಷಿಯಿದೆ. ಒಟ್ಟಿನಲ್ಲಿ ಇಷ್ಟು ಪರ್ಸೆಂಟೇಜ್ ಬಂದಿರೋದು ನನ್ನ ಮನಸ್ಸಿಗೆ ನೆಮ್ಮದಿ ನೀಡಿದೆ ಎಂದು ಮಹತಿ ಹೇಳಿದ್ದಾರೆ. ನೆಕ್ಸ್ಟ್ ನಾನು ಪಿಯುಸಿಯಲ್ಲಿ ಪಿ.ಸಿ.ಎಂ.ಸಿ ಯನ್ನು ತಂಗೊಂಡು ಓದನ್ನು ಮುಂದುವರೆಸ ಬೇಕೆಂದಿದ್ದೀನಿ ಎಂದು ನಮ್ಮ ನ್ಯೂಸ್ ಫಸ್ಟ್ ಜೊತೆ ಅವರ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಮಹತಿ ತಾಯಿ ಕೂಡ ಮಗಳ ಬಗ್ಗೆ ಹರ್ಷ ವ್ಯಕ್ತ ಪಡಿಸಿದ್ದಾರೆ. ಎಲ್ಲಾ ವಿಷ್ಯಗಳ ಮಧ್ಯೇ ಇವತ್ತು. ಈ ಮಟ್ಟಕ್ಕೆ ಸ್ಕೋರ್ ಮಾಡಿರೋದು ಖುಷಿಯಿದೆ. ಓದಿಗೆ ಎಷ್ಟು ರೆಸ್ಪೆಕ್ಟ್ ಕೊಡ್ತಾಳೋ ನನ್ ಮಗ್ಳು ಅಷ್ಟೇ ರೆಸ್ಪಕ್ಟ್ನ ಕ್ಯಾಮೇರಾಗಳಿಗೂ ನನ್ನ ಮಗಳು ಕೊಡ್ತಾಳೆ. ಆಗಾಗಿ ಎರಡಕ್ಕೂ ಧಕ್ಕೆಯಾಗದಂತೆ ನನ್ ಮಗಳು ಬ್ಯಾಲೆನ್ಸ್ ಮಾಡಿದ್ದ ರೀತಿ ನನಗೆ ಅತ್ಯಂತ ಖುಷಿ ತಂದಿದೆ ಎಂದು ನ್ಯೂಸ್ ಫಸ್ಟ್ ಜೊತೆ ಮಾತ್ನಾಡಿದ್ದಾರೆ. ಮಹತಿಯವರು ತಮ್ಮ ಓದು ಹಾಗೂ ತಮ್ಮ ಕಲಾ ಬದಕನ್ನು ಎರಡನ್ನು ಅತ್ಯಂತ ಅದ್ಭುತವಾಗಿ ತೂಗಿಸಿ ಇವತ್ತು ಈ ಅಚೀವ್ಮೆಂಟ್ನ್ನು ತಮ್ಮಾದಾಗಿಸಿಕೊಂಡಿದ್ದಾರೆ. ನಮ್ಮ ಕಡೆಯಿಂದಲು ಮಹತಿಗೆ ಕಂಗ್ರಾಜೂಲೇಶನ್ಸ್..
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post