ಟಿಆರ್ಪಿ ಲಿಸ್ಟ್ನಲ್ಲಿ ಸೀರಿಯಲ್ಗಳಲ್ಲಿ ಕೆಲ ಪ್ರಮುಖ ಬದಲಾವಣೆಗಳಾಗಿವೆ. ಪುಟ್ಟಕ್ಕನ ಮಕ್ಕಳು ಮತ್ತೇ ಕಮ್ ಬ್ಯಾಕ್ ಮಾಡಿದ್ದು, ಗಟ್ಟಿಮೇಳ ಸೀರಿಯಲ್ ಅನ್ನ ಜಸ್ಟ್ ಒನ್ ಪಾಯಿಂಟ್ನಲ್ಲಿ ಬೀಟ್ ಮಾಡಿದೆ ಪುಟ್ಟಕ್ಕನ ಮಕ್ಕಳು. ಗಟ್ಟಿಮೇಳ 10 ಟಿವಿಆರ್ ಪಡೆದಿದ್ದರೇ, ಪುಟ್ಟಕ್ಕನ ಮಕ್ಕಳು 10.1 ಟಿವಿಆರ್ ಪಡೆದುಕೊಂಡು ನಂಬರ್ ಒನ್ ಸ್ಥಾನ ಅಲಂಕರಿಸಿದೆ. ಗಟ್ಟಿಮೇಳ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಇನ್ನೂ ಪ್ರೈಮ್ ಟೈಮ್ನಲ್ಲಿ ಸತ್ಯ ಸ್ಲಾಟ್ ಲೀಡರ್ ಆಗಿದೆ. 7 ಟಿವಿಆರ್ ಪಡೆಯುದರ ಮೂಲಕ ಜೊತೆ ಜೊತೆಯಲಿ ಸೀರಿಯಲ್ನ ಹಿಂದಿಕ್ಕಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಕಾರ್ತಿಕ್-ಸತ್ಯ ಮುದುವೆ ಸೀನ್ಗಳಿಗೆ ವೀಕ್ಷಕರು ಭರ್ಜರಿ ರೆಸ್ಪಾನ್ಸ್ ನೀಡಿದ್ದಾರೆ.
ಹಿಟ್ಲರ್ ಕಲ್ಯಾಣ 8.5 ಟಿವಿಆರ್ ಪಡೆದು ಮೂರನೇ ಸ್ಥಾನದಲ್ಲಿದೆ. ವೀಕೆಂಡ್ ಶೋಗಳಿಗೆ ಬರೋದಾದರೆ 6.4 ಟಿವಿಆರ್ ಪಡೆದುಕೊಂಡು ಡಿಕೆಡಿ ನಂಬರ್ ಒನ್ ಸ್ಥಾನದಲ್ಲಿಯೇ ಮುಂದುವರೆದಿದೆ.
ಡ್ರಾಮಾ ಜೂನಿಯರ್ಸ್ 6.3 ಟಿವಿ ಆರ್ ಮೂಲಕ ಎರಡನೇ ಸ್ಥಾನ ಅಲಂಕರಿಸಿದೆ. ಭರ್ಜರಿಯಾಗಿ ಮೂಡಿ ಬಂದಿದ್ದ ಗಿಚ್ಚಿ ಗಿಲಿಗಿಲಿ ಹಾಗೂ ಡಾನ್ಸಿಂಗ್ ಚಾಂಪಿಯನ್ ಮಹಾಮಿಲನ 4.3 ಟಿವಿಆರ್ನೊಂದಿಗೆ ಮೂರನೇ ಸ್ಥಾನದಲ್ಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post