ಪಂಜಾಬ್: 34 ವರ್ಷಗಳ ಹಿಂದೆ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನ ಬಂಧಿಸಲಾಗಿತ್ತು. ಈ ಬೆನ್ನಲ್ಲೇ ಸಿಧು ತಮ್ಮ ವೈದ್ಯಕೀಯ ತಪಾಸಣೆಗಾಗಿ ಎರಡು ದಿನಗಳ ಕಾಲವಕಾಶಕ್ಕೆ ಪಟಿಯಾಲ ಕೋರ್ಟ್ಗೆ ಮನವಿಯನ್ನು ಸಲ್ಲಿಸಿದ್ದಾರೆ. ಆದರೆ ಪಟಿಯಾಲ ನ್ಯಾಯಾಲಯವು ಈ ಮನವಿಯನ್ನ ತಿರಸ್ಕರಿತ್ತು.
ಕೋರ್ಟ್ ಆದೇಶದ ಬೆನ್ನಲ್ಲೇ ಸಿಧು ಸ್ವತಃ ತಾವೇ ಕೋರ್ಟ್ಗೆ ಶರಣಾಗಲು ಮುಂದಾಗಿದ್ದರು. ಇವರನ್ನ ಪಂಜಾಬ್ ಕೇಂದ್ರ ಕಾರಾಗೃಹದಲ್ಲಿ ಬಂಧಿಸಲಾಗಿತ್ತು. ಆದರೆ ಈಗ ಸಿಧು ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಕಾರಣ, ಪಟಿಯಾಲದ ರಾಜೇಂದ್ರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post