ಕೊಪ್ಪಳ: ಬೈಕ್ಗೆ ಕಾರ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಸವಾರ ಸೇರಿ ಮತ್ತೋರ್ವ ಸಾವನ್ನಪ್ಪಿದ್ದಾನೆ. ಕಾರಟಗಿ ತಾಲೂಕಿನ ಜೂರಟಗಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಇಬ್ಬರು ಅಸುನೀಗಿದ್ದಾರೆ.
ಕಾರಟಗಿಯಿಂದ ಗಂಗಾವತಿ ಕಡೆಗೆ ಬೈಕ್ನಲ್ಲಿ ಇಬ್ಬರು ಬರುತ್ತಿದ್ದರು. ಆಗ ಗಂಗಾವತಿಯಿಂದ ಸಿಂಧನೂರಿಗೆ ಹೊರಟಿದ್ದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇನ್ನೂ ಮೃತರ ಗುರುತು ಪತ್ತೆಯಾಗಿಲ್ಲ.
ಇನ್ನು, ಈ ಸಂಬಂಧ ಕೇಸ್ ದಾಖಲಾಗಿದ್ದು, ಕಾರಟಗಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post