ಲಖನೌ: ವಾರಾಣಸಿಯ ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಮೇ 26ಕ್ಕೆ ಆರಂಭ ಮಾಡೋದಾಗಿ ಜಿಲ್ಲಾ ನ್ಯಾಯಾಲಯ ಹೇಳಿದೆ.
ನಿನ್ನೆ ಅರ್ಜಿಗಳ ವಿಚಾರಣೆ ಕುರಿತಂತೆ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಪೀಠ ನಾಳೆ ಆದೇಶ ನೀಡಿವುದಾಗಿ ಹೇಳಿತ್ತು. ಇಂದು ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ ಮುಸ್ಲಿಂ ಪರ ವಕೀಲರು ವಾದ ಮಂಡನೆ ಮುಂದಾದರು, ಆ ಬಳಿಕ ತೀರ್ಪು ನೀಡಿದ ಕೋರ್ಟ್ ಮೇ 26ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿತು. ಅಲ್ಲದೇ ಮೇ 26 ರಂದು ಮಸೀದಿ ಸಮಿತಿಯ ಅರ್ಜಿಯನ್ನು ಮೊದಲು ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ. ಇದರೊಂದಿಗೆ 11 ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ನಡೆಸಲಿದ್ದು, 2 ಕಡೆಯವರಿಗೂ ಸರ್ವೇ ವರದಿ ನೀಡಲು ಸೂಚನೆ ನೀಡಿದೆ. ಅಲ್ಲದೇ ಸರ್ವೇ ವರದಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post