ಮಧ್ಯಪ್ರದೇಶ: ಭಿಕ್ಷುಕನೊಬ್ಬ ತನ್ನ ಪತ್ನಿಗೆ ಉಡುಗೊರೆ ನೀಡಲು 90,000 ರೂಪಾಯಿ ಮೌಲ್ಯದ ಮೊಪೆಡ್‍ನ್ನು ಖರೀದಿದ ಘಟನೆ ಛಿಂದ್ವಾರಾ ಜಿಲ್ಲೆಯ ಅಮರವಾರ ಗ್ರಾಮದಲ್ಲಿ ನಡೆದಿದೆ.
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಅಮರವಾರ ಗ್ರಾಮದ ಸಂತೋಷ್ ಸಾಹು ಎಂಬ ಭಿಕ್ಷುಕ ಈ ಕೆಲಸ ಮಾಡಿದ್ದಾನೆ. ಸಂತೋಷ್ ವಿಶೇಷಚೇತನನಾಗಿದ್ದು, ಕಾಲುಗಳಿಲ್ಲದಿದ್ದರಿಂದ ತ್ರಿಚಕ್ರ ವಾಹನದಲ್ಲಿ ಕುಳಿತು ಸಂಚರಿಸಬೇಕಿತ್ತು. ತನ್ನ ತ್ರಿಚಕ್ರ ವಾಹನವನ್ನು ಮುಂದಕ್ಕೆ ತಳ್ಳಲು ಪತ್ನಿ ಮುನ್ನಿ ಸಾಹು ಅವರ ಸಹಾಯ ಪಡೆದುಕೊಳ್ಳುತ್ತಿದ್ದ.
ಈ ರೀತಿಯಾಗಿಯೇ ಇಬ್ಬರು ಜೊತೆಗೆ ಭಿಕ್ಷೆ ಬೇಡುತ್ತಿದ್ದರು. ಅಷ್ಟೇ ಅಲ್ಲದೇ ದಿನವಿಡೀ ತ್ರಿಚಕ್ರ ವಾಹನವನ್ನ ತಳ್ಳಬೇಕಾಗಿರುವುದರಿಂದ ಆತನ ಪತ್ನಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಳು. ಕಳೆದ ನಾಲ್ಕು ವರ್ಷಗಳಿಂದ ಉಳಿತಾಯ ಮಾಡಿ 90 ಸಾವಿರ ನಗದು ಸಂಗ್ರಹಿಸಿ ಮೊಪೆಡ್ ಖರೀದಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post