ಬಳ್ಳಾರಿ: ಆಟೋದಲ್ಲಿ ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ ಚೈನ್, ಕಿವಿ ಓಲೆ, ತಾಳಿ ಹಾಗೂ ನಗದು ಹಣವಿದ್ದ ಬ್ಯಾಗ್ವೊಂದನ್ನ ವಾಪಸ್ ನೀಡಿ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ಪಟ್ಟಣದ 6ನೇ ವಾರ್ಡಿನ ನಿವಾಸಿ ನಜ್ಮಾ ಎಂಬವರು ಆಟೋದಲ್ಲಿ ಪ್ರಯಾಣ ಮಾಡುವ ವೇಳೆ ಬ್ಯಾಗ್ ಬಿಟ್ಟು ಹೋಗಿದ್ದರು. ಅದನ್ನ ಗಮನಿಸಿದ ಆಟೋ ಚಾಲಕ ಅಬ್ದುಲ್ ರಹೀಂ ತಕ್ಷಣವೇ ಬ್ಯಾಗ್ ತೆರೆದು ನೋಡಿದ್ದಾರೆ. ಒಡವೆ ಹಾಗೂ 1,900 ರೂಪಾಯಿ ಹಣ ಇರೋದು ಗೊತ್ತಾಗಿದೆ. ಕೂಡಲೇ ಆಟೋ ಚಾಲಕ ಸಿರುಗುಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಸಮ್ಮುಖದಲ್ಲಿ ಬ್ಯಾಗ್ ಕಳೆದುಕೊಂಡ ಮಹಿಳೆಗೆ ಆಭರಣ ಹಾಗೂ ಹಣವನ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಆಟೋ ಚಾಲಕನ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post