ಅವರಿಬ್ಬರೂ ವಿಶ್ವದ ದೈತ್ಯ ಉದ್ಯಮಿಗಳು. ಪ್ರಪಂಚದ ಸಿರಿವಂತರ ಲಿಸ್ಟ್ನಲ್ಲಿ ಒಬ್ರು ಮೊಟ್ಟ ಮೊದಲನೆ ಸ್ಥಾನದಲ್ಲಿದ್ರೆ ಮತ್ತೊಬ್ಬರು 4ನೇ ಪ್ಲೇಸ್ನಲ್ಲಿ ಮಿಂಚ್ತಿದ್ದಾರೆ. ಆದ್ರೆ, ಇಷ್ಟೂ ದಿನ ಅವರಿಬ್ಬರ ನಡುವೆ ಬರೀ ಬ್ಯುಸಿನೆಸ್ ವಿಚಾರದಲ್ಲಿ ಆರೋಗ್ಯಕರ ಪೈಪೋಟಿ ಇತ್ತೇ ವಿನಃ, ಅದು ಎಂದಿಗೂ, ವೈಯಕ್ತಿಕ ಗುದ್ದಾಟವಾಗಿ ತಿರುಗಿರಲಿಲ್ಲ. ಬಟ್, ಈಗ ಇಬ್ಬರ ನಡುವಿನ ಹಗೆತನ ಯಾವ ಮಟ್ಟಕ್ಕೆ ಹೋಗಿದೆ ಅಂದ್ರೆ, ನಾನಾ ನೀನಾ ಅಂತಾ ಇಬ್ರೂ ತೊಡೆ ತಟ್ಟಿದ್ದಾರೆ. ಅಷ್ಟಕ್ಕೂ ಬಿಲ್ಗೇಟ್ಸ್ ಹಾಗೂ ಎಲಾನ್ ಮಸ್ಕ್ ನಡುವೆ ನಡೀತಿರೋ ಯುದ್ಧದ ಕಥೆಯೇನು?
ಎಲಾನ್ ಮಸ್ಕ್.. ಟೆಸ್ಲಾ ಹಾಗೂ ಸ್ಪೇಸ್ ಎಂಬ ದೈತ್ಯ ಸಂಸ್ಥೆಗಳ ಮಾಲೀಕ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರೋ ಉದ್ಯಮಿ. ಎಲಾನ್ ಮಸ್ಕ್ ಸಿರಿವಂತಿಕೆ ಎಷ್ಟರ ಮಟ್ಟಿಗಿದೆ ಅಂದ್ರೆ, ಇನ್ನೂ ಕೆಲ ವರ್ಷಗಳ ಕಾಲ ಯಾರೂ ಇವ್ರನ್ನ ಟಚ್ ಮಾಡೋದುಕ್ಕಾಗಲ್ವೇನೋ ಅನ್ನೋ ಮಟ್ಟಿಗಿದೆ. ಸದ್ಯ ಎಲಾನ್ ಮಸ್ಕ್ ಆಸ್ತಿ ಎಷ್ಟಿದೆ ಗೊತ್ತಾ? ಬರೋಬ್ಬರಿ, 16 ಲಕ್ಷ ಕೋಟಿ ರೂಪಾಯಿಗೂ ಅಧಿಕ, ಅಂದಹಾಗೇ, ಎಲಾನ್ ಮಸ್ಕ್ ಬೆಳವಣಿಗೆ ಹೇಗಿದೆ ಅಂದ್ರೆ, ಸಿರಿವಂತಿಕೆಯ ಲಿಸ್ಟ್ನಲ್ಲಿ ಇವರ ಕೆಳಗಿರುವವರಿಗೂ ಇವರಿಗೂ ಅಜಗಜಾಂತರ ದೂರವಿದೆ.
ಅಷ್ಟೇ ಅಲ್ಲ. 2024ರ ಹೊತ್ತಿಗೆ ಎಲಾನ್ ಮಸ್ಕ್ ಯಾರೂ ಹತ್ತಿರಕ್ಕೂ ಸುಳಿಯಲಾಗದಷ್ಟು ಎತ್ತರಕ್ಕೆ ಬೆಳೆದೇ ಬೆಳೀತಾರೆ ಅನೇಕ ವರದಿಗಳು ಹೇಳ್ತಾನೆ ಇವೆ. ಒಂದು ಲೆಕ್ಕದಲ್ಲಿ ಎಲಾನ್ ಮಸ್ಕ್, ಅಸಾಧ್ಯವಾದ ಸಂಗತಿಗಳನ್ನ ಸಾಧಿಸಿದ ನಿಜವಾದ ಸಾಧಕ ಅಂತಲೇ ಹೇಳಬಹುದು. ಹೀಗಿರೋ ಎಲಾನ್ ಮಸ್ಕ್ಗೆ ಉದ್ಯಮ ಲೋಕದಲ್ಲಿ ಕಾಂಪಿಟಿಷನ್ ಸ್ವಲ್ಪ ಜಾಸ್ತಿನೇ ಇರುತ್ತೆ. ಇವ್ರನ್ನ ಹಣಿಯೋಕೆ ಪ್ರಯತ್ನ ಪಡ್ತಿರೋರರ ಸಂಖ್ಯೆಯೂ ಹೆಚ್ಚೇ ಇರುತ್ತೆ.
ಇವ್ರ ಬಗ್ಗೆ ಹೆಚ್ಚೇನೂ ಹೇಳೋ ಅವಶ್ಯಕಥೆ ಇಲ್ಲ ಅನ್ಸುತ್ತೆ ಬಿಡಿ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ವಿಶ್ವದ ಖ್ಯಾತ ಟೆಕ್ ದಿಗ್ಗಜ ಹುಟ್ಟುಹಾಕಿದ ಸಂಸ್ಥೆ ಕಂಪ್ಯೂಟರ್ ಸಾಫ್ಟ್ವೇರ್ ಮೂಲಕ ಸದ್ಯ, ನಮ್ಮೆಲ್ಲರ ಜೀವನದ ಒಂದು ಅವಿಭ್ಯಾಜ್ಯ ಅಂಗವಾಗ್ಬಿಟ್ಟಿದೆ. ಅಷ್ಟೇ ಅಲ್ಲ. ಈಗೇನೋ ಎಲಾನ್ ಮಸ್ಕ್ ಜಗತ್ತಿನ ಅತೀ ಶ್ರೀಮಂತ ವ್ಯಕ್ತಿ ಅಂತಾ ಕರೆಸಿಕೊಳ್ತಿರೋಬಹುದು.
ಆದ್ರೆ, ಮಸ್ಕ್ಗೂ ಮುಂಚೆ, ಬಿಲ್ಗೇಟ್ಸ್ ಆ ಶ್ರೀಮಂತ ಸಾಮ್ರಾಜ್ಯವನ್ನ ದಶಕಗಳ ಕಾಲ ಆಳಿದ್ದರು. 1995ರಿಂದ 2010ರವರೆಗೂ, 2013ರಿಂದ-2017ರವರೆಗೂ ಶ್ರೀಮಂತಿಕೆ ಅನ್ನೋ ವಿಚಾರದಲ್ಲಿ ಗೇಟ್ಸ್ನ ಮುಟ್ಟಿದವರೇ ಇಲ್ಲ. ಅಷ್ಟೇ, ಅಲ್ಲ.. ಎಲಾನ್ ಮಸ್ಕ್ಗೆ ಹೋಲಿಸಿದ್ರೆ, ಬಿಲ್ಗೇಟ್ಸ್ ವಿವಾದಗಳಿಗೆ ಸಿಲುಕಿದ್ದು ತುಂಬಾನೇ ಕಡಿಮೆ.. ಆದ್ರೆ, ಪ್ರಿಯ ವೀಕ್ಷಕರೇ ನಾವಿವತ್ತು, ಈ ಇಬ್ಬರೂ ರಿಚ್ಚೆಸ್ಟ್ ಉದ್ಯಮಿಗಳ ಬಗ್ಗೆ ಹೇಳೋದಕ್ಕೆ ಬಹುಮುಖ್ಯ ಕಾರಣವಿದೆ. ಯಾಕಂದ್ರೆ, ಇಬ್ಬರೂ ಎಷ್ಟೇ ಹಣ ಆಸ್ತಿ ಮಾಡಿದ್ರೂ, ಇಬ್ಬರ ನಡುವಿನ ದ್ವೇಷ ಹಾದಿಬೀದಿ ರಂಪವಾಗಿದೆ.
ವಿಶ್ವದ ಶ್ರೀಮಂತ ಉದ್ಯಮಿಗಳ ನಡುವೆ ಬಹುದೊಡ್ಡ ಕಾಳಗ!
ಎಲಾನ್ ಮಸ್ಕ್ ವಿರುದ್ಧ ಷಡ್ಯಂತ್ರ ನಡೆಸಿದ್ರಾ ಬಿಲ್ಗೇಟ್ಸ್?
ಯಸ್.. ಹೀಗೊಂದು ವಿಚಾರ ಉದ್ಯಮ ಜಗತ್ತಿನಲ್ಲಿ ಭಾರೀ ಸದ್ದು ಮಾಡ್ತಿದೆ.. ಎಲಾನ್ ಮಸ್ಕ್ ಹಾಗೂ ಬಿಲ್ ಗೇಟ್ಸ್ ಎಷ್ಟೇ ಸಿರಿವಂತರಾದರೂ, ಇಬ್ಬರ ನಡುವೆ ಪೈಪೋಟಿ ಇದ್ದೇ ಇರುತ್ತೆ ಅನ್ನೋದು ಸತ್ಯ. ಬ್ಯುಸಿನೆಸ್ ಅಂದ್ಮೇಲೆ ಅದೆಲ್ಲಾ ಕಾಮನ್. ಆದ್ರೆ, ಆ ಪೈಪೋಟಿ ಕೇವಲ ನಂಬರ್ ಒನ್ ಸ್ಥಾನ, ಹೆಚ್ಚೆಚ್ಚು ಹಣಗಳಿಕೆ ಮಾಡೋದಕಷ್ಟೇ ಸೀಮಿತವಾಗಿರಬೇಕು, ಆದ್ರೆ.. ಬಿಲ್ ಗೇಟ್ಸ್ ಹಾಗೂ ಎಲಾನ್ ಮಸ್ಕ್ ನಡುವಿನ ವೃತ್ತಿ ಮತ್ಸರ ಅತಿರೇಖದ ಪರಮಾವಧಿಯನ್ನ ದಾಟಿದೆ. ಇದಕ್ಕೆಲ್ಲಾ ಕಾರಣ ಬಿಲ್ ಗೇಟ್ಸ್ ಮೇಲೆ ಕೇಳಿ ಬಂದಿರೋ ಆರೋಪ. ಅದನ್ನ ನಂಬಿ ಎಲಾನ್ ಮಸ್ಕ್ ಪ್ರತಿಕ್ರಿಯಿಸುತ್ತಿರುವ ರೀತಿ.. ಹೌದು… ಸದ್ಯ ಜಗತ್ತಿನ ಶ್ರೀಮಂತ ಉದ್ಯಮಿಯಾಗಿರುವ ಎಲಾನ್ ಮಸ್ಕ್ರವರ ವಿರುದ್ಧ ಬಿಲ್ಗೇಟ್ಸ್ ಷಡ್ಯಂತ್ರ ನಡೆಸಿದ್ದಾರಂತೆ…ಅದು ಯಾವ ರೀತಿಯ ಷಡ್ಯಂತ್ರ ಅನ್ನೋದನ್ನ ಹೇಳ್ತೀವಿ ಕೇಳಿ..
ಸಿರಿವಂತರ ಸಮರ!
ಬರೋಬ್ಬರಿ 3 ಲಕ್ಷ ಕೋಟಿಗೂ ಅಧಿಕ ಹಣ ಕೊಟ್ಟು ಟ್ವಿಟರ್ ಖರೀದಿಸಲು ಎಲಾನ್ ಮಸ್ಕ್ ನಿರ್ಧರಿಸಿದ್ದು, ಇನ್ನೂ ಅದಕ್ಕೆ ಅಂತಿಮ ಮುದ್ರೆ ಬಿದಿಲ್ಲ. ಆದ್ರೆ, ಯಾವಾಗ ಮಸ್ಕ್ ಟ್ವಿಟರ್ ಖರೀದಿ ಮಾಡ್ತಾರೆ ಅನ್ನೋ ವಿಚಾರ ಗೊತ್ತಾಯ್ತೋ, ಅವರ ಟ್ವಿಟರ್ ಖರೀದಿಯನ್ನ ವಿರೋಧಿಸುವಂತೆ ಬಿಲ್ಗೇಟ್ಸ್ ಷಡ್ಯಂತ್ರ ಮಾಡಿರೋ ಆರೋಪವಿದೆ. ಅದಕ್ಕಾಗಿ ಎಲಾನ್ ಮಸ್ಕ್ ವಿರೋಧಿ ಸಂಸ್ಥೆಗಳನ್ನು ಬಿಲ್ ಗೇಟ್ಸ್ ಎತ್ತಿಕಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ. 26 ಎಲಾನ್ ಮಸ್ಕ್ ವಿರೋಧಿ ಸಂಸ್ಥೆಗಳಲ್ಲಿ. 11 ಸಂಸ್ಥೆಗಳ ಜೊತೆ ಸೇರಿ ಕುತಂತ್ರ ನಡೆಸಿದ್ದಾರಂತೆ. ಸಂಸ್ಥೆಗಳಿಗೆ ಮಿಲಿಯನ್ ಡಾಲರ್ಗಟ್ಟಲೆ ಹಣಕೊಟ್ಟು ಮಸ್ಕ್ ಹಣಿಯಲು ಏನ್ ಮಾಡಬೇಕು ಅಂತಾ ಹೇಳಿದ್ದಾರಂತೆ. ಟ್ವಿಟರ್ ಖರೀದಿಸಿದ ಬಳಿಕ ಅಲ್ಲಿ ತಾವು ವಾಕ್ಸ್ವಾತಂತ್ರ್ಯವನ್ನ ಮರುಸ್ಥಾಪಿಸಲಾಗುವುದು ಅಂತಾ ಎಲಾನ್ ಮಸ್ಕ್ ಹೇಳಿದ್ದರು. ಹಾಗಾಗಿ, ಅವರು ಹೇಳಿದಂತೆ ಏನಾದ್ರೂ ವಾಕ್ಸ್ವಾತಂತ್ರ್ಯ ಮರುಸ್ಥಾಪಿತವಾದರೆ ಟ್ವಿಟರನ್ನೇ ಬಹಿಷ್ಕರಿಸಲು ಕಂಪೆನಿಗಳಿಗೆ ಹೇಳಿದ್ದರಂತೆ ಬಿಲ್ ಗೇಟ್ಸ್. ಅದಕ್ಕಾಗಿ ಬಾಯ್ಕಾಟ್ ಟ್ವಿಟರ್ ಅನ್ನೋ ಕ್ಯಾಂಪೇನನ್ನೇ ನಡೆಸಲು ಸ್ಕೆಚ್ ಹಾಕಲಾಗಿತ್ತಂತೆ.
ಮಸ್ಕ್ ಟ್ವಿಟರ್ ಖರೀದಿಯನ್ನು ವಿರೋಧಿಸುವಂತೆ, ಹಾಗೂ ಕಂಪನಿಯನ್ನು ಬಹಿಷ್ಕರಿಸುವಂತೆ ಟ್ವಿಟರ್ ಜಾಹೀರಾತುದಾರರನ್ನು ಒತ್ತಾಯಿಸಿ ಬಿಲಿಗೇಟ್ಸ್ ಕಳೆದ ತಿಂಗಳು ಮುಕ್ತ ಪತ್ರವೊಂದಕ್ಕೆ ಸಹಿ ಹಾಕಿದ್ದರು. ಅದಕ್ಕಾಗಿ ತಮ್ಮ ಗೇಟ್ಸ್ ಫೌಂಡೇಷನ್ನಿಂದ ಹಣವನ್ನೂ ನೀಡಲಾಗಿದೆ ಅಂತಾ ಬ್ರೀಟ್ಬಾರ್ಟ್ ಅನ್ನೋ ಸಂಸ್ಥೆ ವರದಿ ಮಾಡಿದೆ . ಅಲ್ಲದೇ, ಬಿಲ್ಗೇಟ್ಸ್ ಮೇಲಿನ ಆರೋಪ ನಿಜವಾ ಅಂತಾ ಪರಿಶೀಲನೆ ಮಾಡೋದಕ್ಕೆ, ಫೌಂಡೇಶನ್ ಫಾರ್ ಫ್ರೀಡಮ್ ಆನ್‌ಲೈನ್ ವರದಿಯು ಹಲವಾರು ಸಾರ್ವಜನಿಕ ಫೈಲಿಂಗ್‌ಗಳನ್ನು ಸಂಶೋಧಿಸಿದ್ದು, ಅದರಲ್ಲಿ ಬಿಲಿಗೇಟ್ಸ್ ಷಡ್ಯಂತ್ರ ನಡೆಸಿರೋದು ನಿಜ ಎಂದಿವೆ.
ಈ ಹಿಂದೆ ಕಂಟೆಂಟ್ ಮಾಡರೇಟ್ ಮಾಡದಂತೆ 26 ಸಂಸ್ಥೆಗಳು ಟ್ವಿಟರ್ಗೆ ಪತ್ರ ಬರೆದಿದ್ದವು. ಅಲ್ಲದೇ, ಟ್ವಿಟರ್ ಮೇಲೆ ಎಲಾನ್ ಮಸ್ಕ್ ಅವರ ಸ್ವಾಧೀನ ನಮ್ಮ ವ್ಯವಸ್ಥೆಯನ್ನು ಮತ್ತಷ್ಟು ವಿಷವಾಗಿಸುತ್ತವೆ ಅಂತಾ ಬರೆದುಕೊಂಡಿದ್ದವು. ಮಸ್ಕ್ರ ಹೊಸ ಆಲೋಚನೆ ಸಾರ್ವಜನಿಕ ಸುರಕ್ಷತೆಗೆ ನೇರ ಬೆದರಿಕೆಯಾಗಿದೆ ಅಂತಾ ಜಾಹಿರಾತುದಾರರಿಗೆ ಪತ್ರ ಬರೆದಿದ್ದವು. ಆ 26 ಸಂಸ್ಥೆಗಳಲ್ಲಿ 11 ಸಂಸ್ಥೆಗಳಿಗೆ ಬಿಲ್ ಗೇಟ್ಸ್ ಹಣ ಸಂದಾಯ ಮಾಡಿದ್ದಾರಂತೆ. ಅಷ್ಟಕ್ಕೂ ಮಸ್ಕ್ ವಿರುದ್ಧ ಈ ರೀತಿಯ ಮಸಲತ್ತು ಮಾಡೋಕೆ ಖರ್ಚು ಮಾಡಿರೋದು ಎಷ್ಟಂತೆ ಗೊತ್ತಾ? ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿಗೂ ಅಧಿಕ.
ಬಿಲ್ ಗೇಟ್ಸ್ ಷಡ್ಯಂತ್ರ ತಿಳಿಯುತ್ತಿದ್ದಂತೆ ನಿಗಿಕೆಂಡವಾದ ಮಸ್ಕ್!
ಟ್ವಿಟರ್ನಲ್ಲಿ ಬಹಿರಂಗವಾಗಿಯೇ ಹರಿಹಾಯ್ದ ವಿಶ್ವದ ಸಿರಿವಂತ!
ನಿಮಗೆಲ್ಲಾ ಎಲಾನ್ ಮಸ್ಕ್ ಬಗ್ಗೆ ಗೊತ್ತಿದ್ರೆ, ಅವರ ನಡತೆಯ ಬಗ್ಗೆಯೂ ತಿಳಿದಿರುತ್ತೆ. ಮಸ್ಕ್ ಎಷ್ಟು ದೊಡ್ಡ ಉದ್ಯಮವಿಯೋ, ಅಷ್ಟೇ ಸ್ಟ್ರೇಟ್ ಫಾರ್ವರ್ಡ್ ವ್ಯಕ್ತಿ. ಯಾವುದೇ ವಿಚಾರವನ್ನ, ಅದು ಎಷ್ಟೇ ವೈಯಕ್ತಿಕವಾಗಿರಲಿ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಬಿಡ್ತಾರೆ. ಅಷ್ಟೇ ಅಲ್ಲ. ಬಹಿರಂಗವಾಗಿಯೇ, ಇನೊಬ್ಬರ ದ್ವೇಷವನ್ನ ಕಟ್ಟಿಕೊಳ್ಳೋದಕ್ಕೂ ರೆಡಿಯಾಗಿರ್ತಾರೆ. ಅದಕ್ಕೆ ಇತ್ತೀಚೆಗೆ ಉಕ್ರೇನ್ ಮೇಲೆ ಯುದ್ದ ಸಾರಿದ್ದ ರಷ್ಯಾ ಅಧ್ಯಕ್ಷನಿಗೆ ಮಸ್ಕ್ ಕೊಟ್ಟಿರೋ ಠಕ್ಕರೇ ಸಾಕ್ಷಿ. ಅಂತಹ ಗಟ್ಟಿಗುಂಡಿಗೆಯ ಮಸ್ಕ್ ತಮ್ಮ ವಿರುದ್ಧ ಷಡ್ಯಂತ್ರ ನಡೀತಿದೆ ಅಂದ್ರೆ ಸುಮ್ಮನೆ ಖಂಡಿತಾ ಇರ್ತಾರಾ? ಛಾನ್ಸೇ ಇಲ್ಲ.. ಯಾರೋ ಒಬ್ಬರು ತಮ್ಮ ವಿರುದ್ಧ ನಡೆದಿರೋ ಪಿತೂರಿಯ ಕುರಿತ ಆರ್ಟಿಕಲ್ನ ಷೇರ್ ಮಾಡಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್ ಎಂತಹ ನೀಚ ಕೆಲಸ ಅಂತಾ ಜರಿದಿದ್ದಾರೆ. ಈಗ ಮೂಲಕ ಮೈಕ್ರೋಸಾಫ್ಟ್ ಸಂಸ್ಥಾಪಕ, ವಿಶ್ವದ ಮಾಜಿ ಶ್ರೀಮಂತನನ್ನ ನೀಚ ಅಂತಾ ಕರೆದಿದ್ದಾರೆ.
ಗೇಟ್ಸ್ ಜೊತೆಗಿನ ಫೈಟ್ ಮಧ್ಯೆ ಹಳೇ ಟ್ವೀಟ್ ವೈರಲ್!
ಅಂದು ‘ನಿಗೂಢವಾಗಿ ಸತ್ತರೆ’ ಎಂದಿದ್ದೇಕೆ ಎಲಾನ್ ಮಸ್ಕ್!
ಇವೆಲ್ಲದರ ಮಧ್ಯೆ ಎಲಾನ್ ಮಸ್ಕ್ರ ಹಳೇ ಟ್ವೀಟೊಂದು ಸದ್ಯ ವೈರಲ್ ಆಗಿದೆ.. ಈ ಹಿಂದೆ ಮಸ್ಕ್ ನಾನೊಮ್ಮೆ ನಿಗೂಢವಾಗಿ ಸತ್ತರೆ ಅಂತಾ ಬರೆದುಕೊಂಡಿದ್ರು… ಒಂದು ವೇಳೆ ನಾನು ಅನುಮಾನಾಸ್ಪದ ಸಂದರ್ಭಗಳಲ್ಲಿ ಸಾವನ್ನಪ್ಪಿದರೆ, ಅದರ ಕಾರಣ ನಿಮಗೆ ತಿಳಿದಿದೆ ಅಂತಾ ಹೇಳಿದ್ದರು. ಅದು ವಿಶ್ವಾದ್ಯಂತ ಸಾಕಷ್ಟು ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಮಸ್ಕ್ ಟ್ವೀಟ್‌ಗೆ ಸಾವಿರಾರು ಜನ ರಿಟ್ವೀಟ್ ಮಾಡಿದ್ದರು. ಜನರಿಂದ ಪ್ರತಿಕ್ರಿಯೆಗಳು ಹೆಚ್ಚಾಗುತ್ತಿದ್ದಂತೆ, ಕ್ಷಮಿಸಿ ನಾನು ಜೀವಂತವಾಗಿರಲು ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ ಎಂದಿದ್ದರು. ಇದೀಗ ಬಿಲ್ಗೇಟ್ಸ್ ಹಾಗೂ ಎಲಾನ್ ಮಸ್ಕ್ ನಡುವೆ ನಡೀತಿರೋ ಯುದ್ಧದ ವೇಳೆ, ಅಂದು ಟೆಸ್ಲಾ ಸಂಸ್ಥಾಪಕ ನಿಗೂಢವಾಗಿ ಸತ್ತರೆ ಅಂತಾ ಬರೆದುಕೊಂಡಿದ್ದೇಕೆ ಅನ್ನೋ ಪ್ರಶ್ನೆ ಮೂಡಿಸಿದೆ. ಎಲಾನ್ ಮಸ್ಕ್ರನ್ನ ಉದ್ಯಮದಲ್ಲಿಯೂ ಮುಗಿಸುವ ಹುನ್ನಾರ ನಡೆಸುತ್ತಿರುವವರಿಂದ ಮತ್ತೇನಾದ್ರೂ ಬೇರೆ ಪ್ಲಾನ್ ಇದ್ಯಾ ಎಂಬ ಅನುಮಾನ ಮೂಡಿದೆ.
ಇದು ಮದಗಜಗಳ ಕಾಳಗ ಅಲ್ಲದೇ ಬೇರೇನೂ ಅಲ್ಲ.. ಅಷ್ಟಕ್ಕೂ ಎಲಾನ್ ಮಸ್ಕ್ ಹಾಗೂ ಬಿಲ್ಗೇಟ್ಸ್ ನಡುವೆ ವೈರುಧ್ಯ ಶುರುವಾಗಿದ್ದು ಇಂದು ನಿನ್ನೆಯಿಂದಲ್ಲ.. ಮುಂದುವರೆದಿದೆ…. ಇದನ್ನೂ ಓದಿ: ಬಿಲ್ ಗೇಟ್ಸ್ & ಮಸ್ಕ್ ನಡುವಿನ ದ್ವೇಷ ಇಂದು ನೆನ್ನೆಯದಲ್ಲ.. ಮಸ್ಕ್ ಮೇಲೆ ಗೇಟ್ಸ್ಗೇಕೆ ಕೆಂಗಣ್ಣು?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post