ರಜತ್ ಪಟಿದಾರ್ ಬ್ಯಾಟಿಂಗ್ಗೆ ವಿರಾಟ್ ಕೊಹ್ಲಿ, ಫಿದಾ ಆಗಿದ್ದಾರೆ. ರಜತ್ ಆಡಿದ್ದು ಅದ್ಭುತ ಆಟ. ನಾನು ಇಷ್ಟು ವರ್ಷಗಳಲ್ಲಿ ಹಲವು ಆಟಗಾರರು ಒತ್ತಡದ ಸನ್ನಿವೇಶದಲ್ಲಿ ಆಡಿದ್ದು ನೋಡಿದ್ದೀನಿ. ಆದ್ರೆ, ಅವೆಲ್ಲರಿಗಿಂತ ರಜತ್ ಆಟ ವಿಶೇಷವಾಗಿತ್ತು ಎಂದು ಕೊಹ್ಲಿ ಮಧ್ಯಪ್ರದೇಶದ ಬ್ಯಾಟ್ಸ್ಮನ್ನನ್ನ ಹಾಡಿ ಹೊಗಳಿದ್ದಾರೆ. ಕೊಹ್ಲಿ ಅಷ್ಟೇ ಅಲ್ಲ ಇಡೀ ಕ್ರಿಕೆಟ್ ಲೋಕವೇ ರಜತ್ ಬ್ಯಾಟಿಂಗ್ ಅನ್ನ ಕೊಂಡಾಡ್ತಿದೆ.
ಕಳೆದ ಪಂದ್ಯದಲ್ಲಿ ಫಾಫ್ ಔಟಾದ ಬಳಿಕ ಕ್ರೀಸ್ಗೆ ಬಂದ ರಜತ್ ಪಾಟೀದಾರ್ ಕೊನೆವರೆಗೂ ಲಖನೌ ಸೂಪರ್ ಜೈಂಟ್ಸ್ ತಂಡದ ಬೌಲರ್ಸ್ ಬೆವರಿಳಿಸಿದ್ರು. ಕೇವಲ 54 ಬಾಲ್ನಲ್ಲಿ 12 ಫೋರ್, 7 ಸಿಕ್ಸರ್ ಸಮೇತ ಅಜೇಯ 112 ರನ್ ಗಳಿಸಿದ್ರು. ಅದರಲ್ಲೂ ಪಾಟೀದಾರ್ ಕೃನಾಲ್ ಪಾಂಡ್ಯ 6ನೇ ಓವರ್ನಲ್ಲಿ 4 4 6 4 ಮತ್ತು 16ನೇ ಓವರ್ನಲ್ಲಿ 6 4 6 4 6 ಬೌಂಡರಿಗಳು ಸಿಡಿಸಿದ್ದು ಮಾತ್ರ ರೋಚಕ. ಈಗ ಅದೇ ಆಟ ಮುಂದುವರಿಸೋಕೆ ಪಾಟೀದಾರ್ ಸಜ್ಜಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post