ಇಂದು ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2022 ಸೆಮಿಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೀನಾಯ ಸೋಲು ಕಂಡಿದೆ.
ಆರ್ಸಿಬಿ ನೀಡಿದ ಗುರಿ ಬೆನ್ನತ್ತಿದ ರಾಜಸ್ಥಾನ್ 3 ವಿಕೆಟ್ ಕಳೆದುಕೊಂಡು 18.1 ಓವರ್‌ನಲ್ಲಿ 161 ರನ್ ಗಳಿಸಿ ಗೆದ್ದು ಬೀಗಿದೆ. ಈ ಮೂಲಕ ಡೈರೆಕ್ಟ್ ಫೈನಲ್ಸ್ಗೆ ಎಂಟ್ರಿ ಕೊಟ್ಟಿದೆ.
ರಾಜಸ್ಥಾನ್ ಪರ ಜೋಸ್ ಬಟ್ಲರ್ 106 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು. ಜೈಸ್ವಾಲ್ 21, ಸ್ಯಾಮ್ಸನ್ 23 ರನ್ ಸಿಡಿಸಿದ್ರು.
ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ ಆರ್ಸಿಬಿ ನಿಗದಿತ 20 ಓವರ್‌ನಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿದೆ. ಆರ್ಸಿಬಿ ಪರ ಕೊಹ್ಲಿ 7, ಫಾಫ್ ಡುಪ್ಲೆಸಿಸ್ 25, ಪಾಟೀದಾರ್ 58 ರನ್ ಗಳಿಸಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post