ನವದೆಹಲಿ: ದೇಶದಲ್ಲಿ ಇತ್ತೀಚೆಗೆ ನಕಲಿ ನೋಟುಗಳು ಹಾವಳಿ ಹೆಚ್ಚಾಗಿದೆ. ಅದರಲ್ಲೂ ಆ ಒಂದು ಮುಖಬೆಲೆಯ ನೋಟನ್ನಂತೂ ಖದೀಮರು ಇನ್ನಿಲ್ಲದಂತೆ ಅಚ್ಚು ಹೊಡೆಯುತ್ತಿದ್ದಾರೆ. ಈಗ ಯಾವ ವರ್ಷದಲ್ಲಿ ಎಷ್ಟು ನಕಲಿ ನೋಟುಗಳು ಹರಿದಾಡಿವೆ. ಯಾವ ಮುಖ ಬೆಲೆಯ ನೋಟುಗಳು ಹೆಚ್ಚಾಗಿ ನಕಲಿ ಆಗಿವೆ ಎಂಬುದನ್ನ ಆರ್ಬಿಐ ಕಲೆಹಾಕುತ್ತಿದೆ.
ದೇಶದಲ್ಲಿ ಹರಿದಾಡ್ತಿವೆ ನಕಲಿ ನೋಟುಗಳು
ನಕಲಿಯ ಅಸಲಿ ಸತ್ಯ ಬಿಚ್ಚಿಡುತ್ತಿದೆ ಆರ್ಬಿಐ

ನೋಟ್ ಬ್ಯಾನ್ ಬಳಿಕ ನಕಲಿ ನೋಟುಗಳ ಹಾವಳಿ ತೀರ ಕಡಿಮೆಯಾಗಿತ್ತು. ಆದ್ರೆ ಈ ವರ್ಷದಲ್ಲಿ ನಕಲಿ ನೋಟುಗಳ ಅಸಲಿ ಸತ್ಯಗಳನ್ನ ಹೊರಗೆ ಎಳೆಯಲು ಆರ್ಬಿಐ ಮುಂದಾಗಿದೆ. ಆರ್ಬಿಐ ಮಾಹಿತಿಯ ಪ್ರಕಾರ ಇತ್ತೀಚಿನ ದಿನಗಳಲ್ಲಿ 500 ರೂ. ಮುಖಬೆಲೆಯ ನಕಲಿ ನೋಟುಗಳೆ ಹೆಚ್ಚಾಗಿ ಹರಿದಾಡುತ್ತಿವೆಯಂತೆ.
ಇತ್ತಿಚಿನ ದಿನಗಳಲ್ಲಿ ನಕಲಿ ನೋಟುಗಳು ಹಾವಳಿ ಮಿತಿಮೀರಿದೆ. ಆದರೆ ನಕಲಿ ನೋಟುಗಳು ಹೆಚ್ಚಾಗಿ ಹರಿದಾಡಿದ್ದು, 2021-22ನೇ ಹಣಕಾಸು ವರ್ಷದಲ್ಲೇ ಅಂತ ಆರ್ಬಿಐ ಮೂಲಗಳು ತಿಳಿಸಿವೆ.
ನಕಲಿ ನೋಟುಗಳ ಅಸಲಿ ಸತ್ಯ!
ಹೆಚ್ಚಿನ ಸಂಖ್ಯೆಯಲ್ಲಿ 500 ಮುಖಬೆಲೆ ನಕಲಿ ನೋಟುಗಳು ಪತ್ತೆಯಾಗಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, 2021-22 ಹಣಕಾಸು ವರ್ಷದಲ್ಲಿ ಎಲ್ಲಾ ಮುಖಬೆಲೆಯ ನಕಲಿ ನೋಟುಗಳು ಹೆಚ್ಚಾಗಿ ಪತ್ತೆಯಾಗಿವೆ. ಆರ್‌ಬಿಐನ ಪ್ರಕಾರ ಸೆಂಟ್ರಲ್ ಬ್ಯಾಂಕ್ 500 ರೂ. ಮುಖಬೆಲೆಯ 101.9% ಹೆಚ್ಚು ನಕಲಿ ನೋಟುಗಳನ್ನು ಪತ್ತೆಹಚ್ಚಿದೆ.

ಮತ್ತು 2,000 ರೂ. ಮುಖಬೆಲೆಯ 54.16% ನಕಲಿ ನೋಟುಗಳನ್ನ ಪತ್ತೆಹಚ್ಚಿದೆ. ಮಾರ್ಚ್ 31, 2022ರವರೆಗೆ 500 ಮತ್ತು 2000 ರೂ. ಮುಖಬೆಲೆಯ ನಕಲಿ ನೋಟುಗಳ ಚಲಾವಣೆಯಲ್ಲಿ 87.1% ನಷ್ಟಿದ್ದರೆ, ಮಾರ್ಚ್ 31, 2021ರಂತೆ 85.7% ರಷ್ಟಿದೆ. ಇನ್ನೂ ಬ್ಯಾಂಕ್ನಿಂದ ನಂತರ 10 ಮುಖಬೆಲೆಯ ನಕಲಿ ನೋಟುಗಳು ಮಾರ್ಚ್ 31, 2022ರಲ್ಲಿ 21.3% ರಷ್ಟು ಚಲಾವಣೆಯಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 10, 20, 200, 500 ರೂ. ಮುಖಬೆಲೆಯ ನಕಲಿ ನೋಟುಗಳು ಹೆಚ್ಚಾಗಿ ಪತ್ತೆಯಾಗಿವೆ. 50, 100, 2000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಕಡಿಮೆ ಪತ್ತೆಯಾಗಿವೆ ಎಂದು ಆರ್ಬಿಐ ಮಾಹಿತಿ ನೀಡಿದೆ.
ಒಟ್ಟಿನಲ್ಲಿ ನಕಲಿ ನೋಟುಗಳ ಚಕಾವಣೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಆರ್ಬಿಐ, ಪ್ರಮುಖ ವಿಚಾರಗಳನ್ನ ಹೊರಗೆಳೆಯುತ್ತಿದೆ. ಯಾವ ವರ್ಷದಲ್ಲಿ ಯಾವ ಮುಖಬೆಲೆಯ ನಕಲಿ ನೋಟುಗಳು ಹೆಚ್ಚಾಗಿ ಹರಿದಾಡಿವೆ ಎನ್ನುವುದನ್ನ ಕೆದಕಲು ಹೊರಟಿದೆ. ಹೀಗೆ ನಕಲಿ ನೋಟುಗಳ ಅಸಲಿ ಸತ್ಯವನ್ನ ಕೆದಕಲು ಹೊರಟಿರುವ ಆರ್ಬಿಐ ವ್ಯಾಪಾರ ಕ್ಷೇತ್ರಗಳಿಗೆ ಉತ್ತಮ ಸಂದೇಶವನ್ನ ಸಾರುತ್ತಿದೆ. ಯಾವಾಗ ಬೇಕಾದ್ರೂ ನಕಲಿ ನೋಟುಗಳು ನಿಮ್ಮ ಕೈಯನ್ನ ತಲುಪಬಹುದು, ಮೋಸಹೋಗದಿರಿ ಎನ್ನುವ ಸಂದೇಶವೊದಂನ್ನ ಆರ್ಬಿಐ ಹೊರಹಾಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post