ತಮಿಳುನಾಡು: ಏಷಿಯಾ ವೇದಿಕ್ ಯೂನಿವರ್ಸಿಟಿ ವತಿಯಿಂದ ವಿದ್ವಾನ್ ಶ್ರೀಕೃಷ್ಣ ಅನಂತ ಹೆಗಡೆ ಅವರಿಗೆ ಇಂದು ಹೊಸೂರಿನಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು.
ಶ್ರೀಕೃಷ್ಣ ಅನಂತ ಹೆಗಡೆಯವರು ಮೂಲತಃ ಜೋಯ್ಡಾ ತಾಲೂಕಿನ ಗುಂದ ಗ್ರಾಮದ ಶ್ರೀ ಸುಶೀಲಾ ಅನಂತ ಹೆಗಡೆಯವರ ಪುತ್ರನಾಗಿದ್ದಾರೆ. ಶ್ರೀ ಸ್ವರ್ಣವಲ್ಲೀ ಮಠದಲ್ಲಿ ವೇದಾಧ್ಯಯನ ಹಾಗೂ ಧಾರವಾಡ ಯುನಿವರ್ಸಿಟಿಯಲ್ಲಿ ಸಂಸ್ಕೃತ ವಿಷಯದಲ್ಲಿ M.A. ಪದವಿಯನ್ನು ಪಡೆದು ಪ್ರಸ್ತುತ ಬೆಂಗಳೂರು ನಗರದಲ್ಲಿ ಜ್ಯೋತಿಷ ಹಾಗೂ ಸಾಮಾಜಿಕ ಬಹುಮುಖದ ಕೆಲಸವನ್ನು ನಡೆಸುತ್ತಿದ್ದಾರೆ. ಇವರಿಗೆ ಈ ಸುಸಂದರ್ಭದಲ್ಲಿ ವಾಹಿನಿಯ ಕಡೆಯಿಂದ ಅಭಿನಂದನೆಗಳು..
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post