ನಟ ಅಜಯ್ ದೇವಗನ್ ಮತ್ತು ಕನ್ನಡ ಸ್ಟಾರ್ ಕಿಚ್ಚ ಸುದೀಪ್ ನಡುವಿನ ಹಿಂದಿ ಭಾಷೆ ಕುರಿತ ಟ್ವಿಟರ್ ವಾರ್‌ಗೆ ನಟ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ.
ವಿಕ್ರಮ್ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಸಿನಿಮಾಗಳ ಬಗೆಗಿನ ಇಂಥಾ ಚರ್ಚೆಯು ನನಗೆ ಅರ್ಥವಾಗುತ್ತಿಲ್ಲ. “ನಾನು ಭಾರತೀಯ, ನೀವು ಏನು?” ಎಂದು ಕಮಲ್ ಹಾಸನ್ ಮರು ಪ್ರಶ್ನೆ ಕೇಳಿದ್ದಾರೆ. ಸದ್ಯ ಕಮಲ್ ಹಾಸನ್ ಅಭಿನಯದ ‘ವಿಕ್ರಮ್’ ಚಿತ್ರವು ಜೂನ್ 3 ರಂದು ಹಿಂದಿ, ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿದೆ.
ಲೋಕೇಶ್ ಕನಗರಾಜ್ ನಿರ್ದೇಶನದ ವಿಕ್ರಮ್ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ಖ್ಯಾತ ನಟರಾದ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ನಟಿಸಿದ್ದಾರೆ. ವಿಶ್ವರೂಪಮ್ ಬಳಿಕ ಅಂದರೇ ಬರೋಬ್ಬರಿ 4 ವರ್ಷಗಳ ಬಳಿಕ ಕಮಲ್ ಹಾಸನ್ ಪ್ರೇಕ್ಷಕರ ಎದುರು ಬರುತ್ತಿದ್ದು, ಈ ನಡುವೆ ಇಂಡಿಯನ್ 2 ಸಿನಿಮಾಗೆ ಶೂಟಿಂಗ್ ಆರಂಭ ಮಾಡಿದ್ದರು. ಆದರೆ ಇಂಡಿಯನ್ 2 ಸಿನಿಮಾ ಶೂಟಿಂಗ್ ಕಾರಣಾಂತರಗಳಿಂದ ಅರ್ಧಕ್ಕೆ ನಿಂತ ಕಾರಣ ವಿಕ್ರಮ್ ಸಿನಿಮಾ ಶೂಟಿಂಗ್ ಆರಂಭ ಮಾಡಲಾಗಿತ್ತು.
#Vikram Bookings Open from 29th May ! https://t.co/BPMJKoZyox#KamalHaasan #VikramFromJune3 #Vikram @ikamalhaasan @Dir_Lokesh @Ramesh_aravind #Jayaram #YugiSethu @ActorSriman @VijaySethuOffl #FahadhFaasil @anirudhofficial #Mahendran @RKFI @turmericmediaTM pic.twitter.com/dlCdTGT0RM
— Raaj Kamal Films International (@RKFI) May 27, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post