ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾ ಈಗಾಗಲೇ ತೀವ್ರ ನಿರೀಕ್ಷೆ ಹುಟ್ಟಿಸಿದ್ದು, ಇತ್ತೀಚೆಗೆ ತೆರೆಕಂಡಿದ್ದ ‘ರಾ ರಾ ರಕ್ಕಮ್ಮ’ ಹಾಡು ಹಿಟ್ ಆಗಿದೆ. ‘ಕಡಂಗ ರಕ್ಕಮ್ಮ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಾಡಿನೊಂದಿಗೆ ಪ್ರಮುಖ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇದೀಗ ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಅವರಿಗೆ ಕರೆ ಮಾಡಿ ಮಾತನಾಡಿದ್ದು, ಅದರಲ್ಲಿ ನಟಿಗೆ ಕನ್ನಡದಲ್ಲಿ ಮಾತನಾಡುವ ಚಾಲೆಂಜ್ ಮಾಡಿದ್ದರು. ಅದರಲ್ಲಿ ಯಶಸ್ವಿಯಾದರೆ ಜಾಕ್ವೆಲಿನ್ ಪ್ರತಿ ಸವಾಲಿನಂತೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡುವುದಾಗಿ ಕಿಚ್ಚಾ ಸುದೀಪ್ ಹೇಳಿದ್ದರು.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಕಿಚ್ಚ ಸುದೀಪ್, ಜಾಕ್ವೆಲಿನ್ಗೆ ವಿಡಿಯೋ ಕರೆ ಮಾಡಿದ್ದಾರೆ. ಜಾಕ್ವೆಲಿನ್ ಸುದೀಪ್ಗೆ ಹಾಡಿನ ರೀಲ್ಸ್ ಮಾಡುವಂತೆ ಕೋರಿಕೊಂಡಿದ್ದಾರೆ. ಆಗ ಸುದೀಪ್ ಒಂದು ಷರತ್ತಿನ ಮೇಲೆ ವಿಡಿಯೋ ಮಾಡುವುದಾಗಿ ತಿಳಿಸಿ, ನಟಿಗೆ ಕನ್ನಡದ ಸಾಲನ್ನು ಪುನರ್ ಉಚ್ಚಾರ ಮಾಡುವಂತೆ ಹೇಳಿದ್ದಾರೆ. ಕಿಚ್ಚಾ ಸುದೀಪ್ ಹೇಳಿದಂತೆ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದ್ದಾರೆ.
‘ಕರ್ನಾಟಕದ ಎಲ್ಲಾ ನನ್ನ ಸ್ನೇಹಿತರಿಗೆ ಈ ಜಾಕ್ವೆಲಿನ್ ಮಾಡುವ ನಮಸ್ಕಾರಗಳು. ರಕ್ಕಮ್ಮ ಬೇಗ ಬರ್ತಾ ಇದೀನಿ’ ಎಂದು ಹೇಳುವಂತೆ ಜಾಕ್ವೆಲಿನ್ಗೆ ತಿಳಿಸಿದ್ದಾರೆ ಸುದೀಪ್. ಉದ್ದನೆಯ ಸಾಲನ್ನು ಪುನರ್ ಉಚ್ಚಾರ ಮಾಡುವುದು ತುಸು ಕಷ್ಟ, ಆದರೂ ಪ್ರಯತ್ನಿಸುತ್ತೇನೆ ಎಂದು ಹೇಳುತ್ತಾ.. ನಟಿ ಕಿಚ್ಚ ಸುದೀಪ್ ಹೇಳಿರುವ ಸಾಲುಗಳನ್ನು ಯಶಸ್ವಿಯಾಗಿ ಹೇಳಿದರು. ನಂತರ ಜಾಕ್ವೆಲಿನ್ ಕೋರಿಕೆಯಂತೆ ಸುದೀಪ್ ಮೊಟ್ಟ ಮೊದಲ ಬಾರಿಗೆ ರೀಲ್ಸ್ ಮಾಡಿದ್ದಾರೆ. ‘ರಾ ರಾ ರಕ್ಕಮ್ಮ’ ಹಾಡಿಗೆ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ್ದಾರೆ. ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್ ಆಗಿ ಎಲ್ಲೇಡೆ ಸದ್ದು ಮಾಡುತ್ತಿದೆ..
View this post on Instagram
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post