ಮಧ್ಯ ಪ್ರದೇಶದ: ಪಾನಿಪುರಿ ತಿಂದು ಸುಮಾರು 97 ಮಕ್ಕಳು ಅಸ್ವಸ್ಥರಾದ ಘಟನೆ ಮಧ್ಯ ಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಜಾತ್ರಾ ಮಹೋತ್ಸವ ಒಂದರಲ್ಲಿ ಸಾವಿರಾರು ಜನರು ಭಾಗವಹಿಸಿದ್ದು, ಬೇರೆ ಬೇರೆ ಸ್ಥಳಗಳಿಂದ ಕೂಡ ಜನ ಆಗಮಿಸಿದ್ದರು.
ಜಾತ್ರೆಯಲ್ಲಿ ಎಲ್ಲರೂ ಮಸಾಲಾ ತಿಂಡಿಗಳನ್ನು ಸೇವಿಸಿದ್ದಾರೆ. ಅದರಂತೆ ಪಾನಿ ಪುರಿ ಸೇವಿಸಿದ 97 ಮಕ್ಕಳಿಗೆ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇನ್ನು ಅಸ್ವಸ್ಥರಾದ 97 ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಕೆ.ಆರ್.ಶಾಕ್ಯ ಮಾಹಿತಿ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post