ತುಮಕೂರು: ವೈಯಕ್ತಿಕ ದ್ವೇಷದಿಂದ ಬೆಳೆದು ನಿಂತಿದ್ದ ಅಡಿಕೆ ಮರಗಳನ್ನು ದುಷ್ಕರ್ಮಿಗಳು ನಾಶ ಮಾಡಿರುವ ಘಟನೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರದ ಬಳಿ ನಡೆದಿದೆ.
ಸೋಮಲಾಪುರ ಕಂಬದ ನರಸಿಂಹ ಸ್ವಾಮಿ ದೇವಸ್ಥಾನದ ದಾರಿಗೆ ಅಡಿಕೆ ಮರಗಳು ತೊಂದರೆಯಾಗಿದೆ ಎಂದು ದುಷ್ಕರ್ಮಿಗಳು ಕೃತ್ಯವನ್ನು ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚಿದಾನಂದ್ ಹಾಗೂ ನಟರಾಜು ಎಂಬುವರ ತೋಟದ ಅಡಕೆ ಮರಗಳನ್ನು ನಾಶ ಪಡಿಸಲಾಗಿದೆ.
ಇನ್ನು, ಕಿಡಿಗೇಡಿಗಳ ಕೃತ್ಯಕ್ಕೆ 100 ಕ್ಕೂ ಹೆಚ್ಚು ಅಡಕೆ ಮರಗಳು ನಾಶವಾಗಿವೆ. ಇಂದು ಬೆಳ್ಳಗೆ ಮಾಲೀಕರು ತೋಟಕ್ಕೆ ಹೋದಾಗ ದುಷ್ಕರ್ಮಿಗಳ ಕೃತ್ಯ ಬೆಳಕಿಗೆ ಬಂದಿದೆ. ಪ್ರಕರಣವು ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post