ಚೊಚ್ಚಲ ಆವೃತ್ತಿಯಲ್ಲೇ ಸಾಲಿಡ್ ಪರ್ಫಾಮೆನ್ಸ್ ನೀಡಿರುವ ಗುಜರಾತ್ ಟೈಟನ್ಸ್ ಚಾಂಪಿಯನ್ ಆಗುತ್ತೆ ಅಂತ ಹಲವರು ಭವಿಷ್ಯ ನುಡಿದಿದ್ದಾರೆ. ಆದ್ರೆ, ಗುಜರಾತ್ ಕ್ಯಾಂಪ್ ಆನ್ನೋ ಜೋಸ್ ಬಟ್ಲರ್ ದುಸ್ವಪ್ನವಾಗಿ ಕಾಡ್ತಿದ್ದಾರೆ. ಬಟ್ಲರ್ ಆರ್ಭಟಕ್ಕೆ ಬ್ರೇಕ್ ಹಾಕೋದೇಗೆ ಅನ್ನೋದೇ ಹಾರ್ದಿಕ್ ಪಾಂಡ್ಯ & ಕಂಪನಿಗೆ ತಲೆನೋವಾಗಿದೆ.
ರಾಜಸ್ಥಾನ್ ರಾಯಲ್ಸ್ ಪಡೆಯ ಓಪನರ್ ಜೋಸ್ ಬಟ್ಲರ್ ಡ್ರೀಮ್ ಫಾರ್ಮ್ನಲ್ಲಿದ್ದಾರೆ. ಸೀಸನ್ನ ಆರಂಭಿಕ ಪಂದ್ಯಗಳಲ್ಲಿ ಅಬ್ಬರಿಸಿ ಆ ಬಳಿಕ ಸೈಲೆಂಟ್ ಆಗಿದ್ದ ಬಟ್ಲರ್ ಬ್ಯಾಟ್, ಇದೀಗ ಮತ್ತೆ ಸೌಂಡ್ ಮಾಡ್ತಿದೆ. ಆಡಿದ 2 ಕ್ವಾಲಿಫೈಯರ್ ಪಂದ್ಯಗಳ ಇನ್ನಿಂಗ್ಸೇ ಇದಕ್ಕೆ ಸಾಕ್ಷಿ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ತಂಡ ಸೋತ್ರೂ, ಇದೇ ಗುಜರಾತ್ ಬೌಲರ್ಗಳನ್ನ ಬಿಡದೇ ಕಾಡಿದ್ರು ಬಟ್ಲರ್.
ಆರ್ಸಿಬಿ ವಿರುದ್ಧದ ಅಬ್ಬರ, ಬೆಚ್ಚಿಬಿದ್ದ ಗುಜರಾತ್.!
ಗುಜರಾತ್ ವಿರುದ್ಧ ಮಾತ್ರವಲ್ಲ.. ಆ ಬಳಿಕ ಆರ್ಸಿಬಿಯ ಕಪ್ ಗೆಲ್ಲೋ ಕನಸನ್ನೂ ನುಚ್ಚು ನೂರು ಮಾಡಿದ್ದು ಇದೇ ಬಟ್ಲರ್.! ಕಲೆ ಹಾಕಿದ್ದ ಸಾಧಾರಣ ಮೊತ್ತವನ್ನ ಡಿಫೆಂಡ್ ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿ ಆರ್ಸಿಬಿ ಪಡೆಯೇನೋ ಇತ್ತು. ಆದ್ರೆ, ಮೊದಲ ಓವರ್ನಿಂದಲೇ ಘರ್ಜಸಿದ ಇಂಗ್ಲೀಷ್ ಬ್ಯಾಟ್ಸ್ಮನ್, ಶತಕ ಸಿಡಿಸಿ ಆರ್ಸಿಬಿ ಕನಸಿಗೆ ತಣ್ಣೀರೆರಚಿದ್ರು.
ಬಟ್ಲರ್ ಆರ್ಭಟಕ್ಕೆ ಬ್ರೇಕ್ ಹಾಕೋದು ಯಾರು.?
ಅರ್ಸಿಬಿಯಂತೆ ಗುಜರಾತ್ ಟೈಟನ್ಸ್ ಕೂಡ ಕಪ್ ಗೆಲುವಿನ ಕನವರಿಕೆಯಲ್ಲಿದೆ. ಆದ್ರೆ, ಬಟ್ಲರ್ ಆರ್ಭಟ ಗುಜರಾತ್ ಕ್ಯಾಂಪ್ ನಿದ್ದೆಗೆಡಿಸಿದೆ. ಬೆಕ್ಕಿಗೆ ಗಂಟೆ ಕಟ್ಟೋದು ಯಾರು ಎಂಬಂತೆ ಬಟ್ಲರ್ ಆಟಕ್ಕೆ ಬ್ರೇಕ್ ಹಾಕೋದು ಯಾರು ಅನ್ನೋ ಚಿಂತೆಗೆ ಬಿದ್ದಿದೆ.
ಸ್ಪಿನ್ನರ್ಗಳು ಕಡಿವಾಣ ಹಾಕೋದು ಕಷ್ಟ.! ಕಷ್ಟ.!
ಸ್ಪಿನ್ ವಿಭಾಗ ಗುಜರಾತ್ ಟೈಟನ್ಸ್ ತಂಡದ ಬಿಗ್ಗೆಸ್ಟ್ ಸ್ಟ್ರೆಂಥ್. ರಶೀದ್ ಖಾನ್, ಸಾಯಿ ಕಿಶೋರ್ ಈ ಹಿಂದಿನ ಪಂದ್ಯಗಳಲ್ಲಿ ನೀಡಿರುವ ಪ್ರದರ್ಶನವೇ ಅದಕ್ಕೆ ಸಾಕ್ಷಿ. ಆದ್ರೆ, ಬಟ್ಲರ್ ವಿರುದ್ಧ ಇವರನ್ನ ಅಸ್ತ್ವವನ್ನಾಗಿ ಪ್ರಯೋಗಿಸುವಂತೇ ಇಲ್ಲ. ಇದರಿಂದ ವಿಕೆಟ್ ಸಿಗೋದಕ್ಕಿಂತ ರನ್ಹೊಳೆಯೇ ಹೆಚ್ಚಾಗೋ ಸಾಧ್ಯತೆಯಿದೆ. ಯಾಕಂದ್ರೆ, ಈ ಐಪಿಎಲ್ನಲ್ಲಿ ಸ್ಪಿನ್ನರ್ಗಳ ವಿರುದ್ಧ 158ರ ಸ್ಟ್ರೈಕ್ರೇಟ್ರ ಸರಾಸರಿಯಲ್ಲಿ ರನ್ ಕಲೆ ಹಾಕಿರೋ ಬಟ್ಲರ್, ಕೇವಲ 1 ಬಾರಿ ಮಾತ್ರ ಔಟ್ ಆಗಿದ್ದಾರೆ. ಹೀಗಾಗಿ ಸ್ಪಿನ್ ಮೋಡಿ ವರ್ಕೌಟ್ ಆಗೋ ಸಾಧ್ಯತೆ ತುಂಬಾ ಕಡಿಮೆಯಿದೆ.
Special night! One more push! 💗 pic.twitter.com/8DYbTv1wpV
— Jos Buttler (@josbuttler) May 27, 2022
ವೇಗದ ವಿಭಾಗವೇ ಗುಜರಾತ್ ಟೈಟನ್ಸ್ ಭರವಸೆ.!
ಜೋಸ್ ಬಟ್ಲರ್ ಕಟ್ಟಿ ಹಾಕಬೇಕಂದ್ರೆ, ಗುಜರಾತ್ ಟೈಟನ್ಸ್ ವೇಗದ ವಿಭಾಗದ ಮೊರೆ ಹೋಗೋದು ಅನಿವಾರ್ಯವಾಗಿದೆ. ಯಾಕಂದ್ರೆ, ಈ ಬಾರಿಯ ಐಪಿಎಲ್ನಲ್ಲಿ ಬಟ್ಲರ್ ಬ್ಯಾಟ್ ವೇಗಿಗಳ ಎದುರು ಅಷ್ಟು ಸದ್ದು ಮಾಡಿಲ್ಲ. ಆಡಿರೋ 16 ಇನ್ನಿಂಗ್ಸ್ಗಳಲ್ಲಿ ಒಟ್ಟು 13 ಬಾರಿ ವೇಗಿಗಳಿಗೆ ಬಟ್ಲರ್ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಪೇಸ್ ಬೌಲಿಂಗ್ ಅಟ್ಯಾಕ್ ಅನ್ನೇ ನೆಚ್ಚಿಕೊಳ್ಳಬೇಕಿದೆ.
It’s official. Shimron is Jos’ lucky charm. 🧿😁#RoyalsFamily | @josbuttler | @SHetmyer pic.twitter.com/z5QlVu18gH
— Rajasthan Royals (@rajasthanroyals) May 28, 2022
ಮೊಹಮದ್ ಶಮಿ, ಯಶ್ ದಯಾಳ್ ಹಾಗೂ ಅಲ್ಜಾರಿ ಜೋಸೆಫ್.. ಗುಜರಾತ್ ಪಡೆಯ ವೇಗದ ಅಸ್ತ್ರಗಳಾಗಿದ್ದಾರೆ. ಈ ಐಪಿಎಲ್ನಲ್ಲಿ ಇವರೆಲ್ಲಾ ಸಾಲಿಡ್ ಪ್ರದರ್ಶನವನ್ನೂ ನೀಡಿದ್ದಾರೆ. ಆದ್ರೆ, ಕಳೆದ ಮುಖಾಮುಖಿಯಲ್ಲಿ ಇವರ್ಯಾರಿಂದಲೂ ಬಟ್ಲರ್ಗೆ ಕಡಿವಾಣ ಹಾಕೋದು ಸಾಧ್ಯವಾಗಿಲ್ಲ. ಹೀಗಾಗಿ ಇಂದು ಸ್ಪೆಷಲ್ ಗೇಮ್ಪ್ಲಾನ್ನೊಂದಿಗೆ ಕಣಕ್ಕಳಿಯಬೇಕಾದ ಅಗತ್ಯತೆಯಿದೆ. ಒಂದು ವೇಳೆ ಲಾಕಿ ಫರ್ಗ್ಯೂಸನ್ ಫಿಟ್ ಆದ್ರೆ, ಗುಜರಾತ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಯಾಕಂದ್ರೆ, ಲೀಗ್ ಹಂತದ ಮುಖಾಮುಖಿಯಲ್ಲಿ ಬಟ್ಲರ್ ಆರ್ಭಟಕ್ಕೆ ಬ್ರೇಕ್ ಹಾಕಿದ್ದು ಇದೇ ಫರ್ಗ್ಯೂಸನ್.
ಒಟ್ಟಿನಲ್ಲಿ, ಇಂದಿನ ಪಂದ್ಯದಲ್ಲಿ ಬಟ್ಲರ್ ಆರ್ಭಟಕ್ಕೆ ಬ್ರೇಕ್ ಹಾಕದಿದ್ರೆ, ಗುಜರಾತ್ ಕಪ್ ಕನಸು ನುಚ್ಚು ನೂರಾಗೋದ್ರಲ್ಲಿ ಅನುಮಾನವೇ ಇಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post