ದಾವಣಗೆರೆ: ಸತತವಾಗಿ ನಾಲ್ಕು ದಿನದಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮದಿಂದ ಹರಿಹರ ರಾಷ್ಟ್ರೀಯ ಹೆದ್ದಾರಿಗೆ ಇರೋ ತುಂಗಭದ್ರಾ ಸೇತುವೆ ಹಾಗೂ ರಸ್ತೆ ಎರಡಕ್ಕೂ ಹಾನಿಯುಂಟಾಗಿದೆ.
ಹರಿಹರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಿದ್ದ ಸೇತುವೆ ಕುಸಿಯುತ್ತಿರುವ ಕಾರಣ ಸೇತುವೆ ಮೇಲೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಳೆದ ಒಂದು ವರ್ಷದ ಹಿಂದೆ ಬ್ರಿಡ್ಜ್-ಹೆದ್ದಾರಿ ದುರಸ್ಥಿ ಮಾಡಲಾಗಿತ್ತು. ದುರಸ್ಥಿ ಮಾಡಿದ ವರ್ಷದಲ್ಲೇ ಸೇತುವೆ ಮತ್ತು ರಸ್ತೆ ಕುಸಿಗೊಂಡಿದೆ.
ಇನ್ನು ಹೆದ್ದಾರಿ ತಡೆಗೋಡೆ ಹಾಗೂ ಸೇತುವೆ ಕುಸಿದು ಒಂದು ವಾರ ಕಳೆದರೂ ಇದುವರೆಗೂ ಯಾರ ಗಮನಕ್ಕೆ ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶವನ್ನು ಹೊರಹಾಕಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post