ಟೀಮ್ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ, R.ಅಶ್ವಿನ್ ಉತ್ತಮ ಅಂಪೈರ್ಗಳಾಗಬಲ್ಲರು. ಕೊಹ್ಲಿ ಹಾಗೂ ಅಶ್ವಿನ್ ಇಬ್ಬರು ಕ್ರಿಕೆಟ್ ಲಾಗಳನ್ನ ಚೆನ್ನಾಗಿ ತಿಳಿದುಕೊಂಡಿದ್ದಾರೆ ಎಂದು ಐಸಿಸಿ ಮಾಜಿ ಅಂಪೈರ್ ಸೈಮನ್ ಟೌಫೆಲ್ ಅಭಿಪ್ರಾಯಪಟ್ಟಿದ್ದಾರೆ.
ಬೆಸ್ಟ್ ಅಂಪೈರ್ ಎಂದು ಐಸಿಸಿಯಿಂದ ಐದು ಬಾರಿ ಪ್ರಶಸ್ತಿ ಪಡೆದುಕೊಂಡಿರೋ ಸೈಮನ್ ಟೌಫೆಲ್, ಐಸಿಸಿ ಜೊತೆ ಸೇರಿ ಆನ್ಲೈನ್ನಲ್ಲಿ ಅಂಪೈರಿಂಗ್ ಕೋರ್ಸ್ ನಡೆಸುತ್ತಿದ್ದಾರೆ. ಮೂರು ಹಂತಗಳಲ್ಲಿ ಕೋರ್ಸ್ ಇರಲಿದೆ. ಸ್ವತಃ ಟೌಫೆಲ್ ಅವರೇ ಇದಕ್ಕೆ ಪಠ್ಯಕ್ರಮ ಸಿದ್ಧಪಡಿಸಿದ್ದು, ಐಸಿಸಿ ಅಕಾಡೆಮಿಯ ಮಾನ್ಯತೆಯನ್ನು ಪಡೆದುಕೊಂಡಿದೆ.
ಐಸಿಸಿ ಗುರುತಿಸಿರುವ ವಿಶ್ವದ ಮೊದಲ ಅಂಪೈರಿಂಗ್ ಕೋರ್ಸ್ ಇದಾಗಿದ್ದು, ಲೆವೆಲ್ ಕೋರ್ಸ್-1ರಲ್ಲಿ ಅಂಪೈರಿಂಗ್ ಮೂಲಭೂತ ಅಂಶಗಳನ್ನು ತಿಳಿಸಿಕೊಡಲಾಗುತ್ತದೆ. ಕೋರ್ಸ್ ವಿಡಿಯೋ ಆಧಾರಿತವಾಗಿದ್ದು, ಶಾಲಾ ಶಿಕ್ಷಕರು, ಪೋಷಕರು ಕೂಡ ಇಲ್ಲಿ ತರಬೇತಿ ಪಡೆಯಬಹುದಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post