ಹುಟ್ಟಿದ್ದು ಅಪರಾಧ ಮಾಡಿಯೇ ಬದುಕೋದಕ್ಕೆ ಅಂದ್ಕೊಂಡು ಬರೋಬ್ಬರಿ 65 ಕ್ರಿಮಿನಲ್ ಅಪರಾಧಗಳನ್ನ ಮಾಡಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನ ದೆಹಲಿ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಜಾವೇದ್ ಅಲಿಯಾಸ್ ಗೊಹ್ಹರ್ (33), ಜಾವೇದ್ ಅಲಿಯಾಸ್ ರುಸ್ತಮ್ (40) ಬಂಧಿತ ಆರೋಪಿಗಳು.
ಕ್ರಮವಾಗಿ ಇಬ್ಬರೂ 29, 36 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಅನ್ನೋ ಮಾಹಿತಿ ತಿಳಿದುಬಂದಿದೆ.
ಮೇ 24 ರಂದು ಮಖನ್ ಲಾಲ್ ಎಂಬ ವ್ಯಕ್ತಿಯನ್ನ ಇವರು ರಾಬರಿ ಮಾಡಿದ್ದರು. ದೆಹಲಿ ರೈಲ್ವೇ ನಿಲ್ದಾಣದ ಬಳಿಯಿರುವ ಪ್ರಯಾಗ್ರಾಜ್ ಎಂಬ ಹೆಸರಿನ ಮನೆಗೆ ನುಗ್ಗಿದ್ದ ದರೋಡೆಕೋರರಲ್ಲಿ ಒಬ್ಬ ಮಖನ್ ಲಾಲ್ಗೆ ಚಾಕು ತೋರಿಸಿ, ಅವರ ಎರಡೂ ಕೈಗಳನ್ನ ಒಬ್ಬ ಹಿಡಿದುಕೊಂಡಿದ್ದ. ಮತ್ತೊಬ್ಬ ಮೊಬೈಲ್ ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನ ಕಿತ್ತುಕೊಂಡು ಪರಾರಿಯಾಗಿದ್ದ.
ಮುಂದೆ ಏನಾಯ್ತು..?
ಈ ವೇಳೆ ಸಂತ್ರಸ್ತ ಜೋರಾಗಿ ಕೂಗಿಕೊಂಡಿದ್ದಾನೆ. ಅಲ್ಲೇ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಇದು ಕೇಳಿಸಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಗಳನ್ನ ಹಡೆಮುರಿ ಕಟ್ಟಲು ಚೇಸ್ ಮಾಡಿದ್ದಾರೆ. ಕೊನೆಗೂ ಆರೋಪಿಗಳನ್ನ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಒಂದು ಬಟನ್ ಚಾಕು, ಒಂದು ಮೊಬೈಲ್ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಆಘಾತಕಾರಿ ಮಾಹಿತಿಗಳು ಲಭ್ಯವಾಗಿವೆ. ಇವರು ಮೊಬೈಲ್ ಕದಿಯೋದನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಗೋಹ್ಹರ್ ಅನ್ನೋ ಕಳ್ಳ ಬರೋಬ್ಬರಿ 29 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಕಳ್ಳತನ, ದರೋಡೆ, ಕೊಲೆ, ಮಹಿಳೆಯರ ಮೇಲೆ ದೌರ್ಜನ್ಯ, ಸುಲಿಗೆ ಸೇರಿ ಒಟ್ಟು 29 ಪ್ರಕರಣಗಳು ದಾಖಲಾಗಿದ್ದವು ಅನ್ನೋ ವಿಚಾರ ತಿಳಿದುಬಂದಿದೆ.
ಕಿಲಾಡಿ ಡಕಾಯಿತರು
ರುಸ್ತಮ್ ಕೂಡ ಕಿಲಾಡಿ ಡಕಾಯಿತನಾಗಿದ್ದು 36 ಕೇಸ್ಗಳಲ್ಲಿ ಭಾಗಿಯಾಗಿದ್ದಾನೆ. ಈತನೂ ಕೂಡ ಮರ್ಡರ್, ರಾಬರಿ, ಸ್ನ್ಯಾಚಿಂಗ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. Arms Act and NDPS Act ಅಡಿಯಲ್ಲಿ ಇಬ್ಬರನ್ನೂ ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಅಂದ್ಹಾಗೆ ಗೋಹ್ಹರ್ 2007ರಿಂದ ಇಂಥ ಕೃತ್ಯದಲ್ಲಿ ಭಾಗಿಯಾಗಿದ್ದ. ರುಸ್ತುಂ 2002ರಿಂದ ಕಳ್ಳತನದಲ್ಲಿ ಸಕ್ರಿಯನಾಗಿದ್ದ. ಇಬ್ಬರು ಕೂಡ ಮದ್ಯವ್ಯಸನಿಗಳು ಹಾಗೂ ಡ್ರಗ್ಸ್ ಅಡಿಕ್ಟರ್ಸ್ ಆಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post