ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ವಿಶ್ವದ ಅತ್ಯಂತ ಜನಪ್ರಿಯ ಲೀಗ್, ವಿಶ್ವದ ಶ್ರೀಮಂತ ಲೀಗ್. ಈ ಕಲರ್ಫುಲ್ ಲೀಗ್ನಲ್ಲಿ ಆಡಬೇಕೆಂದು ದೇಶ-ವಿದೇಶದ ಆಟಗಾರರ ಕನಸು.
ಐಪಿಎಲ್ ಬಳಿಕ ಬಿಗ್ಬ್ಯಾಷ್ ಲೀಗ್ (ಬಿಬಿಎಲ್), ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್), ಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್), ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್), ಹಂಡ್ರೆಡ್ ಲೀಗ್, T20 ಬ್ಲಾಸ್ಟ್.. ಹೀಗೆ ಹಲವು ಲೀಗ್ಗಳು ಜನ್ಮತಾಳಿವೆ.
ಆದರೆ ಐಪಿಎಲ್ಗೆ ಇರುವ ಬೇಡಿಕೆ ಬೇರೆ ಯಾವ ಲೀಗ್ಗೂ ಇಲ್ಲ ಅನ್ನೋದು ವಿಶೇಷ. ಹಲವು ಲೀಗ್ಗಳೆಲ್ಲಾ ಸೇರಿ ಒಂದು ತಕ್ಕಡಿಯಲ್ಲಿ ತೂಗಿದರೆ, ಐಪಿಎಲ್ ಒಂದೇ ಒಂದು ತಕ್ಕಡಿಯಲ್ಲಿ ತೂಗುತ್ತದೆ. ಅದರಲ್ಲೂ ಅದರ ತೂಕ ಕೂಡ ತುಸು ಹೆಚ್ಚೇ ಇದೆ.
15 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಐಪಿಎಲ್, ಮುಂದಿನ ವರ್ಷ 16ನೇ ಆವೃತ್ತಿ ಆರಂಭಕ್ಕೆ ಕಾಲಿಡಲಿದೆ. 15ನೇ ಆವೃತ್ತಿಗೂ ಮುನ್ನ ಕಾದಾಟ ನಡೆಸುತ್ತಿದ್ದ 8 ತಂಡಗಳ ಸಂಖ್ಯೆ ಇದೀಗ 10ಕ್ಕೆ ಏರಿದೆ. ಆದರೆ ಕಿಕ್ ಮಾತ್ರ ಕೊಂಚ ಮಾತ್ರ ತಗ್ಗಿಲ್ಲ.
15ನೇ ಆವೃತ್ತಿ ಐಪಿಎಲ್ನಲ್ಲಿ 10 ತಂಡಗಳು ಪರಸ್ಪರ ಟ್ರೋಫಿಗಾಗಿ ಹೋರಾಟ ನಡೆಸಿದವು. ಆದರೆ ಫೈನಲ್ಗೆ ತಲುಪಿದ್ದು ಮಾತ್ರ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್. ಉಭಯ ತಂಡಗಳ ಹೋರಾಟದಲ್ಲಿ ವಿಜಯ ಪತಾಕೆ ಹಾರಿಸಿದ್ದು ಗುಜರಾತ್ ತಂಡ.
ಟ್ರೋಫಿ ಗೆದ್ದ ತಂಡದ ಸಂಭ್ರಮ ಮುಗಿಲು ಮುಟ್ಟಿತ್ತು. ಗೆದ್ದ ತಂಡಕ್ಕೆ ಟ್ರೋಫಿ ನೀಡುವ ಮುನ್ನ ತಂಡದ ಹೆಸರನ್ನು ಅದಕ್ಕೆ ಅಂಟಿಸಲಾಗುತ್ತದೆ. ಆದರೆ ಅದಕ್ಕೂ ಮುನ್ನ ಟ್ರೋಫಿ ಮೇಲಿರುವ ವಿಶೇಷ ವಾಕ್ಯವೊಂದನ್ನು ತೋರಿಸಿದ್ದು, ಎಲ್ಲರನ್ನೂ ಕುತೂಹಲ ಮೂಡಿಸಿದೆ.
ಐಪಿಎಲ್ ಟ್ರೋಫಿ ಮೇಲಿರುವುದು ವಾಕ್ಯ ಸಂಸ್ಕೃತದಲ್ಲಿ ಬರೆದಿರುವ ವಿಶೇಷ ಸಂದೇಶ. ಚಿನ್ನ ಲೇಪಿತ ಟ್ರೋಫಿ ಮೇಲಿನ ವಾಕ್ಯದ ಅರ್ಥ ಸಾಕಷ್ಟು ಮಂದಿಗೆ ಇನ್ನೂ ತಿಳಿದಿಲ್ಲ. ಆದರೆ ಆ ಸಂಸ್ಕೃತದ ಸಾಲುಗಳು ಐಪಿಎಲ್ನ ಧ್ಯೇಯ ವಾಕ್ಯ.
ಚಿನ್ನ ಲೇಪಿತ ಐಪಿಎಲ್ ಟ್ರೋಫಿ ಮೇಲೆ ಸಂಸ್ಕೃತದಲ್ಲಿ ‘ಯಾತ್ರ ಪ್ರತಿಭಾ ಅವಸರ ಪ್ರಾಪ್ನೋತಿಹಿ’ ಎಂದು ಬರೆಯಲಾಗಿದೆ. ಇದು ಪ್ರತಿಭೆಗಳ ಅವಕಾಶಕ್ಕೆ ತಕ್ಕ ವೇದಿಕೆ ಎಂಬರ್ಥವನ್ನು ನೀಡುತ್ತದೆ.
ಅದಕ್ಕಾಗಿಯೇ ಐಪಿಎಲ್ ಅನ್ನು ಭವಿಷ್ಯದ ಯುವ ಆಟಗಾರರ ಗಣಿ ಅನ್ನೋದು. ಯುವ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತು ಪಡಿಸಿಕೊಳ್ಳುವ ವೇದಿಕೆ. ಹೀಗಾಗಿಯೇ ಐಪಿಎಲ್ ಆಡಲು ಯುವ ಆಟಗಾರರು ಮುಗಿ ಬೀಳುತ್ತಾರೆ. ಐಪಿಎಲ್ ಟೂರ್ನಿಯ ಗುರಿಯೂ ಇದೆ ಆಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post