ಡ್ಯಾನ್ಸಿಂಗ್ ಚಾಂಪಿಯನ್ ಈಗಾಗಲೇ ಫಿನಾಲೆ ಮುಗಿಸಿ ತನ್ನ ಪಯಣಕ್ಕೆ ಶುಭಂ ಹೇಳಿದೆ. ಅದ್ಧೂರಿಯಾಗಿ ಮೂಡಿ ಬಂದ ಫಿನಾಲೆಯಲ್ಲಿ 5 ಕಂಟೆಸ್ಟೆಟ್ಸ್ ಜೋಡಿ ಟಫ್ ಕಾಂಪಿಟೇಶನ್ ಕೊಟ್ರು. ಅರ್ಜುನ್-ರಾಣಿ, ಆರತಿ – ಸಾಗರ್, ಚಂದನಾ-ಅಕ್ಷತಾ, ಆರಾಧ್ಯಾ-ನಿವೇದಿತಾ, ಅನ್ಮೋಲ್-ಆದಿತ್ಯ. ಟಾಪ್ 5 ಕಂಟೆಸ್ಟೆಟ್ಸ್ ಫಿನಾಲೆಯಲ್ಲಿ ಪರ್ಫಾಮ್ ಮಾಡಿದ್ದರು.
ಈ ಟಫ್ ಟಾಪ್ ರಿಯಾಲಿಟಿ ಶೋ ಕಾಂಪಿಟೇಶನ್ನಲ್ಲಿ ಎರಡು ಸುತ್ತುಗಳನ್ನು ಪರಿಪೂರ್ಣವಾಗಿ ಮುಗಿಸಿ ನಮ್ಮ ಪವರ್ ಸ್ಟಾರ್ ಅವಾರ್ಡನ ಮುಡಿಗೇರಿಸಿಕೊಂಡಿದ್ದು ಅನ್ಮೋಲ್ ಹಾಗೂ ಆದಿತ್ಯಾ. ಪ್ರತಿ ಭಾರಿ ವಿಭಿನ್ನ ಪರ್ಫಾಮೆನ್ಸ್ ಮೂಲಕ ಜನ ಮನ ಗೆದ್ದು 5 ಸ್ಟಾರ್ಸ್ ತಗೊಂಡು ಇವತ್ತು ಡ್ಯಾನ್ಸಿಂಗ್ ಚಾಂಪಿಯನ್ನ ವಿನ್ನರ್ಸ್ ಆಗಿ ನಿಂತಿದ್ದಾರೆ. ಮೊದಲನೇ ರನ್ನರ್ ಅಪ್ ಆಗಿದ್ದು ಬೇಬಿ ಡಾಲ್ಸ್ ಆರಾಧ್ಯಾ ಅಂಡ್ ನಿವೇದಿತಾ. ಎರಡನೇ ರನ್ನರ್ ಅಪ್ ಚಂದನಾ-ಅಕ್ಷತಾ ಆಗಿದ್ದಾರೆ. ಮೂರನೇ ಸ್ಥಾನವನ್ನು ಆರತಿ-ಸಾಗರ್ ಅಲಂಕರಿಸಿದ್ದಾರೆ. ಕೊನೆಯ ಸ್ಥಾನದಲ್ಲಿ ಅರ್ಜುನ್-ರಾಣಿ ಪಡೆದುಕೊಂಡಿದ್ದಾರೆ.
ಫಿನಾಲೆಯಲ್ಲಿ ಎರಡು ರೌಂಡ್ಗಳಿದ್ದು ಪ್ರತಿ ರೌಂಡ್ಗಳಲ್ಲಿ ಸಖತ್ ಹೆಜ್ಜೆ ಹಾಕಿದ್ರು ಡ್ಯಾನ್ಸಿಂಗ್ ಫಿನಾಲೆ ಚಾಂಪಿಯನ್ಸ್. ಮೊದಲನೇ ರೌಂಡ್ನಲ್ಲಿ ಅರ್ಜುನ್ ಹಾಗು ರಾಣಿ ಎಲಿಮಿನೇಟ್ ಆಗಿದ್ದರು. ಎಲ್ಲದಿಕ್ಕಿಂತ ವಿಶೇಷ ಅಂದ್ರೆ ಕನ್ನಡದ ರಾಜ ರತ್ನ ಟ್ರೋಫಿಯನ್ನ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರೇ ಬಂದು ರವೀಲ್ ಮಾಡಿದ್ದು ಅಪ್ಪು ಸರ್ ಗೊಸ್ಕರ ಡ್ಯಾನ್ಸಿಂಗ್ ಚಾಂಪಿಯನ್ಸ್ ವಿಶೇಷವಾದ ಡ್ಯಾನ್ಸ್ ಮಾಡಿದರು.
ಧೃವಾ ಸರ್ಜಾ ಕೂಡ ಫಿನಾಲೆ ಕಂಟೆಸ್ಟೆಟ್ಸ್ಗೆ ವಿಶ್ ಮಾಡಲು ಬಂದಿದ್ದರು. ಧೃವ ಅವ್ರು ಅಣ್ಣ ಚಿರು ಬಗ್ಗೆ ಮಾತಾಡುವಾಗಿ ಇಡೀ ವೇದಿಕೆ ಭಾವುಕತೆಯಿಂದ ಕೂಡಿತ್ತು. ಎರಡನೆ ಸುತ್ತಿನಲ್ಲೂ ಸಖತ್ ಪರ್ಫಾಮ್ ನೀಡಿದ್ದರು. ಡ್ಯಾನ್ಸಿಂಗ್ ಚಾಂಪಿಯನ್ ಫಿನಾಲೆ ಭರ್ಜರಿಯಾಗಿ ಮೂಡಿಬಂತು. ದ ಬೆಸ್ಟ್ ವಿನ್ ಅನ್ನುವಂತೆ ಅನ್ಮೋಲ್ ಹಾಗೂ ಆದಿತ್ಯ ಡ್ಯಾನ್ಸಿಂಗ್ ಚಾಂಪಿಯನ್ಸ್ ಆಗಿದ್ದಾರೆ. ಒಂದರ ಕೊನೆ ಇನ್ನೊಂದರ ಆರಂಭ ಅನ್ನುವಂತೆ ಮುಂದಿನ ವಿಕೇಂಡ್ ರಿಯಾಲಿಟಿ ಶೋಗೆ ಎದುರು ನೋಡ್ತಿದೆ ಕರುನಾಡ ಜನತೆ. ಇನ್ನೂ ಚಾಂಪಿಯನ್ ಆದವರಿಗೆ ಐದು ಲಕ್ಷ ರೂಪಾಯಿ ಹಾಗೂ ಟ್ರೋಫಿ ನೀಡಲಾಗಿದೆ. ಇನ್ನು ರನ್ನರ್ ಅಪ್ಗೆ ಮೂರು ಲಕ್ಷ ರೂಪಾಯಿ ನೀಡಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post