ಬಳ್ಳಾರಿ: ಮಹಿಳೆಯೊಬ್ಬಳು ಚಲಿಸುತ್ತಿರುವ ರೈಲು ಬೋಗಿಯನ್ನು ಹತ್ತಲು ಹೋಗಿ ಕೆಳಗೆ ಬೀಳುತ್ತಿದ್ದ ಯುವತಿಯನ್ನು ರಕ್ಷಣೆ ಮಾಡಿದ ಸಿಆರ್ಪಿಎಫ್ ಕಾನ್ಸ್‌ಟೇಬಲ್ ಎಂಎಂ ರಫೀ ಅವರಿಗೆ ಕೇಂದ್ರ ಸರ್ಕಾರ ರಾಷ್ಟ್ರಪತಿ ಜೀವನ್ ರಕ್ಷಾ ಪದಕ ನೀಡಿ ಗೌರವಿಸಿದೆ.
ಎಂ.ಎಂ.ರಫಿ ಸಿಆರ್ಪಿಎಫ್ ಕಾನ್ಸ್‌ಟೇಬಲ್ ಆಗಿ ಬಳ್ಳಾರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 2019 ರ ಡಿಸೆಂಬರ್ 21ರಂದು ಕೇಂದ್ರಿಯ ವಿದ್ಯಾಲಯದ ಶಿಕ್ಷಕಿ ರಶ್ಮಿ ಎಂಬುವವರು ಚಲಿಸುತ್ತಿದ್ದ ರೈಲು ಹತ್ತುವ ಸಾಹಸಕ್ಕೆ ಮುಂದಾಗಿದ್ದರು.
ಈ ವೇಳೆ ರೈಲು ಹತ್ತುಲು ಹೋಗಿ ಆಯತಪ್ಪಿ ಶಿಕ್ಷಕಿ ಕಳಗೆ ಬಿಳುತ್ತಿದ್ದಂತೆ ರಫಿ ಅವರ ಸಮಯ ಪ್ರಜ್ಞೆ ಮಹಿಳೆಯನ್ನು ರಕ್ಷಣೆ ಮಾಡಿದ್ದರು. ಶಿವಮೊಗ್ಗ ಮೂಲದ ರಫಿ ಕಳೆದ 16 ವರ್ಷಗಳಿಂದ RPF ಇಲಾಖೆಯಲ್ಲಿ ಸೇವೆ ಸಲ್ಲಿಸ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ಮಾಡುವ ಜೀವನ ರಕ್ಷ ಪ್ರಶಸ್ತಿಗೆ ಈ ವರ್ಷ ಕರ್ನಾಟಕದಿಂದ ರಫಿ ಸಿಆರ್ಪಿಎಫ್ ಕಾನ್ಸ್‌ಟೇಬಲ್ ಅವರಿಗೆ ಮಾತ್ರ ಸಿಕ್ಕಿರೋದು ವಿಷೇಶ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮೇ 27 ರಂದು ದೆಹಲಿಯ ವಿಜ್ಞಾನ ಭವನದಲ್ಲಿ ರಫಿ ಅವರಿಗೆ ಜೀವನ್ ರಕ್ಷಾ ಪ್ರಶಸ್ತಿ, ಪದಕ ಹಾಗೂ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ. ರಫಿ ಅವರಿಗೆ ರಾಷ್ಟ್ರಪತಿ ಗೌರವ ಸಿಗುತ್ತಿದಂತೆ ಮಹಿಳೆಯನ್ನು ರಕ್ಷಣೆ ಮಾಡಿದ ಸಿಸಿ ಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post