ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ ಇಂದು ಆರೋಪಿ ರೇಖಾ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾರೆ.
ಜಾಮೀನಿನ ಮೇರೆಗೆ ಹೊರಗೆ ಬಂದಿರುವ ರೇಖಾ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ರು.. ನನಗೆ ಹಾಗೂ ನನ್ನ ಮಕ್ಕಳಿಗೆ ಜೀವ ಬೆದರಿಕೆ ಬಂದಿದೆ. ಅನಂತರಾಜು ಆತ್ಮಹತ್ಯೆ ನನಗೆ ತುಂಬಾ ನೋವು ತಂದಿದೆ. ನಾನು ಹನಿಟ್ರ್ಯಾಪ್ ಮಾಡಿಲ್ಲ, ಹಣಕ್ಕೆ ಬೇಡಿಕೆ ಇಟ್ಟಿಲ್ಲ. ನಾವು ಆರು ವರ್ಷದಿಂದ ಅನಂತರಾಜು ಜೊತೆಗೆ ರಿಲೇಷನ್ಶಿಪ್ನಲ್ಲಿ ಇದ್ವಿ. ಸುಮಾಳ ಕಿರುಕುಳ ದಿಂದಲೇ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿರೋದು ಎಂದು ಆರೋಪಿದ್ದಾರೆ.
ಇದನ್ನು ಓದಿ: ಆ ಒಂದು ಸಾವಿನಾ ಸುತ್ತ.. ಸಾಯುವ ಮುಂಚೆ ಹಿಂಸೆ ಅನುಭವಿಸಿದ್ರಾ ಬಿಜೆಪಿ ಮುಖಂಡ ಅನಂತ್..?
ಅನಂತರಾಜು ಈ ಹಿಂದೆ ಒಂದು ಸಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆ ವೇಳೆ ಬಲವಂತವಾಗಿ ಡೆತ್ ನೋಟ್ ಬರೆಸಿಕೊಂಡಿದ್ದಾರೆ. ನಾನು ಸಾಮಾನ್ಯ ಮಹಿಳೆ.. ನನಗೆ ದಿನೇ ದಿನೇ ಕಿರುಕುಳ ಹೆಚ್ಚಾಗ್ತಿದೆ. ನಾನು ತಪ್ಪು ಮಾಡಿಲ್ಲ, ಯಾವುದೇ ತನಿಖೆಗೂ ನಾನು ಸಿದ್ಧ ಎಂದು ಮಾಧ್ಯಮದ ಮುಂದೆ ಹೇಳಿಕೆಯನ್ನು ನೀಡಿದ್ದಾರೆ.

ಹನಿಟ್ರ್ಯಾಪ್ ಮಾಡೋದಾದ್ರೆ ಆರು ವರ್ಷಗಳಿಂದ ರಿಲೇಷನ್ ಶಿಪ್ ನಲ್ಲಿ ಇರುತ್ತಿದ್ದವಾ? ಎಲ್ಲದರ ಬಗ್ಗೆಯು ತನಿಖೆಯಾಗಲಿ ನಾನು ಸಹಕಾರ ನೀಡ್ತೀನಿ. ನಾನು ಸೆಟಲ್ ಮೆಂಟ್ ಗಾಗಿ ಯಾರನ್ನು ಸಂಪರ್ಕ ಮಾಡಿಲ್ಲ. ಸಿಎಂ ಬಸವರಾಜು ಬೊಮ್ಮಾಯಿ, ಗೃಹಸಚಿವರು ನನಗೆ ನ್ಯಾಯ ಕೋಡಿಸಬೇಕು. ಸುಮಾ ಮೇಲೆ ದೂರು ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆ ಒಂದು ಸಾವಿನಾ ಸುತ್ತ.. ಸಾಯುವ ಮುಂಚೆ ಹಿಂಸೆ ಅನುಭವಿಸಿದ್ರಾ ಬಿಜೆಪಿ ಮುಖಂಡ ಅನಂತ್..?
ಇದನ್ನೂ ಓದಿ: BJP ಮುಖಂಡನ ಸಾವಿಗೆ ಯಾರೂ ಊಹಿಸದ ಟ್ವಿಸ್ಟ್-ಹನಿಟ್ರ್ಯಾಪ್ ಎಂದಾಕೆಯೇ ಇಂದು ಟ್ರ್ಯಾಪ್ ಆದಳಾ?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post