ಬ್ರೆಜಿಲಿಯನ್ ಫುಟ್ಬಾಲ್ ತಾರೆ ನೆಯ್ಮರ್ ಆಯೋಜಿಸಿದ್ದ, ಗ್ಲೋಬಲ್ ಫೈವ್ ಟೀಮ್ 2020ರಲ್ಲಿ ಆಯ್ಕೆಯಾಗಿದ್ದ ಕರ್ನಾಟಕದ ಶಬರೀಶ್ ನೆಚ್ಚಿನ ತಾರೆಯನ್ನ ಭೇಟಿಯಾಗಿದ್ದಾರೆ.
ಕರ್ನಾಟಕದ ಫುಟ್ಬಾಲ್ ಆಟಗಾರ, ಫುಟ್ಸಲ್ ಪ್ಲೇಯರ್, 2020ರ ಆನ್ಲೈನ್ ಸೆಲೆಕ್ಷನ್ನಲ್ಲಿ ಭಾಗವಹಿಸಿದ್ದ ಶಬರೀಶ್, ತಮ್ಮ ಪುಟ್ಬಾಲ್ ಸ್ಕಿಲ್ ಒಳಗೊಂಡ ವಿಡಿಯೋವೊಂದನ್ನ ಆಯ್ಕೆಗೆ ಕಳುಹಿಸಿಕೊಟ್ಟಿದ್ರು. ಶಬರೀಶ್ ಆಟದ ವೈಖರಿಯನ್ನ ಸ್ವತಃ ನೆಯ್ಮರ್ ನೋಡಿ ಅಯ್ಕೆ ಮಾಡಿದ್ರು. ಈ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಲ್ಲಿ ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯೂ ಶಬರೀಶ್ದ್ದಾಗಿದೆ.
View this post on Instagram
ಆದ್ರೆ, ಕೊರೊನಾ ಹಿನ್ನಲೆಯಲ್ಲಿ ಕಳೆದ ವರ್ಷ ನೆಯ್ಮರ್ ಭೇಟಿ ಸಾಧ್ಯವಾಗಿರಲಿಲ್ಲ. ಇದೀಗ ನೆಚ್ಚಿನ ಫುಟ್ಬಾಲ್ ತಾರೆಯನ್ನ ಕತಾರ್ನಲ್ಲಿ ಭೇಟಿಯಾಗಿರುವ ಶಬರೀಶ್, ಅಲ್ಲೇ ಫೈನಲ್ ಪಂದ್ಯವನ್ನೂ ಆಡಿದ್ದಾರೆ. ನೆಯ್ಮರ್ ಕೂಡ ಶಬರೀಶ್ ಆಟದ ಸ್ಕಿಲ್ ಅನ್ನ ಮೆಚ್ಚಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post