ಟೀಮ್ ಇಂಡಿಯಾ ಆಟಗಾರ ದೀಪಕ್ ಚಹರ್ ವಿವಾಹ, ಇಂದು ನಡೆಯಲಿದೆ. ಗಾಯದ ಕಾರಣ, ಚೆನ್ನೈ ಸೂಪರ್ ಕಿಂಗ್ಸ್ ವೇಗಿ ದೀಪಕ್ ಚಹರ್, ಐಪಿಎಲ್ ಸೀಸನ್ 15ರಿಂದ ರೂಲ್ಡ್ ಔಟ್ ಆಗಿದ್ರು. ಇದೀಗ ಇಂಜುರಿಯಿಂದ ಚೇತರಿಸಿಕೊಂಡಿರೋ ಟೀಮ್ ಇಂಡಿಯಾ ವೇಗಿ, ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಶುರು ಮಾಡಲು ರೆಡಿಯಾಗಿದ್ದಾರೆ. ಸಿಂಗಲ್ ಲೈಫ್ಗೆ ಗುಡ್ ಬೈ ಹೇಳಿ, ತಮ್ಮ ಬಹುಕಾಲದ ಗೆಳತಿ ಜಯಾ ಭಾರಧ್ವಜ್ ಜೊತೆ ಸಪ್ತಪದಿ ತುಳಿಯಲು, ಚಹರ್ ತುದಿಗಾಲಲ್ಲಿ ನಿಂತಿದ್ದಾರೆ.
ಪ್ರೇಮಸೌಧದ ನಗರ ಆಗ್ರಾದಲ್ಲಿ ನಡೆಯಲಿದೆ ಅದ್ಧೂರಿ ವಿವಾಹ..!
ಯೆಸ್..! ಉತ್ತರಪ್ರದೇಶದ ತಾಜ್ಮಹಲ್ ಸಿಟಿ ಆಗ್ರಾ, ದೀಪಕ್ ಚಹರ್- ಜಯಾ ಭಾರಧ್ವಜ್ರ ವೈಭವೋಯುತ, ಅದ್ಧೂರಿ ವಿವಾಹಕ್ಕೆ ಸಾಕ್ಷಿಯಾಗಲಿದೆ. ಆಗ್ರಾದ ಫೈವ್ ಸ್ಟಾರ್ ಹೋಟೆಲ್ವೊಂದರಲ್ಲಿ, ಝಗಮಗಿಸೋ ಲೈಟಿಂಗ್ಸ್, ಕಲರ್ಫುಲ್ ಸೆಟ್ನಲ್ಲಿ ಚಹರ್- ಜಯಾ, ಕಲ್ಯಾಣ ನಡೆಯಲಿದೆ. ಈ ಹೈ ಪ್ರೋಫೈಲ್ ಮದುವೆಗಾಗಿ ಈಗಾಗಲೇ ಪ್ರಿಪರೇಷನ್ಸ್ ಭರ್ಜರಿಯಾಗಿ ನಡೀತಿವೆ. ಈ ಮದುವೆಗೆ ಸಂಬಂಧಿಸಿದ Invitation Card ಕೂಡ, ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಹರ್ ಮದುವೆಗೆ ಆಗಮಿಸಲಿದ್ದಾರೆ ಟೀಮ್ ಇಂಡಿಯಾ ಹಾಲಿ- ಮಾಜಿ ನಾಯಕರು..!
ಚಹರ್- ಜಯಾ ಮದುವೆಗೆ ಕ್ರಿಕೆಟ್ ಹಾಗೂ ಬಾಲಿವುಡ್ ಲೋಕದಿಂದ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ-ರಿತಿಕಾ, ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ, ಎಂ.ಎಸ್ ಧೋನಿ- ಸಾಕ್ಷಿ ದಂಪತಿಗಳು, ಮದುವೆಗೆ ಹಾಜರಾಗಿ ನ್ಯೂ ಕಪಲ್ಗೆ ವಿಶ್ ಮಾಡಲಿದ್ದಾರೆ.
ಗ್ರೌಂಡ್ನಲ್ಲೇ ಜಯಾಗೆ ಪ್ರಪೋಸ್ ಮಾಡಿದ್ದ ಚಹರ್..!
ಕಳೆದ ವರ್ಷ ಅಂದ್ರೆ, ಐಪಿಎಲ್ ಸೀಸನ್ 14ರ ವೇಳೆ ದೀಪಕ್ ಚಹರ್, ಪಂದ್ಯದ ನಂತ್ರ ಗ್ಯಾಲರಿಯಲ್ಲಿ ಜಯಾಗೆ ಪ್ರಪೋಸ್ ಮಾಡಿದ್ರು. ಕ್ರೀಡಾಂಗಣದಲ್ಲಿದ್ದ ಸಾವಿರಾರು ಅಭಿಮಾನಿಗಳು, ಟಿವಿ ಮುಂದೆ ಕೋಟ್ಯಂತರ ಫ್ಯಾನ್ಸ್ ಮುಂದೆಯೇ ಚಹರ್, ಫಿಲ್ಮಿ ಸ್ಟೈಲ್ನಲ್ಲಿ ಮಂಡಿಯೂರಿ ಜಯಾಗೆ, ಉಂಗುರ ನೀಡ್ತಾ ನನನ್ನ ಮದುವೆಯಾಗ್ತೀಯಾ ಎಂದು ಕೇಳಿಕೊಂಡಿದ್ರು. ಚಹರ್ ಪ್ರೇಮ ನಿವೇದನೆಗೆ ಒಂದು ಕ್ಷಣವೂ ಯೋಚಿಸದೇ, ಜಯಾ ಗ್ರೀನ್ ಸಿಗ್ನಲ್ ನೀಡಿದ್ರು. ಅಷ್ಟೇ ಅಲ್ಲ, ಚಹರ್ರನ್ನ ತಬ್ಬಿ ಮುದ್ದಾಡಿದ್ರು.
ಯಾರು ಚಹರ್ ಮದುವೆಯಾಗ್ತಿರೋ ಜಯಾ ಭಾರಧ್ವಜ್..?
ದೀಪಕ್ ಚಹರ್ಗೆ ಜಯಾ ಪರಿಚಯವಾಗಿದ್ದು, ನಟಿ ಕಮ್ ಮಾಡಲ್ ಆಗಿರೋ ಚಹರ್ ತಂಗಿ ಮಾಲತಿ ಚಹರ್ ಮೂಲಕ. ಆರಂಭದಲ್ಲಿ ಸ್ನೇಹಿತರಾಗಿದ್ದ ಇವರಿಬ್ಬರು, ನಂತರ ಲವ್ ಬರ್ಡ್ಸ್ಗಳಾಗಿ ಬದಲಾದ್ರು. ನಂತರ ಚಹರ್ ಜಯಾರನ್ನ ತಮ್ಮ ಕುಟುಂಬದವರಿಗೆ ಪರಿಚಯಿಸಿದ್ರು. ಜಯಾ ಮೂಲತಃ ಡೆಲ್ಲಿಯ ಬರಾಕಂಬ್ಗೆ ಸೇರಿದವರಾಗಿದ್ದು, ಸದ್ಯ ಒಂದು ಟೆಲಿಕಾಂ ಕಂಪನಿಯ ಡಿಜಿಟಲ್ ಹೆಡ್ ಆಗಿ ಕಾರ್ಯನಿರ್ವಹಿಸ್ತಿದ್ದಾರೆ. ಜಯಾ ಅಣ್ಣ ಸಿದ್ಧಾರ್ಥ್, ಹಿಂದಿ ಬಿಗ್ಬಾಸ್ನಲ್ಲಿ ಕಾಣಿಸಿಕೊಂಡಿದ್ರು.
ಒಟ್ಟಿನಲ್ಲಿ.. ಇಷ್ಟು ದಿನ ಸಿಂಗಲ್ ಆಗಿದ್ದ ಚಹರ್, ಇನ್ಮೇಲೆ ಜಯ ಜೊತೆ ಮಿಂಗಲ್ ಆಗಿ ಜೀವನ ನಡೆಸಲಿದ್ದಾರೆ. ಚಹರ್ ಮ್ಯಾರೇಜ್ ಲೈಫ್ ಅದ್ಭುತವಾಗಿರಲಿ. ಜಯಾ ಚಹರ್ ಬಾಳಲ್ಲಿ ಮತ್ತಷ್ಟು ಜಯ ತರಲಿ.
Congratulations Deepak Chahar sir wish u a happy marriage life
Deepak Chahar's wedding receptions Agra #DeepakChahar #wedding pic.twitter.com/Nbd05ZGyth— Sachin Sharma Official (@SharmaSachinji) May 31, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post