ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-15ನಲ್ಲಿ ಆನ್ಫೀಲ್ಡ್ನಲ್ಲಿ ಸೂಪರ್ ಪ್ಲಾಪ್. ಆದ್ರೆ, ಆಫ್ ದ ಫೀಲ್ಡ್ನಲ್ಲಿ ಮಾತ್ರ ಸೂಪರ್ ಹಿಟ್. ಮೈದಾನದಲ್ಲಿ ಆಟಗಾರನಾಗಿ ಕಳಪೆ ಪ್ರದರ್ಶನ ನೀಡಿದ ವಿರಾಟ್, ಮೈದಾನದಾಚೆ ಒಂದೇ ಒಂದು ಟ್ವೀಟ್ನಿಂದ, ದಾಖಲೆ ಬರೆದಿದ್ದಾರೆ.
ಶತಕ ಸಿಡಿಸಿದೇ, ಆಯ್ತು 2 ವರ್ಷ..! ಕನ್ಸಿಸ್ಟೆನ್ಸಿ ಅನ್ನೋದು ಇಲ್ಲವೇ ಇಲ್ಲ. ಹೊಸದಾಗಿ ಫೀಲ್ಡ್ಗೆ ಎಂಟ್ರಿ ಕೊಟ್ಟ ಬೌಲರ್ಗಳ ಎದುರು, ತಿಣುಕಾಟ. ಇದು ವಿರಾಟ್ ಕೊಹ್ಲಿ ಕಳೆದ 2 ವರ್ಷಗಳ ಕ್ರಿಕೆಟ್ನ ಕಥೆ.
ಕೊಹ್ಲಿ ಸಾಲು ಸಾಲು ಪ್ಲಾಫ್ ಶೋಗಳನ್ನ ನೀಡಿದ್ರೂ, ಪ್ರತಿ ಪಂದ್ಯ ಪ್ರತಿ ಸರಣಿ ಆರಂಭಕ್ಕೂ ಮುನ್ನ, ಕಮ್ಬ್ಯಾಕ್ ಮಾಡ್ತಾರೆ ಅನ್ನೋದು ಅಭಿಮಾನಿಗಳ ಆತ್ಮವಿಶ್ವಾಸವಾಗಿರುತ್ತೆ. ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಇದ್ದಿದ್ದು ಅದೇ. ಐಪಿಎಲ್ ಅಖಾಡದಲ್ಲಿ ವಿರಾಟ್ ಅಬ್ಬರಕ್ಕೆ, ಬೌಲರ್ಗಳು ಬೆಸ್ತು ಬೀಳ್ತಾರೆ ಅನ್ನೋದು, ಫ್ಯಾನ್ಸ್ ಆತ್ಮವಿಶ್ವಾಸವಾಗಿತ್ತು. ಆದ್ರೆ, ಐಪಿಎಲ್ನಲ್ಲೂ ಅದೇ ರಾಗ ಅದೇ ಹಾಡು..
16 ಇನ್ನಿಂಗ್ಸ್, 3 ಡಕೌಟ್, ಕೇವಲ 22.73ರ ಸರಾಸರಿ.!
ಸೀಸನ್-15 ಐಪಿಎಲ್ನಲ್ಲಿ ಕೊಹ್ಲಿ ಪ್ಲಾಫ್ ಶೋ ಬಗ್ಗೆ, ಹೆಚ್ಚು ವಿವರಣೆನೇ ಬೇಡ. 3 ಡಕೌಟ್, 22.73ರ ಎವರೇಜ್, ಎರಡೇ ಎರಡು ಹಾಫ್ ಸೆಂಚುರಿ ಇನ್ನಿಂಗ್ಸ್ಗಳೇ, ಕೊಹ್ಲಿ ಫಾರ್ಮ್ ಕಥೆಯನ್ನ ಹೇಳ್ತವೆ. ಕಳೆದ 2-3 ವರ್ಷದಿಂದ ರನ್ಮಷೀನ್ಗೇ ರನ್ ಬರ ಎದುರಾಗಿದೆ. ಹಾಗಂತ ಕೊಹ್ಲಿಯ ಹವಾ ಕಡಿಮೆ ಆಯ್ತಾ.? ನೋ ವೇ ಚಾನ್ಸೇ ಇಲ್ಲಾ..! ಕಿಂಗ್ IS ALLWAYS KING..!
ಮೈದಾನದಲ್ಲಿ ಸೂಪರ್ ಪ್ಲಾಫ್, ಮೈದಾನದಾಚೆ ಸೂಪರ್ ಹಿಟ್.!
ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಬರೀತಿದ್ದ ಡೆಲ್ಲಿ ಡ್ಯಾಶರ್, ಈ ಬಾರಿ ಪರದಾಟ ನಡೆಸಿದ್ದೇ ಹೆಚ್ಚು. ಹಾಗಿದ್ರೂ, ಕೊಹ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಅದು ಅನ್ ಫೀಲ್ಡ್ನಲ್ಲಿ ಅಲ್ಲ. ಆಫ್ ದ ಫೀಲ್ಡ್ನಲ್ಲಿ..! ಅದೂ ಕೇವಲ ಒಂದೇ ಒಂದು ಪದದ ಟ್ವೀಟ್ ಮೂಲಕ.
ಟ್ವೀಟ್ನಲ್ಲಿದ್ದಿದ್ದು ಒಂದು ಪದ, ರೀಟ್ವೀಟ್ ಆಗಿದ್ದು 27.8 ಸಾವಿರ..
ಡೆಲ್ಲಿ, ಮುಂಬೈ ನಡುವಿನ ಪಂದ್ಯ, ಆರ್ಸಿಬಿಯ ಪ್ಲೇ ಆಫ್ ಟಿಕೆಟ್ ಅನ್ನ ನಿರ್ಧರಿಸಿತು ಅನ್ನೋದು, ನಿಮಗೂ ತಿಳಿದಿದೆ. ಆ ಪಂದ್ಯದಲ್ಲಿ ಮುಂಬೈ ಗೆದ್ದ ಬಳಿಕ, ಆರ್ಸಿಬಿ ಪ್ಲೇ ಆಫ್ಗೆ ಪ್ರವೇಶ ಮಾಡಿ, ಎಲಿಮಿನೇಟರ್ನಲ್ಲಿ ಗೆದ್ದು, 2ನೇ ಕ್ವಾಲಿಫೈಯರ್ನಲ್ಲಿ ಸೋತು ಹೊರ ಬಿದ್ದಿದ್ದು, ಈಗ ಇತಿಹಾಸ.! ಆದ್ರೆ, ಅಂದು ಪ್ಲೇ ಆಫ್ ಟಿಕೆಟ್ ಕನ್ಫರ್ಮ್ ಆದ ಬೆನ್ನಲ್ಲೆ, ವಿಮಾನದ ಇಮೋಜಿ ಸಹಿತ ಕೊಲ್ಕತ್ತಾ ಎಂದು ಬರೆದು ವಿರಾಟ್, ಒಂದು ಟ್ವೀಟ್ ಮಾಡಿದ್ರು. ಅದಕ್ಕೆ ಮುಂಬೈ ಹಾಗೂ ಆರ್ಸಿಬಿಯ ಅಫಿಶಿಯಲ್ ಅಕೌಂಟ್ ಅನ್ನ ಟ್ಯಾಗ್ ಮಾಡಿದ್ರು. ಈ ಒಂದು ಟ್ವೀಟ್ ಬರೋಬ್ಬರಿ 27.8 ಸಾವಿರ ಬಾರಿ ರಿ ಟ್ವೀಟ್ ಆಗಿದೆ.
ಟ್ವಿಟರ್ ಸಂಸ್ಥೆ ಐಪಿಎಲ್ ಮುಗಿದ ಬೆನ್ನಲ್ಲೇ, ಟೂರ್ನಿ ನಡೆದ ದಿನಗಳ ಡಾಟಾ ಅನಾಲಿಸಿಸ್ ರಿಲೀಸ್ ಮಾಡಿದೆ. ಇದರಲ್ಲಿ ಕೊಹ್ಲಿ ಮಾಡಿದ್ದು ಒಂದು ಪದದ ಟ್ವೀಟ್, ಐಪಿಎಲ್ ಸೀಸನ್-15ನಲ್ಲಿ ಅತಿ ಹೆಚ್ಚು ಬಾರಿ ರೀ ಟ್ವೀಟ್ ಆದ ಟ್ವೀಟ್ ಅನ್ನೋದು, ರಿವೀಲ್ ಆಗಿದೆ. ಇನ್ನು ಅದೇ ಪಂದ್ಯ ಗೆದ್ದ ಬಳಿಕ, ಮುಂಬೈ ಇಂಡಿಯನ್ಸ್ ಮಾಡಿದ್ದ Retweet this, if the win made you happy! ಅನ್ನೋ ಟ್ವಿಟ್ 2ನೇ ಸ್ಥಾನದಲ್ಲಿದೆ. ಈ ಟ್ವೀಟ್ 25.4 ಸಾವಿರ ಬಾರಿ ರೀಟ್ವಿಟ್ ಆಗಿದೆ.
ಅದೇನೆ ಇರಲಿ ಫಾರ್ಮ್ನಲ್ಲಿಲ್ಲ. ಅಂದ ಮಾತ್ರಕ್ಕೆ ಕಿಂಗ್ ಕೊಹ್ಲಿಯ ಹವಾ ಕಿಂಚಿತ್ತೂ ಕುಂದಿಲ್ಲ ಅನ್ನೋದಕ್ಕೆ, ಇದೊಂದು ಬೆಸ್ಟ್ ಎಕ್ಸಾಂಪಲ್.! ಅಭಿಮಾನಿಗಳ ಈ ಲಾಯಲಿಟಿಗೆ, ಒಂದು ಸಲಾಂ ಹೇಳಲೇಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post