ಬೆಳಗಾವಿ: ಶಿವನ ವೇಷ ಹಾಕೊಂಡು ಪಾತ್ರ ಮಾಡುವ ಕಲಾವಿದರನ್ನು ನಾವು ನೋಡಿದಿವಿ. ಆದ್ರೆ ಇಲ್ಲೊಬ್ಬ ಕಲಾವಿದ ಶಿವನ ಪಾತ್ರಕ್ಕೆ ಜೀವಂತ ನಾಗರಹಾವನ್ನೇ ಕೊರಳಿಗೆ ಹಾಕಿಕೊಂಡು ಬರೋ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾನೆ.
ಬೆಳಗಾವಿಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಇಂಚಗೇರಿ ಮಠದ ಸಪ್ತಾಹ ಹಿನ್ನೆಲೆ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನವಾಗ್ತಿತ್ತು. ಇಲ್ಲಿ ನಾಟಕ ಪ್ರದರ್ಶನ ಮಾಡಲು ಬಂದ ಶಿವನ ಪಾತ್ರಧಾರಿ ಚರಂತಯ್ಯ, ಜೀವಂತ ನಾಗರಾಜನನ್ನೇ ಕೊರಳಿಗೆ ಹಾಕಿಕೊಂಡು ಬಂದಿದ್ದಾನೆ. ಇದನ್ನು ನೋಡಿದ ಸಹ ಕಲಾವಿದರು ಕೂಡ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಚರಂತಯ್ಯ ಕಳೆದ 30 ವರ್ಷಗಳಿಂದ ಬಸವೇಶ್ವರ ನಾಟಕದಲ್ಲಿ ಶಿವನ ಪಾತ್ರವನ್ನ ಮಾಡ್ತಿದ್ದು ವರ್ಷಗಳ ಅನುಭವ ಹೊಂದಿದ್ದಾರೆ. ಈಗ ಹಾವಿಗೆ ಹೆದರದೆ ಸಮರ್ಥವಾಗಿ ಶಿವನ ಪಾತ್ರ ನಿರ್ವಹಿಸಿದ್ದು, ಕೊರಳಲ್ಲಿದ್ದ ನಾಗರಾಜ ಮೈಮೇಲೆಲ್ಲಾ ಓಡಾಡಿದೆ. ಇದನ್ನ ಕಂಡು ನೆರೆದಿದ್ದ ಜನರು ಮೂಕವಿಸ್ಮಿತರಾಗಿದ್ದು ಸತ್ಯ. ಬಹುಶಃ ಇದನ್ನೇ ಪರಕಾಯ ಪ್ರವೇಶ ಅನ್ನೋದು ಅನ್ಸತ್ತೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post