ಟೆಸ್ಟ್ ತಂಡಕ್ಕೆ ಚೇತೇಶ್ವರ್ ಪೂಜಾರ ವಾಪಸ್ ಆಗಿರೋದ್ರಿಂದ ನನಗೆ ಅಭದ್ರತೆಯ ಭಾವ ಕಾಡುತ್ತಿಲ್ಲ. ನನ್ನನ್ನು ಯಾವುದೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ್ರೂ ಆಡಬಲ್ಲೇ ಎಂದು ಹನುಮ ವಿಹಾರಿ ಹೇಳಿದ್ದಾರೆ.
ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ಟೀಮ್ ಮ್ಯಾನೇಜ್ಮೆಂಟ್ ಇಚ್ಛೆಯಂತೆ ಆಡಲು ಸದಾ ನಾನು ಸಿದ್ಧ. ಕೆಳ ಕ್ರಮಾಂಕದಲ್ಲೂ ಆಡಲು ಸಿದ್ಧನಿದ್ದೇನೆ. ಒಂದೆಲ್ಲಾ ಒಂದು ದಿನ ನಾವು ಹೊಂದಿಕೊಳ್ಳಬೇಕು. ಸಂದರ್ಭಕ್ಕೆ ತಕ್ಕಂತೆ ನಾವು ಆಡಲು ಸಿದ್ಧನಿದ್ದೇನೆ ಎಂದಿದ್ದಾರೆ.
ಕಳಪೆ ಫಾರ್ಮ್ನಿಂದಾಗಿ ತವರಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಪೂಜಾರಾರನ್ನ ಕೈ ಬಿಡಲಾಗಿತ್ತು. ಪೂಜಾರ ಅಲಭ್ಯತೆಯಲ್ಲಿ ವಿಹಾರಿ ಮೂರನೇ ಕ್ರಮಾಂದದಲ್ಲಿ ಬ್ಯಾಟ್ ಬೀಸಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post