ಬಾಂಗ್ಲಾದೇಶದ ಪ್ರೈವೇಟ್ ಕೆಮಿಕಲ್ ಕಂಟೇನರ್ ಡಿಪೋ ಒಂದರಲ್ಲಿ ಭಯಾನಕ ಬೆಂಕಿ ದುರಂತ ಸಂಭವಿಸಿದೆ. ಘೋರ ಘಟನೆಯಲ್ಲಿ 40 ಮಂದಿ ಸಾವನ್ನಪ್ಪಿ 450ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ವರದಿಯಾಗಿದೆ.
ಬಾಂಗ್ಲಾದೇಶದ ಸೀತಾಕುಂಡದಲ್ಲಿರುವ ಡಿಪೋದಲ್ಲಿ ಕಳೆದ ರಾತ್ರಿ ಬೆಂಕಿ ಕಾಣಿಸಿಕೊಂಡು ಅನಾಹುತ ಸಂಭವಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಪೊಲೀಸರು ಮತ್ತು ಫೈರ್ ಸರ್ವೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 11.45ರ ಸುಮಾರಿಗೆ ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಜೋರಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಿಎಂ ಕಂಟೇನರ್ ಡಿಪೋವನ್ನ 2011 ರಲ್ಲಿ ಸ್ಥಾಪನೆ ಮಾಡಲಾಗಿತ್ತು. ಈ ಖಾಸಗಿ ಕಂಟೇನರ್ ಡಿಪೋ ಬಂಗಾಳ ಕೊಲ್ಲಿಯ ಕರಾವಳಿ ತೀರಕ್ಕೆ ಹೊಂದಿಕೊಂಡಿದೆ. ಸುಮಾರು 21 ಎಕರೆಯಲ್ಲಿ ಈ ಡಿಪೋ ಸ್ಥಾಪನೆ ಮಾಡಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post