ಬೆಂಗಳೂರು: ಪಿಎಸ್‌ಐ ಪರೀಕ್ಷೆಯಲ್ಲಿ ಕೋಟಿ ಕೋಟಿ ಬಾಚಲು ಕಿಂಗ್ಪಿನ್ಗಳು ಮಾಡಿದ್ದ ಖತರ್ನಾಕ್ ಪ್ಲಾನ್ಗಳು ಜಗಜ್ಜಾಹೀರಾಗಿದ್ದು, ಅಕ್ರಮ ಸಂಪತ್ತಿನ ಕೋಟೆ ಕಟ್ಟಿದ್ದ ಆರೋಪಿಗಳು ತನಿಖಾ ತಂಡದ ತೆಕ್ಕೆಗೆ ಬೀಳ್ತಿದ್ದಾರೆ. ಈ ನಡುವೆ ಸರ್ಕಾರ 2021ರಲ್ಲಿ ನಡೆದಿದ್ದ ಪರೀಕ್ಷೆಯನ್ನ ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲು ಸಜ್ಜಾಗಿದೆ. ಈ ನಡುವೆ ಸರ್ಕಾರವನ್ನ ಒತ್ತಡಕ್ಕೆ ಸಿಲುಕಿಸುವ ಕಾರ್ಯ ನಡೆಸಲಾಗುತ್ತಿದೆ, ಪಿಎಸ್‌ಐ ಪರೀಕ್ಷೆ ಅಕ್ರಮದ ಸಂಪೂರ್ಣ ತನಿಖೆ ಮುಗಿಯುವ ಮುನ್ನವೇ ಒತ್ತಡ ಶಾಸಕರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿತ್ತು. ಇದರಲ್ಲಿ ಕುಡಚಿ ಶಾಸಕ ಪಿ.ರಾಜೀವ್ ಅವರ ಹೆಸರು ಕೇಳಿ ಬಂದಿತ್ತು.
ಸದ್ಯ ಈ ಬೆಳವಣಿಗೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಎಲ್ಲಾ 9 ಶಾಸಕರೂ ಸಹ ಸ್ವಯಂಪ್ರೇರಿತವಾಗಿ ಪತ್ರ ಬರೆದಿಲ್ಲ. ಯಾರೋ ಬರೆದು ತಂದ ಪತ್ರಕ್ಕೆ ನೋಡದೇ ಶಾಸಕರು ಸಹಿ ಹಾಕಿದ್ದಾರಾ ಎಂದ ಪ್ರಶ್ನೆ ಉದ್ಭವಿಸಿದೆ. ಹೌದು, ನ್ಯೂಸ್ ಫಸ್ಟ್ಗೆ ಶಾಸಕ ಪಿ.ರಾಜೀವ್ ಅವರ ಆಪ್ತ ಸಹಾಯಕ ಮಾತನಾಡಿರುವ ಲಭ್ಯವಾಗಿದ್ದು, ಯಾರೋ ಬರೆದು ತಂದ ಪತ್ರಕ್ಕೆ ನೋಡದೇ ಶಾಸಕರು ಸಹಿ ಹಾಕಿದ್ದಾರಾ ಎಂಬ ಅನುಮಾನ ಸಾಧ್ಯ ಎದುರಾಗಿದೆ. ಏಕೆಂದರೆ ಎಲ್ಲಾ 9 ಶಾಸಕರ ಪತ್ರ ಒಂದೇ ಫಾರ್ಮೆಟ್ನಲ್ಲಿದ್ದು, ಒಂದೇ ಒಂದು ಅಕ್ಷರ ಅಥವಾ ಪ್ಯಾರಾ ಸಹ ಬದಲಾವಣೆ ಆಗಿಲ್ಲ. ಅಲ್ಲದೇ ಪಿ.ರಾಜೀವ್ ಅವರ ಪಿಎ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಪ್ರಸ್ತಾಪ ಮಾಡಲಾಗಿದೆ. ಪ್ರಕರಣವನ್ನು ಬೆಳಕಿಗೆ ತಂದ ರವಿಶಂಕರ್ ಎಂಬವರು ಶಾಸಕರ ಆಪ್ತ ಸಹಾಯಕರೊಂದಿಗೆ ಮಾತನಾಡಿದ ಆಡಿಯೋ ಎನ್ನಲಾಗಿದೆ.
ಇದನ್ನೂ ಓದಿ: PSI ನೇಮಕಾತಿ ಪರೀಕ್ಷೆ ಅಕ್ರಮ; ಗೃಹ ಸಚಿವರಿಗೆ ಪತ್ರ ಬರೆದ ಮೂರು ಪಕ್ಷದ 9 ಶಾಸಕರು
ಶಾಸಕರ ಪಿಎ- ರವಿಶಂಕರ್ ಆಡಿಯೋ ಸಂಭಾಷಣೆಯಲ್ಲಿ ಏನಿದೆ..?
ಶಾಸಕ ಪಿ.ರಾಜೀವ್ ಪಿಎ: ತಗೊಳ್ಳಪ್ಪ ಅಂತ ಲೆಟರ್ ಕೊಟ್ರು..ಸಾಹೇಬ್ರು ಲೆಟರ್ ಡ್ರಾಫ್ಟ್ ಮಾಡಿಸಿದ್ದಲ್ಲ.. ಅವರಿಗೆ ಏನು ಬೇಕೋ ಮನಸಿಗೆ ಬಂದಂಗೆ ಬರೆಸಿಕೊಂಡ್ರು. ಸೈನ್ ಮಾಡಿಸಿಕೊಂಡು ಹೋದ್ರು ಅಷ್ಟೆ.
ರವಿಶಂಕರ್: ಅಂದ್ರೆ ನಮ್ಮ ರಾಜೀವ್ ಸಾಹೇಬ್ರು ಏನು.. ಬರೆದಿಲ್ಲ ಅಲ್ಲ ಸಾರ್ ಅದು
ಶಾಸಕ ಪಿ.ರಾಜೀವ್ ಪಿಎ: ಸಾಹೇಬ್ರು ಮ್ಯಾಟರ್ ಬರೆದಿದ್ದಲ್ಲ ಇದು..ಒಂದ್ 60 ಜನ ಬಂದಿದ್ರು..ಅವರು ತಗೊಂಡ್ ಹೋದ್ರು ಅಷ್ಟೆ.
ರವಿಶಂಕರ್: ಹುಂ ಸಾರ್….
ಶಾಸಕ ಪಿ.ರಾಜೀವ್ ಪಿಎ: ಸರ್.. ಹಿಂಗೆ ಲೆಟರ್ ಕೊಡಿ ಹಂಗೆ ಇಂಗೆ ಅಂದ್ರು.. ಆಯ್ತು ಅಂತ ತಗೊಂಡ್ ಹೋಗಪ್ಪ.. ಏನಾದ್ರು ಮಾಡಪ್ಪ ಅಂತ ಸುಮ್ಮನಾಗಿಬಿಟ್ರು ಸಾಹೇಬ್ರು.
ರವಿಶಂಕರ್: ಸಾಹೇಬ್ರು ಅವರಿಗೆ ಏನ್ ಹೇಳಿಲ್ಲವೇನ್ರಿ..
ಶಾಸಕ ಪಿ.ರಾಜೀವ್ ಪಿಎ: ಏನೂ ಹೇಳಿಲ್ಲ..
ರವಿಶಂಕರ್: ಅಂದ್ರೆ ಅಳಕ್ಕತ್ತುಬಿಟ್ಟಿದ್ರಾ ಅವರು
ಶಾಸಕ ಪಿ.ರಾಜೀವ್ ಪಿಎ: ಹಾಂ.. ಬಹಳ ಜನ ಬಂದಿದ್ರು..ಕಷ್ಟಪಟ್ಟು ಎಕ್ಸಾಂ ಬರೆದಿದ್ದೀವಿ ಸಾರ್.. ನಾವು ಹೆಂಗೆ? ನಮ್ದಿಲ್ಲ ನಮಗೆ ಏಜ್ ಬಾರ್ ಆಗ್ಬಿಡ್ತಿದೆ.. ಅಟ್ಲಿಸ್ಟ್ ಹಿಂಗಾದ್ರೂ ಲೆಟರ್ ಕೊಟ್ರೆ ಏನಾದ್ರೂ ಮಾಡಿಸಿಕೊಂಡ್ ಫಾಲೋ ಮಾಡ್ಕೊತಿವಿ ಸರ್ ಅಂದಿದ್ರು.
ರವಿಶಂಕರ್: ಹುಂ ಹುಂ..
ಶಾಸಕ ಪಿ.ರಾಜೀವ್ ಪಿಎ: ಅದಕ್ಕೆ ಇನ್ನೇನ್ ಮಾಡೋದು ಅಂತ, ಆಯ್ತು ತಗೊಳ್ಳಪ್ಪ.. ನೀವೇ ಏನಾದ್ರೂ ಮಾಡ್ಕೊಳಿ ಅಂತ ಸುಮ್ಮನಾಗಿಬಿಟ್ರು ಸಾಹೇಬ್ರು
ರವಿಶಂಕರ್: ಹೌದೇನ್ ಸರ್..
ಶಾಸಕ ಪಿ.ರಾಜೀವ್ ಪಿಎ: ಸಪರೇಟ್ ಮಾತಾಡ್ಬಿಟ್ಟು, ಇವ್ರೇ ತಗೊಂಡ್ ಹೋಗಿ ಅಂದಿದ್ರೆ ತಪ್ಪಾಗೋದು..
ರವಿಶಂಕರ್: ಹೌದೌದು ಕರೆಕ್ಟ್
ಶಾಸಕ ಪಿ.ರಾಜೀವ್ ಪಿಎ: ಸಾಹೇಬ್ರು.. ಲೆಟರ್ ಕೊಟ್ರು. ನೀವೇನಾದ್ರೂ ಮಾಡ್ಕೊಳ್ಳಿಯಪ್ಪ.. ನನ್ ಹತ್ರ ಬರಬೇಡಿ ಅಂತ ಹೇಳಿದ್ದಾರೆ.
ರವಿಶಂಕರ್: ಓಕೆ.. ಓಕೆ..
ಶಾಸಕ ಪಿ.ರಾಜೀವ್ ಪಿಎ: ಸಾಹೇಬ್ರು ಇದು ಮಾಡಿದ್ದನ್ನ ಯಾವತ್ತೂ ಹೇಳೋಕ್ಕೊಗಲ್ಲ, ಯಾರ್ ಹತ್ರನೂ ಹೇಳೋಕೆ ಹೋಗಲ್ಲ.. ಅಷ್ಟ್ ಮಾತ್ರ ಹೇಳಿದ್ರೂನು ನಾವೇ ಹೇಳೋಕೆ ಹೋಗ್ಬೇಡಿ ಅಂತ ತಡೀತಿವಿ ನಾವೇ ಸಾಹೇಬ್ರನ್ನ.
ರವಿಶಂಕರ್: ಹುಂ ಸರ್.. ಹುಂ ಸರ್..
ಶಾಸಕ ಪಿ.ರಾಜೀವ್ ಪಿಎ: ತಪ್ಪಾಗುತ್ತೆ ಅದು.. ಈಗ ನಾವೇ ಬಯಲಿಗೆಳೆದು ಬಿಟ್ಟು.. ಎಲ್ಲರಿಗೂ ಹೊರಗೆ ಹಾಕ್ಬಿಟ್ಟು.. ಎಕ್ಸಾಂ ಕ್ಯಾನ್ಸಲ್ ಮಾಡಿ, ರೀಎಕ್ಸಾಂ ಬರೆಸಿ ಅಂತ ನಾವೇ ಹೇಳ್ಬಿಟ್ಟು ನಮ್ಮೋರಿಗೆ ನಾವೇ ಹಿಂಗೆ ಕೊಡಿ ಸರ್ ಅಂದ್ರೆ ತಪ್ಪಾಗುತ್ತೆ
ರವಿಶಂಕರ್; ಇನ್ನೊಂದೇನ್ ಅಂದ್ರೆ ಸರ್, ಅಕ್ರಮ ತೆಗೆದಿದ್ದು ನಾನೇ ಸರ್..ದಾಖಲೆಗಳನ್ನ ತಗೊಂಡ್ ಹೋಮ್ ಮಿನಿಸ್ಟರ್ಗೆ ಕೊಟ್ಟು.. ರವಿಶಂಕರ್ ಅಂತ ನಾನು
ಶಾಸಕ ಪಿ.ರಾಜೀವ್ ಪಿಎ: ತಪ್ಪು ಮಾಡಿದಾರೆ ಅದು ತಪ್ಪು. ಸುಮ್ನೆ ಏನ್ ಮಾಡೋಕ್ಕಾಗುತ್ತೆ ಸರ್.. 60 ಮಂದಿ ಬಂದುಬಿಟ್ಟು, ಗೋಳೋ ಅಂತಿದ್ರು.. ಇನ್ನೇನ್ ಮಾಡೋಕ್ಕಾಗುತ್ತೆ ಸಾಹೇಬ್ರು ಅಷ್ಟ್ ಜನ ಬಂದ್ಮೇಲೆ. ಆಯ್ತು ಲೆಟರ್ ಕೊಟ್ಟು ಕಳಿಸಿ ಅಂತ ಅಂದ್ರು..
ರವಿಶಂಕರ್; ಹೌದು ಹೌದು. ಕರೆಕ್ಟ್ ಐತೆ ಬಿಡ್ರಿ. ಆ ಲೆಟರ್ನಿಂದಾನೂ ಏನೂ ಆಗಲ್ಲ.
ಶಾಸಕ ಪಿ.ರಾಜೀವ್ ಪಿಎ: ಹಂಗಾಂಗಿದ್ರೆ, ಯಾರೂ ಇರಂಗೆ ಇರಲಿಲ್ಲ ಇಲ್ಲಿ.
ರವಿಶಂಕರ್: ಹಃ ಹಃ. ಹೌದು ಸರ್ ಹೌದು. ಕರೆಕ್ಟ್ ಐತೆ
ಶಾಸಕ ಪಿ.ರಾಜೀವ್ ಪಿಎ: ಏನ್ ಮಾಡೋದು ಸಮಾಧಾನಕ್ಕೋಸ್ಕರ.. ಮತ್ತೆ ಇವ್ರು ಸಮಾಜದವರು ಬಂದಿದ್ರು ಯಾಱರೋ ಬಂದಿದ್ರು. ಮತ್ತೆ ಏನೂ ಹೇಳೋಕ್ಕಾಗಲ್ಲ ಅಂತ. ಆಯ್ತು ತಗೊಳ್ಳಪ್ಪ ಅಂತ ಹೇಳ್ಬಿಟ್ಟು ಕೊಟ್ಟು ಕಳಿಸಿದ್ರು.
ರವಿಶಂಕರ್: ಓ ಹಿಂಗೇನು..
ಶಾಸಕ ಪಿ.ರಾಜೀವ್ ಪಿಎ: ಸಾಹೇಬ್ರು ಕೂಡ ಇದರಲ್ಲಿ ಏನು ಮ್ಯಾಟರ್ ಏನಿದೆ ಅಂತಾನೂ ಓದಲಿಲ್ಲ.. ಏನೂ ಬರೆದಿದೆ ಅಂತ.
ರವಿಶಂಕರ್: ಅದೇ
ಶಾಸಕ ಪಿ.ರಾಜೀವ್ ಪಿಎ: ಯಾವ ರೀತಿ ಬರೆದಿದ್ದಾರೆ ಏನೂ ಬರೆದಿದ್ದಾರೆ ಅಂತ ಏನೂ ಓದ್ಲಿಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post