ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್, ಕ್ರಿಕೆಟ್ನಿಂದ ಮಾತ್ರವಲ್ಲ.! ನೇರ ನುಡಿ, ವಿವಾದಗಳ ಮೂಲಕವೂ ಹೆಚ್ಚು ಪರಿಚಿತ. ಇದೀಗ ಗಂಬೀರ್ ಮತ್ತೊಂದು ವಿಚಾರದಿಂದ ಫ್ಯಾನ್ಸ್ಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಅಂದು ಗಂಭೀರ್ರನ್ನ ಟೀಕಿಸಿದವರು ಕೂಡ ಈಗ, ಶಹಬ್ಬಾಸ್ ಅಂತಿದ್ದಾರೆ.
ಗೌತಮ್ ಗಂಭೀರ್..! ಭಾರತೀಯ ಕ್ರಿಕೆಟ್ ಜಗತ್ತು ಕಂಡ ಆ್ಯಂಗ್ರಿ ಯಂಗ್ ಮ್ಯಾನ್, ಒನ್ ಆಫ್ ದಿ ಬೆಸ್ಟ್ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್. ಆರಂಭಿಕರಾಗಿ ಫೀಲ್ಡ್ಗಿಳಿಯುತ್ತಿದ್ದ ಗಂಭೀರ್, ಸೆಹ್ವಾಗ್ರಂತೆ ಡೇರಿಂಗ್ ಆ್ಯಂಡ್ ಡ್ಯಾಶಿಂಗ್ ಬ್ಯಾಟಿಂಗ್ ಮೂಲಕ ಅಬ್ಬರಿಸ್ತಿರಲಿಲ್ಲ. ಹಿಟ್ಮ್ಯಾನ್ ರೋಹಿತ್ ಶರ್ಮಾರಂತೆ ಎದುರಾಳಿಗಳು ಬೆಚ್ಚಿ ಬೀಳುವಂತೆ ಆರ್ಭಟಿಸ್ತಿರಲಿಲ್ಲ..! ಆದ್ರೆ, ಸೈಲೆಂಟಾಗೇ ಬ್ಯಾಟ್ ಬೀಸಿ, ತಂಡದ ಗೆಲುವಿನ ರೂವಾರಿಯಾಗ್ತಿದ್ರು.
ಟೀಮ್ ಇಂಡಿಯಾ ಚೊಚ್ಚಲ ಟಿ-20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಗಂಭೀರ್ ಪಾತ್ರ ಮಹತ್ವದ್ದು. ಈ ಎರಡು ಟೂರ್ನಿಗಳ ಫೈನಲ್ ಕಾದಾಟದಲ್ಲಿ ಗಂಭೀರ್ರದ್ದೇ, ಹೈಯೆಸ್ಟ್ ಸ್ಕೋರ್. ಅದ್ರಲ್ಲೂ, 2011ರ ವಿಶ್ವಕಪ್ ಫೈನಲ್ನಲ್ಲಿ 97 ರನ್ ಸಿಡಿಸಿ, ಭಾರತ 2ನೇ ಬಾರಿ ವಿಶ್ವಕಪ್ ಎತ್ತಹಿಡಿಯುವಲ್ಲಿ ಗಂಭೀರ್ ಪ್ರಮುಖ ಪಾತ್ರವಹಿಸಿದ್ರು. ಆದ್ರೆ, ಇಷ್ಟೆಲ್ಲಾ ಇದ್ರೂ, ಗಂಭೀರ್ ಹೆಚ್ಚು ಸುದ್ದಿಯಾಗಿದ್ದು ಮಾತ್ರ ವಿವಾದಗಳ ಮೂಲಕ.
ಹೆಸರಿಗೆ ತಕ್ಕಂತೆ ಗಂಭೀರ ವ್ಯಕ್ತಿತ್ವದ ಗಂಭೀರ್, ತಮ್ಮ ಖಡಕ್ ಮಾತುಗಳಿಂದಲೇ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಆದ್ರೆ, ಯಾವುದಕ್ಕೂ, ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಗಂಭೀರ್, ತಮಗನ್ನಿಸದ್ದನ್ನು ನೇರವಾಗಿ ಹೇಳ್ತಾರೆ. ಹಾಗಂತ, ಗಂಭೀರ್, ಬರಿ ವಿವಾದಗಳಿಂದಷ್ಟೇ ಅಲ್ಲ, ಸಮಾಜಮುಖಿ ಕಾರ್ಯ, ಸೇವೆಗಳ ಮೂಲಕವೂ ಸುದ್ದಿಯಾಗಿದ್ದಾರೆ. ಸಾವಿರಾರು ಜನರ ಪಾಲಿಗೆ ಅಕ್ಷರಶಃ ದೇವರಾಗಿದ್ದಾರೆ.
ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಸಂಸದರಾಗಿರೋ ಗಂಭೀರ್, ರಾಜಕಾರಣಕ್ಕಿಂತ ಹೆಚ್ಚಾಗಿ, ಕ್ರಿಕೆಟ್ ಫೀಲ್ಡ್ನಲ್ಲೇ ಕಾಣಿಸಿಕೊಳ್ತಾರೆ. ಇದೇ ಕಾರಣಕ್ಕೆ ಸಾಕಷ್ಟು ಟೀಕೆಯನ್ನೂ ಗಂಭೀರ್ ಎದುರಿಸಿದ್ದಾರೆ. ಅದ್ರಲ್ಲೂ, ಮಿಲಿಯನ್ ಡಾಲರ್ ಟೂರ್ನಿ, ಐಪಿಎಲ್ನಲ್ಲಿ ಗಂಭೀರ್ ಗುರುತಿಸಿಕೊಂಡಿರೋದು ತೀವ್ರ ಟೀಕೆಗೆ ಗುರಿಯಾಗಿತ್ತು. MPಯಾಗಿ ಜನರ ಸಮಸ್ಯೆ, ಕಷ್ಟ ಪರಿಹರಿಸೋದು ಬಿಟ್ಟು, ದುಡ್ಡಿಗಾಗಿ ಐಪಿಎಲ್ನಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಇದೀಗ ತಮ್ಮ ವಿರುದ್ಧದ ಎಲ್ಲಾ ಟೀಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ.
ಐಪಿಎಲ್ ಆದಾಯದಿಂದ 5 ಸಾವಿರ ಜನರಿಗೆ ಊಟ..!
ಬಡವರ ಹಸಿವು ನೀಗಿಸಲು ಪ್ರತಿ ವರ್ಷ 2.7 ಕೋಟಿ ವೆಚ್ಚ..!
ಯೆಸ್, ಐಪಿಎಲ್ನಲ್ಲಿ ಕೋಟಿಗಟ್ಟಲೇ ಹಣಗಳಿಸೋ ಗಂಭೀರ್, ಆ ಹಣವನ್ನೆಲ್ಲಾ ಸಾವಿರಾರು ಜನರ, ಮೂರೊಪ್ಪತ್ತಿನ ಹೊಟ್ಟೆಪಾಡಿಗಾಗಿ ಮೀಸಲಿಟ್ಟಿದ್ದಾರೆ. ಐಪಿಎಲ್ನಿಂದ ಬರ್ತಿರೋ ಹಣದಲ್ಲಿ ಗಂಭೀರ್ ಒಂದಲ್ಲ, ಎರಡಲ್ಲ ಪ್ರತಿನಿತ್ಯ ಬರೋಬ್ಬರಿ 5 ಸಾವಿರ ಜನರ ಹಸಿವು ನೀಗಿಸುತ್ತಿದ್ದಾರೆ. ಈ ವಿಷ್ಯವನ್ನ ಖುದ್ದು ಗಂಭೀರ್ ರಿವೀಲ್ ಮಾಡಿದ್ದಾರೆ.
‘ಜನರಿಗಾಗಿ ಐಪಿಎಲ್, ನನಗಾಗಿಯಲ್ಲ’
‘ನಾನು ಐಪಿಎಲ್ನಲ್ಲಿ ಭಾಗಿಯಾಗಲು ಕಾರಣ ಇದೆ. ದೆಹಲಿಯಲ್ಲಿ ನಾನು ಪ್ರತಿನಿತ್ಯ ಐದು ಸಾವಿರ ಜನರಿಗೆ ನಿತ್ಯ ಊಟ ನೀಡುತ್ತಿದ್ದೇನೆ. ಇದಕ್ಕಾಗಿ ಪ್ರತಿ ತಿಂಗಳು ನನಗೆ 25 ಲಕ್ಷ ರೂಪಾಯಿ ಖರ್ಚಾಗುತ್ತೆ. ಅಂದ್ರೆ, ವರ್ಷಕ್ಕೆ 2.75 ಕೋಟಿ ಬೇಕಾಗುತ್ತೆ. 25 ಲಕ್ಷ ರೂಪಾಯಿ ವೆಚ್ಚದಲ್ಲಿ ಲೈಬ್ರರಿ ಕಟ್ಟಿಸಿದ್ದೇನೆ. ಈ ಹಣವನ್ನೆಲ್ಲಾ ನಾನೇ ಭರಿಸ್ತಿದ್ದೀನಿ. ಎಂಪಿ ಫಂಡ್ನಿಂದ ಬರೋ ಅನುದಾನದಿಂದ ನಾನು ನಡೆಸೋ ಅಡುಗೆ ಸಾಮಗ್ರಿಗಳನ್ನ ಖರೀದಿಸಲೂ ಆಗಲ್ಲ. ಇದೆಲ್ಲದಕ್ಕೆ ಖರ್ಚು ಮಾಡಲು, ನಮ್ಮ ಮನೆಯಲ್ಲಿ ಹಣ ಬೆಳೆಯೋ ಮರ ಇಲ್ಲ. ಇದಕ್ಕಾಗಿಯೇ ನಾನು ಐಪಿಎಲ್ನಲ್ಲಿ ಭಾಗಿಯಾಗಿದ್ದೇನೆ. ಇದರಿಂದ ನನಗೆ ನಾಚಿಗೆ ಆಗ್ತಿಲ್ಲ’
– ಗೌತಮ್ ಗಂಭೀರ್- ಟೀಮ್ ಇಂಡಿಯಾ ಮಾಜಿ ಆಟಗಾರ
ಈಗ ಮಾತ್ರವಲ್ಲ.., ತಾವು ಎಮ್.ಪಿ ಯಾಗೋಕು ಮೊದಲಿಂದಲೇ ದಿನಗೂಲಿ ನೌಕರರಿಗಾಗಿ ಉಚಿತವಾಗಿ ಊಟದ ವಿತರಣೆಯನ್ನ ಗಂಭೀರ್ ಮಾಡ್ತಿದ್ದಾರೆ. ಇದರ ಜೊತೆಗೆ ಹಲ ಸಮಾಜಮುಖಿ ಕಾರ್ಯಗಳಲ್ಲೂ ಭಾಗವಾಗಿದ್ದಾರೆ. ಮಹಾಮಾರಿ ಕೊರೊನಾ ಸಂಕಷ್ಟದಲ್ಲಿ ಗಂಭೀರ್, ತಮ್ಮ ಫೌಂಡೇಶನ್ ಮೂಲಕ, ಆಕ್ಸಿಜನ್ ಸಿಲಿಂಡರ್ಗಳನ್ನ ಪೂರೈಸಿದ್ರು. ಇನ್ನು ತೃತೀಯ ಲಿಂಗಿಗಳಂತೆ ಸೀರೆ ಉಟ್ಟು, ಬಿಂದಿ ಇಟ್ಟು ರಾಖಿ ಕಟ್ಟಿಸಿಕೊಂಡು ಅವರಿಗೆ ನೈತಿಕ ಬೆಂಬಲ ನೀಡಿದ್ರು. ಆ ಮೂಲಕ ಲಿಂಗ ತಾರತಮ್ಯದ ವಿರುದ್ಧವೂ ಧ್ವನಿ ಎತ್ತಿದ್ರು. ಹೀಗೆ ಹಲ ಸಮಾಜ ಸೇವೆಯನ್ನ ಗಂಭೀರ್ ಮಾಡುತ್ತಲೇ ಬಂದಿದ್ದಾರೆ.
ಗಂಭೀರ್, ಐಪಿಎಲ್ ಭಾಗವಾಗಿದ್ದಾಗ ಟೀಕಿಸಿದವರೇ, ಇದೀಗ ಮಹತ್ಕಾರ್ಯದ ಬಗ್ಗೆ ಕೇಳಿ, ಶಹಬ್ಬಾಸ್ ಅಂತಿದ್ದಾರೆ, ಅವ್ರ ಕಾರ್ಯವನ್ನ ಮೆಚ್ಚಿ ಕೊಂಡಾಡ್ತಿದ್ದಾರೆ. ಅದೇನೆ ಇರಲಿ ಬಡ ಜನರು, ಸಮಾಜದ ಬಗೆಗಿನ ಗಂಭೀರ್ ಕಾಳಜಿ ನಿಜಕ್ಕೂ ಪ್ರಶಂಸನೀಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post